ಶಿವಮೊಗ್ಗ: ಜಿಲ್ಲೆಯ ಸಾಗರದ ಹೋಟೆಲ್ ಉದ್ಯಮಿ ಇಕ್ಬಾಲ್ ಸಾಬ್ ಎಂಬುವವರು 2,600 ಬಡ ಕುಟುಂಬಗಳಿಗೆ ಶಾಸಕ ಹರತಾಳು ಹಾಲಪ್ಪನವರ ಮೂಲಕ ದಿನಸಿ ಕಿಟ್ ವಿತರಣೆ ಮಾಡಿದ್ದಾರೆ.
ಸಾಗರದ ಗ್ರೀನ್ ಎಂಬಾಸಿ ಹೋಟೆಲ್ನಲ್ಲಿ 15 ದಿನಗಳಿಗಾಗುವಷ್ಟು ದಿನಸಿ ಕಿಟ್ ನೀಡಿದರು. ಈ ವೇಳೆ ಮಾತನಾಡಿದ ಶಾಸಕರು, ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಾರೂ ಹಸಿವಿನಿಂದ ಇರಬಾರದು ಎಂದು ಅಕ್ಕಿ ವಿತರಣೆ ಮಾಡಿವೆ. ಮುಂದಿನ ತಿಂಗಳು ಕೇಂದ್ರ ಸರ್ಕಾರ ಅಕ್ಕಿಯನ್ನು ನೀಡಲಿದೆ. ಹಲವರಿಗೆ ಇನ್ನೂ ರೇಷನ್ ಕಾರ್ಡ್ ಸಿಕ್ಕಿಲ್ಲ. ರೇಷನ್ ಕಾರ್ಡ್ ಇಲ್ಲದವರಿಗೆ ಈ ರೀತಿ ದಿನಸಿ ಕಿಟ್ ನೀಡುತ್ತಿರುವುದು ಸಂತಸದ ವಿಚಾರ. ಇನ್ನು,ರಂಜಾನ್ ವೇಳೆಯಲ್ಲಿ ಇಕ್ಬಾಲ್ ಸಾಬ್ ಅವರು ಮಾಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.