ETV Bharat / city

ತನಿಖೆ ಪೂರ್ಣಗೊಂಡು ಈಶ್ವರಪ್ಪ ಮತ್ತೊಮ್ಮೆ ಸಚಿವರಾಗುತ್ತಾರೆ : ಮಾಜಿ ಸಿಎಂ ಬಿಎಸ್​ವೈ - ಶಿವಮೊಗ್ಗ ಬಿಜೆಪಿ ಕಾರ್ಯಕರ್ತರ ಬಗ್ಗೆ ಯಡಿಯೂರಪ್ಪ ಹೇಳಿಕೆ

ಕೆಲವೇ ತಿಂಗಳಿನಲ್ಲಿ ತನಿಖೆ ಪೂರ್ಣವಾಗಿ ಮತ್ತೊಮ್ಮೆ ಈಶ್ವರಪ್ಪನವರು ಸಚಿವರಾಗುತ್ತಾರೆ ಎಂದು ಮಾಜಿ ಸಿಎಂ ಬಿಎಸ್​ವೈ ಭವಿಷ್ಯ ನುಡಿದರು..

B. S. Yediyurappa
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ
author img

By

Published : Apr 15, 2022, 4:49 PM IST

ಶಿವಮೊಗ್ಗ : ಸುಳ್ಳು ಆರೋಪದ ಹಿನ್ನೆಲೆ ಸಚಿವ ಕೆ.ಎಸ್ ಈಶ್ವರಪ್ಪನವರು ರಾಜೀನಾಮೆ ನೀಡಿರುವುದು ನಮಗ್ಯಾರಿಗೂ ಸಮಾಧಾನ ಇಲ್ಲ. ಇನ್ನೂ ಕೆಲವೇ ತಿಂಗಳಿನಲ್ಲಿ ತನಿಖೆ ಪೂರ್ಣವಾಗಿ ಮತ್ತೊಮ್ಮೆ ಈಶ್ವರಪ್ಪನವರು ಸಚಿವರಾಗುತ್ತಾರೆ. ಆ ದಿನ ಬಹಳ ಬೇಗ ಬರಲಿ ಎಂದು ಹಾರೈಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಶಿವಮೊಗ್ಗದಲ್ಲಿ ಹೇಳಿದರು.

ಈಶ್ವರಪ್ಪ ಆರೋಪ ಮುಕ್ತರಾಗಿ ಮತ್ತೆ ಸಚಿವರಾಗುವ ವಿಶ್ವಾಸ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ..

ಇದನ್ನೂ ಓದಿ: ತುಮಕೂರು : ನರಸಿಂಹರಾಜು ಅವರ ಹೆಸರಿನ ರಂಗಮಂದಿರ ಪೂರ್ಣಗೊಳಿಸುವಂತೆ ಪುತ್ರಿ ಒತ್ತಾಯ

ಜಿಲ್ಲಾ ಬಿಜೆಪಿಯ ನವೀಕೃತ ನಗರ ಕಚೇರಿಯನ್ನು ಬಿ.ಎಸ್ ಯಡಿಯೂರಪ್ಪ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಎಲ್ಲರ ಶ್ರಮದಿಂದ ಈ ಕಾರ್ಯಾಲಯ ಆಗಿದೆ. ಸಂಘಟನೆಯ ದೃಷ್ಟಿಯಿಂದ ಜಿಲ್ಲೆಯ ಕಾರ್ಯಕರ್ತರು ಉತ್ತಮ ಕೆಲಸ ಮಾಡುತ್ತಿದ್ದಾರೆ.

ಎಲ್ಲರಿಗೂ ಅಭಿನಂದನೆಗಳು ಎಂದರು. ಈ ಸಂದರ್ಭದಲ್ಲಿ ಸಂಸದ ಬಿ.ವೈ ರಾಘವೇಂದ್ರ, ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್ ರುದ್ರೆಗೌಡ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.