ಶಿವಮೊಗ್ಗ: ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬಿಜೆಪಿ ಬೆಂಕಿ ಹಚ್ಚುತ್ತಿದ್ರೆ, ಕಾಂಗ್ರೆಸ್ನ ಕೆಲವರು ಪೆಟ್ರೋಲ್ ಸುರಿಯುವ ಕಾರ್ಯ ಮಾಡುತ್ತಿದ್ದಾರೆಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಶಿವಮೊಗ್ಗದಲ್ಲಿ ನಡೆದ ಜೆಡಿಎಸ್ನ ಜಲಧಾರೆ ಕಾರ್ಯಕ್ರಮಕ್ಕೂ ಮುನ್ನ ಮಾತನಾಡಿ, ರಾಜ್ಯದಲ್ಲಿ ಶಾಂತಿ ಕಾಪಾಡಲು ಸರ್ಕಾರ ವಿಫಲವಾಗಿದೆ. ಈ ಘಟನೆಗಳ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದರು.
ಮಸೀದಿಯೆದುರು ಭಜನೆ ಕುರಿತು ಪ್ರತಿಕ್ರಿಯಿಸಿ, ಎಲ್ಲರೂ ಸುಪ್ರೀಂಕೋರ್ಟ್ ಆದೇಶದಂತೆ ನಡೆದುಕೊಳ್ಳಬೇಕಿದೆ. ಅಶಾಂತಿ ಸೃಷ್ಟಿಸುವವರನ್ನು ಮೊದಲು ಬಂಧಿಸಬೇಕಿದೆ. ನಾವೇನು ರಾಮನ ಭಕ್ತರಲ್ಲವೇ? ಇವರೇನು ರಾಮನನ್ನು ಗುತ್ತಿಗೆ ಪಡೆದು ಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು. ಜೊತೆಗೆ ಇತರೆ ಸಮಾಜದ ಆಚರಣೆಗೆ ನಾವೇಕೆ ಧಕ್ಕೆ ತರಬೇಕೆಂದರು.
ಈ ಸರ್ಕಾರ ಬಂದ ಮೇಲೆ 100ಕ್ಕೆ 65ರೂ. ಕಮಿಷನ್ ಏಜೆಂಟ್ಗೆ ಹೋಗುತ್ತಿದೆ. ಉಳಿದ 35ರಷ್ಟು ಮಾತ್ರ ಕೆಲಸ ನಡೆಸಲಾಗುತ್ತಿದೆ. ಅದಕ್ಕೆ ಒಂದು ವರ್ಷ ನಿಮ್ಮ ಕೆಲಸ ನಿಲ್ಲಿಸಿ ಎಂದು ಗುತ್ತಿಗೆದಾರರಿಗೆ ಹೇಳಿದ್ದೆ. ಗುತ್ತಿಗೆದಾರರೇ ನಿವೇಕೆ ಹಣ ನೀಡುತ್ತೀರಿ? ಹಣ ಕೊಟ್ಡರೆ ಯಾರು ಬೇಡ ಎನ್ನುತ್ತಾರೆ. ನೀವೇ ಅಲ್ಲವೇ ಪ್ರೇರೇಪಕರು ಎಂದು ಗುತ್ತಿಗೆದಾರರ ವಿರುದ್ದ ಗುಡುಗಿದರು. ಈಗ ಕಾಂಗ್ರೆಸ್ನವರು ಮಾತನಾಡುತ್ತಿದ್ದಾರೆ. ಅವರೇನು ಅಪ್ಪಟ ಚಿನ್ನವೇ? ಎಂದು ಕಿಡಿಕಾರಿದರು.
ಇದನ್ನೂ ಓದಿ: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ಗೆ ಚಾಲನೆ ನೀಡಲಿರುವ ಉಪರಾಷ್ಟ್ರಪತಿ
ನಾವು ಇದೇ ರಾಜ್ಯದಲ್ಲಿದ್ದುಕೊಂಡು ಏನೂ ಮಾಡಲು ಆಗುತ್ತಿಲ್ಲ. ಇನ್ನು ಆಪ್ ಪಕ್ಷ ಬಂದು ಏನ್ ಮಾಡುತ್ತದೆ ಅವರು ವ್ಯಂಗ್ಯವಾಡಿದರು.