ETV Bharat / city

ಕಾಡಾನೆಗಳನ್ನು ಮರಳಿ ಕಾಡಿಗಟ್ಟುವ 'ಎಲಿಫೆಂಟ್ ಡ್ರೈವಿಂಗ್' ಯಶಸ್ವಿಯಾಗಿ ಮುಕ್ತಾಯ!

author img

By

Published : Feb 6, 2021, 8:44 PM IST

ಕಳೆದ ನಾಲ್ಕು ದಿನಗಳಿಂದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಉಂಬ್ಳೆಬೈಲು ಅರಣ್ಯ ಪ್ರದೇಶದಲ್ಲಿ ನಡೆದ ಎಲಿಫೆಂಟ್ ಡ್ರೈವಿಂಗ್ ಕಾರ್ಯಾಚರಣೆ ನಡೆದಿದ್ದು, ಇಂದು ಸಕ್ರೆಬೈಲಿನ ಆನೆಗಳು ತಮ್ಮ ವಾಸ ಸ್ಥಾನಕ್ಕೆ ಮರಳಿವೆ.

elephant-driving-successfully-in-finished
ಕಾಡಾನೆ ಓಡಿಸುವ ಎಲಿಫೆಂಟ್ ಡ್ರೈವಿಂಗ್ ಯಶಸ್ವಿಯಾಗಿ ಮುಕ್ತಾಯ

ಶಿವಮೊಗ್ಗ: ಉಂಬ್ಳೆಬೈಲು ಗ್ರಾಮದ ಸುತ್ತಮುತ್ತಲಿನ ಕೃಷಿ ಭೂಮಿಗೆ ನುಗ್ಗಿ ರೈತರ ಫಸಲು ನಾಶ ಮಾಡುತ್ತಿದ್ದ ಕಾಡಾನೆಯನ್ನು ಕಾಡಿಗೆ ಓಡಿಸುವ ಎಲಿಫೆಂಟ್ ಡ್ರೈವಿಂಗ್​ ಯಶಸ್ವಿಯಾಗಿ ಮುಗಿದಿದೆ.

ಕಳೆದ ನಾಲ್ಕು ದಿನಗಳಿಂದ ಉಂಬ್ಳೆಬೈಲು ಅರಣ್ಯ ಪ್ರದೇಶದಲ್ಲಿ ಎಲಿಫೆಂಟ್ ಡ್ರೈವಿಂಗ್ ಕಾರ್ಯಾಚರಣೆ ನಡೆದಿದ್ದು, ಇಂದು ಸಕ್ರೆಬೈಲಿನ ಆನೆಗಳು ತಮ್ಮ ವಾಸಸ್ಥಾನಕ್ಕೆ ಮರಳಿವೆ. ಭದ್ರಾವತಿ ತಾಲೂಕಿನ ಉಂಬ್ಳೆಬೈಲು ಗ್ರಾಮ ಭದ್ರಾ ಅಭಯಾರಣ್ಯ ವ್ಯಾಪ್ತಿಗೆ ಬರುತ್ತದೆ. ಈ ಗ್ರಾಮ ತುಂಗಾ ನದಿ ಹಾಗೂ ಭದ್ರಾ ಹಿನ್ನೀರಿನ ಮಧ್ಯ ಭಾಗದಲ್ಲಿದೆ. ಇಲ್ಲಿಗೆ ಭದ್ರಾ ಅಭಯಾರಣ್ಯದಿಂದ ಒಂದು ಆನೆ ಕುಟುಂಬವೇ ಬಂದಿತ್ತು. ಕಾಡಾನೆಗಳು ಕಾಡಾಂಚಿನ ಕೃಷಿ ಭೂಮಿಗೆ ಬಂದು ಬೆಳೆ ತಿಂದು, ತುಳಿದು ನಾಶ ಮಾಡುತ್ತಿವೆ. ಹೀಗಾಗಿ ಆನೆಗಳನ್ನು ಹಿಡಿಯಬೇಕು ಎಂಬುದು‌ ಈ ಭಾಗದ ರೈತರ ಬಹುದಿನದ ಬೇಡಿಕೆಯಾಗಿತ್ತು.

ಸಕ್ರೆಬೈಲು ಆನೆ ಬಿಡಾರದ ಮೂರು ಆನೆಗಳ ತಂಡ ಎಲಿಫೆಂಟ್ ಡ್ರೈವಿಂಗ್​ಗೆ ತೆರಳಿದ್ದವು. ತಂಡದಲ್ಲಿ ಸಾಗರ, ಸೋಮಣ್ಣ ಹಾಗೂ ಬಾಲಣ್ಣ ಇದ್ದವು. ಸಾಕಷ್ಟು ಕಡೆ ಇಂತಹ ಕಾರ್ಯಾಚರಣೆಗೆ ಹೋಗಿದ್ದ ಸಾಗರ ಆನೆಯ ನಾಯಕತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಬಾಲಣ್ಣನಿಗೆ ಇದು ಎರಡನೇ ಅನುಭವವಾದ್ರೆ, ಸೋಮಣ್ಣನಿಗೆ ಇದು ಮೊದಲ ಅನುಭವವಾಗಿದೆ.

ಈ ಆನೆಗಳ ತಂಡದ ಜೊತೆಗೆ ಒಟ್ಟು 11 ಜನರ ತಂಡ ಆಗಮಿಸಿತ್ತು. ಆನೆಗಳು ಇರುವ ಕುರಿತು ಈ ತಂಡದವರು ಹೋಗಿ ಪರಿಶೀಲನೆ ನಡೆಸಿ, ಬರುತ್ತಾರೆ. ಅಲ್ಲಿ ಆನೆ ಇದ್ದ ಬಗ್ಗೆ ಸ್ವಲ್ಪ ಕುರುಹು ಇದ್ದರೂ ಸಾಕು ಆನೆಯನ್ನು ಹುಡುಕಿ, ಆನೆಯನ್ನು ಓಡಿಸುವ ಅಥವಾ ಹಿಡಿಯುವ ಕಾರ್ಯ ನಡೆಸುತ್ತಾರೆ. ಸದ್ಯ ಕಾಡಿನಿಂದ ಬಂದಿದ್ದ ಮೂರು ಆನೆಗಳನ್ನು ಓಡಿಸಲಾಗಿದೆ. ಆದರೆ, ಈ ಭಾಗದಲ್ಲಿ ಕಳೆದ ಐದಾರು ವರ್ಷಗಳಿಂದ ಒಂಟಿ ಸಲಗ ಒಂದು ಇದೆ. ಈ ಸಲಗ ಇದುವರೆಗೂ ಪ್ರಾಣ ಹಾನಿ ಮಾಡಿಲ್ಲ. ಆದರೆ, ತೋಟದ ಬೆಳೆ ನಾಶ ಮಾಡಿದೆ.

ಕ್ಯಾಂಪ್‌ನಲ್ಲಿ ವಾಸ್ತವ್ಯ: ಕಡೇಕಲ್ಲು ಅರಣ್ಯ ಕ್ಯಾಂಪ್‌ನಲ್ಲಿ‌ ಆನೆಗಳು ತಮ್ಮ ವಾಸ್ತವ್ಯ ಹೂಡಿದ್ದವು. ಇಲ್ಲಿ ಸೊಪ್ಪು ಚೆನ್ನಾಗಿ ಇರುವುದರಿಂದ ಹಾಗೂ ಸಕ್ರೆಬೈಲು ಆನೆ ಕ್ಯಾಂಪ್‌ಗೂ‌ ಇದು ಹತ್ತಿರವಾದ ಕಾರಣ ಇಲ್ಲಿ ಕ್ಯಾಂಪ್ ಹಾಕಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.