ETV Bharat / city

ಬಿಜೆಪಿಯ ಆ ನಾಲ್ವರು ಪಾಪಿಗಳು ಸೇರಿ ಬಿಎಸ್​​ವೈ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದರು: ಬೇಳೂರು - ಬೇಳೂರು ಗೋಪಾಲಕೃಷ್ಣ ಆರೋಪ

ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ಕೆ.ಎಸ್​​ ಈಶ್ವರಪ್ಪ, ಸಿ.ಟಿ ರವಿ, ಬಿ.ಎಲ್ ಸಂತೋಷ ಹಾಗೂ ಪ್ರಹ್ಲಾದ್​​ ಜೋಶಿ- ಈ ನಾಲ್ಕು ಜನರಿಂದ ಕುತಂತ್ರ- ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪ

Former MLA  Belur Gopalakrishna
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ
author img

By

Published : Jul 24, 2022, 2:45 PM IST

ಶಿವಮೊಗ್ಗ: ಬಿಜೆಪಿಯ ನಾಲ್ಕು ಜನ ಪಾಪಿಗಳು ಸೇರಿ ಬಿ.ಎಸ್​​ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದಾರೆ ಎಂದು ಸಾಗರ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪಿಸಿದರು.

ಶಿವಮೊಗ್ಗದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಮಾಜಿ ಸಚಿವ ಕೆ.ಎಸ್​​ ಈಶ್ವರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಈ ನಾಲ್ಕು ಜನರು ಸೇರಿ ಯಡಿಯೂರಪ್ಪ ಕುಟುಂಬವನ್ನು ತಗಿಬೇಕು ಅಂತಾ ಕಣ್ಣೀರು ಹಾಕಿಸಿ ರಾಜೀನಾಮೆ ನೀಡಿಸಿದರು. ಇವರಿಗೆ ಯಡಿಯೂರಪ್ಪರ ನೋವು, ಶಾಪ ತಟ್ಟದೆ ಬಿಡುವುದಿಲ್ಲ ಎಂದರು.

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪ

ಬಿಜೆಪಿಯವರೇ ಈಶ್ವರಪ್ಪ ಅವರಿಗೆ ಹೊಂಡ ತೆಗೆಯುತ್ತಾರೆ. ಈಶ್ವರಪ್ಪ ತಮ್ಮ ರಾಜಕೀಯ ನಾಯಕತ್ವ ಉಳಿಸಿಕೊಳ್ಳಲು ಮಾಡಿರುವ ಕುತಂತ್ರ ಇದು. ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ್​ ಕುಟುಂಬದ ಶಾಪ ಈಶ್ವರಪ್ಪನವರಿಗೆ ತಟ್ಟದೆ ಇರಲ್ಲ. ರಾಜ್ಯದಲ್ಲಿ ಅವರ ಸರ್ಕಾರ ಇದೆ. ಹಾಗಾಗಿ ಅವರಿಗೆ ಬೇಕಾದ ಹಾಗೇ ರಿಪೋರ್ಟ್ ಮಾಡಿಸಿಕೊಳ್ಳುತ್ತಾರೆ ಎಂದು ಬೇಳೂರು ಆರೋಪಿಸಿದರು.

ಸಂತೋಷ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಿ. ಹರ್ಷ ಒಬ್ಬನೇ ಹಿಂದೂ ನಾ?. ಸಂತೋಷ ಸಹ ಹಿಂದೂ ತಾನೆ. ಅಲ್ಲದೇ ಅವರ ಪಕ್ಷದ ಕಾರ್ಯಕರ್ತ ಸಹ. ಅವರಿಗೇಕೆ ಆರ್ಥಿಕ ಸಹಾಯ ಮಾಡಲಿಲ್ಲ ಎಂದು ಮಾಜಿ ಶಾಸಕರು ಪ್ರಶ್ನಿಸಿದರು.

ಧರ್ಮ ವಿರೋಧಿ ಹೇಳಿಕೆ ನೀಡುವವರನ್ನು ಬಂಧಿಸಲು ಕಠಿಣ ಕಾನೂನು ಜಾರಿಗೆ ತನ್ನಿ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಅಷ್ಟು ಹಾನಿಯಾದರೂ ಒಮ್ಮೆ ಮಾತ್ರ ಭೇಟಿ ನೀಡಿ ಹೋಗಿದ್ದಾರೆ. ಇವರಿಗೆ ಜನರ ಹಿತ ಮುಖ್ಯ ಅಲ್ಲ ಎಂದು ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.