ETV Bharat / city

ಪ್ರಕೃತಿ ಮಡಿಲಲ್ಲಿ ಮಗುವಂತಿರುವ ಬದಲು ಮೃಗವಾಗುತ್ತಿದ್ದಾರಾ ನರರು.?

ಅಭಿವೃದ್ಧಿ ಯೋಜನೆಗಳಿಗಾಗಿ ಅರಣ್ಯವನ್ನು ನಾಶ ಮಾಡುತ್ತಲೇ ಇದ್ದಾರೆ. ಕಡಿದ ಮರಗಳಿಗೆ ಬದಲಾಗಿ ದುಪ್ಪಟ್ಟು ಮರಗಳನ್ನು ಬೆಳೆಸ ಬೇಕು ಎಂಬ ಕಾನೂನು ಇದ್ದರೂ, ಅದು ಕೇವಲ ಕಾಗದಕ್ಕೆ ಮಾತ್ರ ಸೀಮಿತವಾದಂತಾಗಿದೆ. ಅಭಿವೃದ್ದಿಯ ದೃಷ್ಟಿಯಿಂದ ಈ ರೀತಿ ಸಾವಿರಾರು ಮರಗಳನ್ನು ಕಡಿದಿರುವುದಕ್ಕೆ ಪರಿಸರ ತಜ್ಞರು ವಿರೋಧ ವ್ಯಕ್ತಪಡಿಸಿದ್ದಾರೆ.

deforestation in the name of development
ಪ್ರಕೃತಿ ಮಡಿಲಲ್ಲಿ ಮಗುವಂತಿರುವ ಬದಲು ಮೃಗವಾಗುತ್ತಿದ್ದಾರಾ ನರರು.?
author img

By

Published : Oct 25, 2020, 5:22 PM IST

ಅಂದಿನ ಆದಿಮಾನವರು ಕಾಡಿನ್ನೇ ನಂಬಿಕೊಂಡು ಬದುಕುತ್ತಿದ್ದರು. ಆದರೆ ಇಂದಿನ ಆಧುನಿಕಯುಗದ ಮಾನವರು ಅಭಿವೃದ್ಧಿಯ ಹೆಸರಲ್ಲಿ ಕಾಡಿನ ನಾಶಮಾಡುತ್ತ ತಮ್ಮ ವಿನಾಶಕ್ಕೆ ತಾವೇ ಬುನಾದಿ ಹಾಕಿಕೊಳ್ಳುತ್ತಿದ್ದಾರೆ. ಅಭಿವೃದ್ಧಿ ಯೋಜನೆಗಳಿಗಾಗಿ ಅರಣ್ಯವನ್ನು ನಾಶ ಮಾಡುತ್ತಲೇ ಇದ್ದಾರೆ. ಕಡಿದ ಮರಗಳಿಗೆ ಬದಲಾಗಿ ದುಪ್ಪಟ್ಟು ಮರಗಳನ್ನು ಬೆಳೆಸ ಬೇಕು ಎಂಬ ಕಾನೂನು ಇದ್ದರೂ, ಅದು ಕೇವಲ ಕಾಗದಕ್ಕೆ ಮಾತ್ರ ಸೀಮಿತವಾದಂತಾಗಿದೆ.

ಪ್ರಕೃತಿ ಮಡಿಲಲ್ಲಿ ಮಗುವಂತಿರುವ ಬದಲು ಮೃಗವಾಗುತ್ತಿದ್ದಾರಾ ನರರು.?

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾವಿರಾರು ಮರಗಳನ್ನು ಕಡಿಯಲಾಗಿದೆ. ಜಿಲ್ಲೆಯ ಪ್ರಾದೇಶಿಕ ವಿಭಾಗದಿಂದ 96.61 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು.. ಹಾಗೂ ರಾಜ್ಯ ಹೆದ್ದಾರಿಗೆಂದು ಸುಮಾರು 5,746 ಮರಗಳನ್ನು ತೆರವುಗೊಳಿಸಲು ಆದೇಶಿಸಲಾಗಿತ್ತು. ಈಗಾಗಲೇ ಹಂತ ಹಂತವಾಗಿ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಪ್ರಾಧಿಕಾರದವರು.. ಮರಗಳನ್ನು ಕಡಿದಿದ್ದಾರೆ. ಅಲ್ಲದೇ ಸಂಸ್ಥೆಯವರು ರಾಜ್ಯ ಸರ್ಕಾರಕ್ಕೆ ಮರಗಳನ್ನು ಕಡಿದ ಬದಲಾಗಿ.. 1 ಕೋಟಿ 72 ಲಕ್ಷದ 38 ಸಾವಿರ ರೂಪಾಯಿ... ಹಾಗೂ ಒಂದು ಗಿಡಿದ ಬದಲಾಗಿ ಹತ್ತು ಗಿಡ ನೆಡುವುದಕ್ಕೆ, ಪ್ರತಿ ಕಿ.ಮೀ ಮೂರು ಲಕ್ಷದಂತೆ 1 ಕೋಟಿ 92 ಲಕ್ಷ ರೂಪಾಯಿಯನ್ನು ಸರ್ಕಾರಕ್ಕೆ ಜಮಾ ಮಾಡಿದ್ದಾರೆ. ಈ ಹಣದಲ್ಲಿ ಅರಣ್ಯ ಇಲಾಖೆಯವರು ಸರ್ಕಾರಿ ಪ್ರದೇಶ ಅಥವಾ ಡೀಮ್ಡ್ ಫಾರೆಸ್ಟ್ ನಲ್ಲಿ ಅರಣ್ಯ ನಿರ್ಮಾಣ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ವಿದ್ಯುತ್ ಉತ್ಪಾದನೆಗೆ ಲಿಂಗನಮಕ್ಕಿ ಅಣೆಕಟ್ಟು, ಚಕ್ರಾ, ಸಾವೆಹಕ್ಲು... ನೀರಾವರಿ ಯೋಜನೆಗಾಗಿ ಭದ್ರಾ, ತುಂಗಾ, ಅಂಜನಾಪುರ, ಅಂಬ್ಲಿಗೊಳ ಜಲಾಶಯಗಳನ್ನು ನಿರ್ಮಾಣ ಮಾಡಲಾಗಿದೆ. ಈ ಅಣೆಕಟ್ಟುಗಳನ್ನು ಕಟ್ಟಿದಾಗ ಸಾವಿರಾರು ಎಕರೆ ಅರಣ್ಯ ಪ್ರದೇಶ ಅಣೆಕಟ್ಟೆಯ ಹಿನ್ನೀರಿನಲ್ಲಿ ಮುಳುಗಡೆಗೊಂಡಿವೆ. 2004 ರಲ್ಲಿ ತುಂಗಾ ಅಣೆಕಟ್ಟು ಎತ್ತರಿಸಿ, ತುಂಗಾ ಮೇಲ್ಡಂಡೆ ಯೋಜನೆ ಕಾಮಗಾರಿಗೆ‌ ಶಿವಮೊಗ್ಗ ತಾಲೂಕು ಹಾಗೂ ತೀರ್ಥಹಳ್ಳಿ ಅರಣ್ಯ ಪ್ರದೇಶ ಬಳಕೆಯಾಗಿತ್ತು.‌ ಇದಕ್ಕಾಗಿ ಸರ್ಕಾರ ಅರಣ್ಯ ಇಲಾಖೆಗೆ... ತೀರ್ಥಹಳ್ಳಿ ತಾಲೂಕಿಲ್ಲಿ 165.49 ಹೆಕ್ಟರ್ ಭೂಮಿಯನ್ನು‌ ನೀಡಿದೆ. ಅದೇ ರೀತಿ ಶಿವಮೊಗ್ಗ-ಶಿಕಾರಿಪುರ‌‌ ರಾಜ್ಯ ಹೆದ್ದಾರಿ ಅಗಲೀಕರಣದ ವೇಳೆ.. ಬಿಕ್ಕೂನಹಳ್ಳಿ ಸುತ್ತಕೋಟೆ,‌ ಕೊಮ್ಮನಾಳ್ ಭಾಗದಲ್ಲಿ‌ ರಸ್ತೆ ನಿರ್ಮಾಣಕ್ಕೆ‌‌ ಭೂಮಿ ಪಡೆಯಲಾಗಿತ್ತು. ಇದರಿಂದ ಬದಲಿ ಭೂಮಿಯಾಗಿ 2 ಎಕರೆ 9 ಹೆಕ್ಟರ್ ಪಡೆಯಲಾಗಿದೆ.‌

ಆದರೆ ಅಭಿವೃದ್ದಿಯ ದೃಷ್ಟಿಯಿಂದ ಈ ರೀತಿ ಸಾವಿರಾರು ಮರಗಳನ್ನು ಕಡಿದಿರುವುದಕ್ಕೆ ಪರಿಸರ ತಜ್ಞರು ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಕೃತಿದತ್ತ ಕಾಡು ಕಡಿದು, ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿರುವ, ಮಾನವ ನಿರ್ಮಿತ ಅರಣ್ಯ ನಿರ್ಮಿಸುತ್ತಿರುವ ಮನುಷ್ಯನಿಗೆ. ಪ್ರಕೃತಿಯೇ ಕೊರೊನಾದಂತಹ ಮಹಾಮಾರಿಗಳಿಂದ ಬ್ರೇಕ್​ ಹಾಕುತ್ತಿದೆ. ಪ್ರಕೃತಿ ಮಡಿಲಲ್ಲಿ ಮಗುವಂತಿರುವ ಬದಲು,, ಮೃಗವಾಗುತ್ತಿರುವ ಮಾನವ ಆದಷ್ಟು ಬೇಗ ಪಾಠ ಕಲಿತು ಪರಿಸರವನ್ನು ಉಳಿಸಿ, ಬೆಳೆಸಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.