ಶಿವಮೊಗ್ಗ: ಪ್ರಾಣ ಹೋದರೂ ಸಹ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಜಾರಿ ಮಾಡಲು ಬಿಡುವುದಿಲ್ಲ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಣ ಹೋದರೂ ಸಹ ಬಿಜೆಪಿ ಪಕ್ಷ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಜಾರಿ ಮಾಡಲು ಬಿಡುವುದಿಲ್ಲ. ಯಡಿಯೂರಪ್ಪನವರಿಗೆ ಭೂ ಸುಧಾರಣಾ ಕಾಯ್ದೆಯನ್ನ ತಿದ್ದುಪಡಿ ಮಾಡುವ ಇಚ್ಛಾಶಕ್ತಿ ಇದ್ದರೆ ಭೂ ಹಿಡುವಳಿ ಮಿತಿಯನ್ನ ಕಡಿತಗೊಳಿಸಲಿ. ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಕಾರ್ಪೋರೇಟರ್ಗಳಿಗೆ ಭೂಮಿ ನೀಡಿ, ರೈತರನ್ನು ದಿವಾಳಿ ಮಾಡಲು ಹೊರಟಿದ್ದಾರೆ. ಇಂತಹ ಪ್ರಜಾತಂತ್ರ ವಿರೋಧಿ ನೀತಿಯನ್ನ ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಹಾಗೂ ಕಾಯ್ದೆ ಜಾರಿಗೆ ತಂದರೆ ಹೋರಾಟದ ಜೊತೆಗೆ ಜೈಲಿಗೆ ಹೋಗಲು ಸಿದ್ಧ ಎಂದರು.
ಉಳುವವನೇ ಹೊಲದೊಡೆಯ ಕಾಯ್ದೆ ಜಾರಿಗೆ ತಂದವರು ನಾವು. ಈ ಕಾಯ್ದೆಯನ್ನ ಬದಲಾಯಿಸಿದರೆ ನಾವು ಎಲ್ಲದಕ್ಕೂ ಸಿದ್ಧ. ಯಡಿಯೂರಪ್ಪನವರಿಗೆ ತಾಕತ್ತು ಇದ್ದರೆ ಭೂ ಹಿಡುವಳಿ ಮಿತಿ ಕಡಿತ ಮಾಡಲಿ ಎಂದು ಸವಾಲು ಹಾಕಿದರು.