ETV Bharat / city

ಆರೋಪ ಮಾಡಿದ್ಕೂಡಲೇ ಸಾಬೀತಾದಂತಲ್ಲ.. ಯಾರ್‌ ಕೊಟ್ಟಿದ್ದು, ಯಾರ್‌ ತೆಗೆದ್ಕೊಂಡಿದ್ದೆಲ್ಲ ಸಾಬೀತಾಗ್ಬೇಕು, ಆಮೇಲೆ ಕ್ರಮ.. ಆರಗ - ಮುಖ್ಯಮಂತ್ರಿ ಅವರಿಂದ ತನಿಖೆಗೆ ಆಗ್ರಹ

ಕಾಂಗ್ರೆಸ್​ನವರು ಏನೋ ಹೇಳುತ್ತಾರೆ ಅಂತಾ ಯಾರನ್ನೂ ಅರೆಸ್ಟ್ ಮಾಡುವುದಕ್ಕೆ ಆಗುವುದಿಲ್ಲ. ತನಿಖೆ ನಂತರ ಪೊಲೀಸರು ಅವರ ಕಾರ್ಯ ಮಾಡುತ್ತಾರೆ. ಸಂತೋಷ್ ಡೆತ್ ನೋಟ್ ಬರೆದಿಟ್ಟಿರುವ ಬಗ್ಗೆ ನನಗೆ ತಿಳಿದಿಲ್ಲ. ಅವರು ಸೋಷಿಯಲ್ ಮೀಡಿಯಾದಲ್ಲಿ ಏನೋ ಮೆಸೇಜ್ ಹಾಕಿದ್ದರಂತೆ..

Home Minister Araga Jnanendra reaction about Santhosh Patil suicide in shimogga
ಗೃಹ ಸಚಿವ ಆರಗ ಜ್ಞಾನೇಂದ್ರ
author img

By

Published : Apr 12, 2022, 5:31 PM IST

ಶಿವಮೊಗ್ಗ : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಮುಖ್ಯಮಂತ್ರಿಗಳು ಎಲ್ಲಾ ರೀತಿಯಿಂದಲೂ ತನಿಖೆ ನಡೆಸಲು ತಿಳಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಶಿವಮೊಗ್ಗದಲ್ಲಿ ತಿಳಿಸಿದ್ದಾರೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಹೋಟೆಲ್​ನಲ್ಲಿ ಈಗ ತಾನೇ ತನಿಖೆ ಪ್ರಾರಂಭವಾಗಿದೆ ಎಂದರು.

ಅಲ್ಲಿನ ಪೊಲೀಸರು ಈಗಷ್ಟೆ ರೂಂ ಡೋರ್ ಓಪನ್ ಮಾಡುತ್ತಿದ್ದಾರೆ. ನಾನು ಅರ್ಧ ಗಂಟೆ ಮೊದಲು ಉಡುಪಿಯ ಎಸ್ಪಿ ಜೊತೆ ಮಾತನಾಡಿದ್ದೇನೆ. ಎಸ್ಪಿರವರು ಎಫ್​ಎಸ್​ಎಲ್​ನವರು ಹತ್ತು ನಿಮಿಷಕ್ಕೆ ಬರ್ತಾ ಇದ್ದಾರೆ. ಅವರು ಬಂದ ನಂತರ ಡೋರ್ ಓಪನ್ ಮಾಡುತ್ತೇವೆ ಎಂದು ತಿಳಿಸಿದ್ದರು.

ಸಂತೋಷ್ ಆತ್ಮಹತ್ಯೆ ಪ್ರಕರಣ.. ಸಿಎಂ ಎಲ್ಲಾ ರೀತಿಯಿಂದ್ಲೂ ತನಿಖೆ ನಡೆಸಲು ತಿಳಿಸಿದ್ದಾರೆಂದ ಗೃಹ ಸಚಿವ ಆರಗ ಜ್ಞಾನೇಂದ್ರ..

ಕಾಂಗ್ರೆಸ್​ನವರು ಏನೋ ಹೇಳುತ್ತಾರೆ ಅಂತಾ ಯಾರನ್ನೂ ಅರೆಸ್ಟ್ ಮಾಡುವುದಕ್ಕೆ ಆಗುವುದಿಲ್ಲ. ತನಿಖೆ ನಂತರ ಪೊಲೀಸರು ಅವರ ಕಾರ್ಯ ಮಾಡುತ್ತಾರೆ. ಸಂತೋಷ್ ಡೆತ್ ನೋಟ್ ಬರೆದಿಟ್ಟಿರುವ ಬಗ್ಗೆ ನನಗೆ ತಿಳಿದಿಲ್ಲ. ಅವರು ಸೋಷಿಯಲ್ ಮೀಡಿಯಾದಲ್ಲಿ ಏನೋ ಮೆಸೇಜ್ ಹಾಕಿದ್ದರಂತೆ. ನನ್ನ ಜೊತೆ ಇಬ್ಬರು ಸ್ನೇಹಿತರನ್ನು ಕರೆದುಕೊಂಡು ಬಂದಿದ್ದೇನೆ. ಅವ್ರಿಗೂ ನನ್ನ ಸಾವಿಗೂ ಸಂಬಂಧವಿಲ್ಲ. ಬೇರೆ ಏನನ್ನೂ ಬರೆದಿದ್ದಾನೆ ಅಂತಾ ಕೇಳಿದ್ದೇನೆ. ಆ ದೃಷ್ಟಿಯಿಂದಲೂ ತನಿಖೆ ನಡೆಯುತ್ತದೆ ಎಂದರು.

ಸರ್ಕಾರಕ್ಕೆ ಕೆಟ್ಟ ಹೆಸರು : ಕೆಟ್ಟ ಹೆಸರೋ, ಒಳ್ಳೆ ಹೆಸರೋ ಅಂತಾ ತನಿಖೆಯಿಂದ ಗೊತ್ತಾಗುತ್ತದೆ. ಯಾರೋ ಆರೋಪ ಮಾಡಿದ ಕೊಡಲೇ ಸಾಬೀತು ಆದ ಹಾಗಲ್ಲ. ಯಾರ್ ಕೊಟ್ಟಿದ್ದು, ಯಾರು ತೆಗೆದುಕೊಂಡಿದ್ದೆಂದು ಇದೆಲ್ಲಾ ಸಾಬೀತು ಆಗಬೇಕು. ಇದೆಲ್ಲಾ ಸಾಬೀತು ಆದರೆ ಅವರ ಮೇಲೆ ಕ್ರಮಕೈಗೊಳ್ಳಬಹುದು ಎಂದರು.

ಇದನ್ನೂ ಓದಿ: ವೈಯಕ್ತಿಕ ಸಾಲ, ಜಿಗುಪ್ಸೆ, ಕೌಟುಂಬಿಕ ಸಮಸ್ಯೆಗೂ ಗುತ್ತಿಗೆದಾರ ಆತ್ಮಹತ್ಯೆ ಮಾಡ್ಕೊಂಡಿರಬಹುದು.. ಈಶ್ವರಪ್ಪ ಪರ ಯತ್ನಾಳ್​ ಬ್ಯಾಟಿಂಗ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.