ETV Bharat / city

ಮಲೆನಾಡಿನಲ್ಲಿ ಮಳೆ ಆರ್ಭಟಕ್ಕೆ ಮನೆ ಕುಸಿದು ಮಹಿಳೆ ಬಲಿ

ಮಲೆನಾಡಿನಲ್ಲಿ ಸುರಿದ ಧಾರಾಕಾರ ಮಳೆಗೆ ಮನೆ ಕುಸಿದು ಭದ್ರಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

Home collapse lady dead
author img

By

Published : Sep 7, 2019, 6:11 PM IST

ಶಿವಮೊಗ್ಗ: ಮಲೆನಾಡಿನಲ್ಲಿ ಸುರಿದ ಧಾರಾಕಾರ ಮಳೆಗೆ ಜನರು ತಮ್ಮ ಮನೆ-ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಈಗ ಮತ್ತೆ ಹೆಚ್ಚಾದ ವರುಣನ ಅಬ್ಬರದಿಂದಾಗಿ ಮನೆ ಕುಸಿದು ಭದ್ರಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮದ ಮಹಿಳೆಯೊಬ್ಬರು ಅಸುನೀಗಿದ್ದಾರೆ.

ಉಮೇರ್ ಅಜುಂ (31) ಮೃತ ಮಹಿಳೆ. ಸಾವನ್ನಪ್ಪಿದ ಮಹಿಳೆಗೆ ಮೂವರು ಮಕ್ಕಳಿದ್ದಾರೆ. ಈಗವರು ತಬ್ಬಲಿಗಳಾಗಿದ್ದಾರೆ.

ಪತ್ನಿ ಕಳೆದುಕೊಂಡು ರೋದಿಸುತ್ತಿರುವ ಪತಿ ಜಾಫರ್ ಖಾನ್

ನಾಲ್ಕೈದು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದೆ. ಸೆಪ್ಟೆಂಬರ್​ 5ರಂದು ಮನೆ ಕುಸಿದ ಪರಿಣಾಮ ಮಹಿಳೆಯ ತಲೆಗೆ ಗಂಭೀರ ಗಾಯವಾಗಿತ್ತು. ಬಳಿಕ ಉಮೇರ್​ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಆದರಿಂದು ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಮೃತಪಟ್ಟಿದ್ದಾರೆ.

Home collapse lady dead
ಕುಸಿದ ಮನೆ

ಹಾಗೇ ಮೆನ ಕುಸಿದ ಸಂದರ್ಭದಲ್ಲಿ ಆಕೆಯ ಪತಿ ಜಾಫರ್ ಖಾನ್ ಅವರ ಕಾಲಿಗೂ ಗಾಯವಾಗಿತ್ತು. ಅದೃಷ್ಟಾವಶಾತ್​ ಮೂವರು ಮಕ್ಕಳಿಗೆ ಯಾವುದೇ ರೀತಿ ತೊಂದರೆಯಾಗಿರಲಿಲ್ಲ. ಮನೆ ಮತ್ತು ಮಡದಿ ಕಳೆದುಕೊಂಡು ಮೂವರು ಮಕ್ಕಳೊಂದಿಗೆ ತಬ್ಬಲಿಯಾದ ಕುಟುಂಬಕ್ಕೆ ಸರ್ಕಾರ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Intro:ಶಿವಮೊಗ್ಗ,
ಮಲೆನಾಡಿನಲ್ಲಿ ಸುರಿದ ಭಾರಿ ಮಳೆಗೆ ಅನೇಕ ಜನ ತಮ್ಮ ಮನೆ,ಮಠ, ಜಾನುವಾರುಗಳನ್ನ ಕಳೆದುಕೊಂಡು ಬಿದಿಗೆ ಬಂದರು. ಆದರೆ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮನೆ ಕುಸಿದು ಮನೆಯ ಮಹಾಲಕ್ಷ್ಮಿ ಯನ್ನೆ ಕಳೆದುಕೊಂಡ ಕುಟುಂಬವೊಂದು ಬಿದಿಗೆ ಬಂದಿದೆ ಹಾಗಾಂದ್ರೆ ಏನ್ ಈ ಸ್ಟೋರಿ ಅಂತಿರಾ

ಆ್ಯಂಕರ್

ಹೌದು ಮಲೆನಾಡಿನಲ್ಲಿ ಸುರಿದ ಭಾರಿ ಮಳೆಗೆ ಮನೆ ಕುಸಿದ ಪರಿಣಾಮವಾಗಿ ಭದ್ರಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮದ ಉಮೇರ್ ಅಜುಂ (೩೧) ಎಂಬ ಮಹಿಳೆ ಅಸುನಿಗಿದ್ದಾಳೆ .
ಕಳೆದ ನಾಲ್ಕೈದು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ಇದೆ ತಿಂಗಳು ಸೆ. ೫ ನೇ ತಾರೀಖು ಮನೆ ಕುಸಿದು ಮಹಿಳೆಗೆ ತಲೆಗೆ ಗಂಭೀರ ಗಾಯಗೊಂಡಿತ್ತು ಹಾಗೆ ಆಕೆಯ ಗಂಡ ಜಾಫರ್ ಖಾನ್ ಕಾಲಿಗೆ ಗಂಭಿರ ಗಾಯಗೊಂಡಿತ್ತು. ಅದರಂತೆ ಮಕ್ಕಳು ಪವಾಡಸದೃಶ್ಯ ರೀತಿಯಲ್ಲಿ ಪಾರಗಿದ್ದರು.ಗಂಭೀರ ಗಾಯಗೊಂಡಿದ್ದ ಮಹಿಳೆಗೆ ಶಿವಮೊಗ್ಗ ದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಗಾಗಿ ಕರೆದುಕೊಂಡು ಬರಲಾಗಿತ್ತು . ಆದರೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಗಾಗಿ ನಗರದ ಜಿಲ್ಲಾ ಮೆಗ್ಗನ್ ಆಸ್ಪತ್ರೆಗೆ ಮಹಿಳೆಯನ್ನ ಕಳಿಸಿಕೊಡಲಾಗಿತ್ತು ಆದರೆ ಇಂದು ಚಿಕಿತ್ಸೆ ಫಲಕಾರಿ ಯಾಗದೇ ಮಹಿಳೆ ಸಾವನ್ನಪ್ಪಿದ್ದಾಳೆ .
ಸಾವನ್ನಪ್ಪಿದ ಮಹಿಳೆಗೆ ಮೂರು ಜನ ಮಕ್ಕಳಿದ್ದು ಮಕ್ಕಳು ಈಗಾ ತಾಯಿ ಇಲ್ಲದ ತಬ್ಬಲಿಗಳಾಗಿದ್ದಾರೆ.

ಬೈಟ್- ಜಾಫರ್ ಖಾನ್ ಮೃತಳ ಗಂಡ

ಒಟ್ಟಾರೆ ಯಾಗಿ ಮಳೆಯಿಂದಾಗಿ ಮನೆ ಮತ್ತು ಮಡದಿ ಕಳೆದುಕೊಂಡು ಮೂರು ಜನ ಮಕ್ಕಳೊಂದಿಗೆ ತಬ್ಬಳಿಯಾದ ಕುಟುಂಬಕ್ಕೆ ಸರ್ಕಾರ ಸರಿಯಾದ ಪರಿಹಾರ ನೀಡಿ ಮನೆ ನಿರ್ಮಿಸಿಕೊಡಲಿ ಹಾಗೇಯೆ ಸಾವನ್ನಪ್ಪಿದ ಮಹಿಳೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂಬುವುದೆ ನಮ್ಮ ಆಶಯ

ಭೀಮಾನಾಯ್ಕ ಎಸ್ ಶಿವಮೊಗ್ಗ

Body:ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.