ಶಿವಮೊಗ್ಗ: ವಿಪಕ್ಷ ನಾಯಕ ಸಿದ್ದರಾಮಯ್ಯನವರು ತಮ್ಮನ್ನು ಬಿಟ್ಟು ಉಳಿದ ಎಲ್ಲರನ್ನು ಟೀಕಿಸುತ್ತಾರೆ. ಎಲ್ಲರನ್ನು ಟೀಕೆ ಮಾಡುವಂತಹ ಯಾರಾದರೂ ರಾಜಕಾರಣಿ ಇದ್ದರೆ ಅದು ಸಿದ್ದರಾಮಯ್ಯನವರು ಒಬ್ಬರೇ.. ಎಲ್ಲದರಲ್ಲೂ ಸರಿ ಇರುವವರು ಸಿದ್ದರಾಮಯ್ಯನವರು ಮಾತ್ರ ಎಂದು ಅವರು ತಿಳಿದುಕೊಂಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಜಿ ಸಿಎಂರನ್ನು ಟೀಕಿಸಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಗೂತ್ತಾಗಿದೆ, ಕಾಂಗ್ರೆಸ್ ಹೇಗಿದ್ರು ಗೆಲ್ಲೋದಿಲ್ಲ, ಇಡೀ ದೇಶದಲ್ಲಿ ಕಾಂಗ್ರೆಸ್ ಕಳೆದು ಹೋಗಿದೆ. ನಾನು ಈಗ ನಾಲ್ಕು ಮಾತನ್ನು ಆಡೋಣ ಅಂತಾ ಮಾತನಾಡುತ್ತಿದ್ದಾರೆ ಎಂದರು.
ಸಿಐಡಿ ತನಿಖೆ ಮುಗಿದ ತಕ್ಷಣ ಪಿಎಸ್ಐ ಪರೀಕ್ಷೆ: ಪಿಎಸ್ಐ ಪರೀಕ್ಷೆ ಹಗರಣದ ಕುರಿತು ತನಿಖೆ ಮುಗಿಯುತ್ತಿದ್ದಂತಯೇ ಪರೀಕ್ಷಾ ದಿನಾಂಕ ತಿಳಿಸಲಾಗುವುದು. ಪ್ರಕರಣದಲ್ಲಿ ಅಮೃತ ಪಾಲ್ರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅವರನ್ನು ಸತತ 7 ಗಂಟೆ ವಿಚಾರಣೆ ನಡೆಸಲಾಗಿದೆ. ಸಿಐಡಿಯಲ್ಲಿ ಸರಿಯಾದ ಸಾಕ್ಷ್ಯಾಧಾರ ಸಿಗುವ ತನಕ ಮುಟ್ಟೋದಿಲ್ಲ. ಸಾಕ್ಷ್ಯಾಧಾರ ಸಿಕ್ಕರೆ ಬಿಡೋದಿಲ್ಲ ಎಂದರು.
ಪ್ರಕರಣದಲ್ಲಿ ಯಾರೇ ಭಾಗಿ ಆದರೂ ಶಿಕ್ಷೆ ಖಂಡಿತ : ಈ ಪ್ರಕರಣದಲ್ಲಿ ಪೊಲೀಸ್ ಡಿವೈಎಸ್ಪಿಗಳನ್ನು ಸಹ ಜೈಲಿಗೆ ಕಳುಹಿಸಲಾಗಿದೆ. ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರಿಗೆ ವಿನಾಯತಿ ನೀಡುವ ಪ್ರಶ್ನೆಯೇ ಇಲ್ಲ. ಪ್ರಕರಣದಲ್ಲಿ ಸರ್ಕಾರ ಸಿಐಡಿಗೆ ಸಂಪೂರ್ಣ ಸ್ವಾತಂತ್ರ ನೀಡಿದೆ. ಮುಂದೆ ಈ ರೀತಿ ತಪ್ಪು ಮಾಡುವವರು ಹತ್ತು ಸಲ ಯೋಚನೆ ಮಾಡಬೇಕು ಹಾಗೆ ಮಾಡಲಾಗಿದೆ. ಪರೀಕ್ಷೆಗಾಗಿ ಎರಡು ವರ್ಷ ತಮ್ಮ ಜೀವನ ಸವೆಸಿರುತ್ತಾರೆ. ಇದರಿಂದ ಅಂಥವರಿಗೆ ನ್ಯಾಯ ಸಿಗಬೇಕಿದೆ ಎಂದರು.
- " class="align-text-top noRightClick twitterSection" data="">
ಸೂಕ್ತ ಕ್ರಮ : ಮೊನ್ನೆ ಶಿವಮೊಗ್ಗದಲ್ಲಿ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದವನ್ನು ಬಂಧಿಸಲಾಗಿದೆ. ಪೊಲೀಸರು ಸೂಕ್ತ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಬಗ್ಗೆ ನಾನ್ಯಾಕೆ ಸಾಫ್ಟ್ ಕಾರ್ನರ್ ಆಗಲಿ : ಮಾಜಿ ಸಿಎಂ ಹೆಚ್ಡಿಕೆ