ಶಿವಮೊಗ್ಗ: ನಗರದ ಆಲ್ಕೊಳ ಕೆರೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಆರೋಪಿಗಳನ್ನು ಬಂಧಿಸಿ, ಅವರ ಬಳಿ ಇದ್ದ 1 ಕೆ.ಜಿ 250 ಗ್ರಾಂ ಗಾಂಜಾವನ್ನು ಇಲ್ಲಿನ ಗ್ರಾಮಾಂತರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾದಕ ವಸ್ತು ಗಾಂಜಾ ಮಾರಾಟ ಹಾಗೂ ಸೇವನೆ ಮಾಡುವವರ ವಿರುದ್ಧದ ಕಾರ್ಯಾಚರಣೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಅವರನ್ನೊಳಗೊಂಡ ತಂಡವನ್ನು ಎಸ್ಪಿ ಲಕ್ಷ್ಮೀ ಪ್ರಸಾದ್ ರಚಿಸಿದ್ದಾರೆ. ಈ ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಗಾಂಜಾ ಮಾರುತ್ತಿದ್ದ ತರಿಕೆರೆಯ ಸದ್ದಾಂ(30), ಶಕೀಲ್(30), ಶಿವಮೊಗ್ಗ ಎಲ್ಬಿಎಸ್ ನಗರದ ಶ್ರೀಕಾಂತ್ ಅಲಿಯಾಸ್ ರೊನಾಲ್ಡೊ(24) ಮತ್ತು ವೆಂಕಟೇಶ ನಗರದ ಸಂತೋಷ್ (26) ರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಅತಿ ವೇಗ ತಂದ ಆಪತ್ತು.. ಕಾರು ಪಲ್ಟಿಯಾಗಿ ಯುವಕ ಸಾವು, ನಾಲ್ವರಿಗೆ ಗಾಯ..
ಈ ನಾಲ್ವರು ಬೈಕ್ನಲ್ಲಿ ಬಂದು ಕೆರೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದರು. ದಾಳಿಯ ವೇಳೆ ಪೊಲೀಸರು 45 ಸಾವಿರ ರೂ. ಮೌಲ್ಯದ 1 ಕೆ.ಜಿ 250 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ನಾಲ್ವರ ವಿರುದ್ಧ ಕಲಂ 8(c), 20(b) NDPS ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.