ಶಿವಮೊಗ್ಗ: ಜಿಲ್ಲೆಯಾದ್ಯಂತ ಭೂಮಿ ಕಂಪನದ ಸುದ್ದಿ ಹೊರಬಿದ್ದಿರುವ ಬೆನ್ನಲ್ಲೇ ತಾಲೂಕಿನ ಹುಣಸೋಡು ಬಳಿಯ ಕಲ್ಲು ಕ್ವಾರಿಯಲ್ಲಿ ಸ್ಫೋಟಕ ವಸ್ತು(ಡೈನಾಮೈಟ್) ತುಂಬಿದ ಲಾರಿ ಸ್ಫೋಟವಾಗಿದೆ. ವಾಹನದಲ್ಲಿ ಡೈನಾಮೈಟ್ ಸಾಗಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಬೆಂಗಳೂರು ಹಾಗೂ ಮಂಗಳೂರಿನಿಂದ ಎಸ್ಡಿಆರ್ಎಫ್ ತಂಡಗಳು ರಕ್ಷಣೆಗಾಗಿ ತೆರಳಿವೆ ಎನ್ನಲಾಗಿದೆ.
ನಿನ್ನೆ ರಾತ್ರಿ ಸುಮಾರು 9:30ರ ಸುಮಾರಿಗೆ ಜಿಲೆಟಿನ್ ಕಡ್ಡಿ ತುಂಬಿದ ಲಾರಿ ಶಿವಮೊಗ್ಗ ಕಡೆಯಿಂದ ಹುಣಸೋಡು ಕ್ವಾರಿ ಕಡೆ ಬಂದಿದೆ. ಇದರ ಬೆನ್ನಲ್ಲೇ ಬೊಲೊರೋ ಬಂದಿದ್ದು, ಇದೇ ವೇಳೆ ಸ್ಫೋಟವಾಗಿದೆ. ಇದರ ತೀವ್ರತೆಗೆ ಲಾರಿ, ಬೊಲೊರೋ ಸಂಪೂರ್ಣವಾಗಿ ಛಿದ್ರ ಛಿದ್ರವಾಗಿವೆ. ಲಾರಿಯಲ್ಲಿದ್ದ ಚಾಲಕ, ಕ್ಲಿನರ್, ಬೋಲೊರೊದಲ್ಲಿದ್ದ 5 ಜನ ಸಾವನ್ನಪ್ಪಿದ್ದು, ಅವರ ಮೃತದೇಹ ಸಂಪೂರ್ಣವಾಗಿ ಛಿದ್ರಗೊಂಡಿವೆ.
ಓದಿ: ಶಿವಮೊಗ್ಗದಲ್ಲಿ ಕಂಪಿಸಿದ ಭೂಮಿ: ಭಯಭೀತರಾಗಿ ಮನೆಯಿಂದ ಹೊರಬಂದ ಜನ!
ದಾಸ್ತಾನು ಮಾಡಿದ್ದ ಲಾರಿ ಸಂಪೂರ್ಣವಾಗಿ ಛಿದ್ರವಾಗಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ದೇಹಗಳು ಸಹ ಛಿದ್ರವಾಗಿವೆ. ಘಟನಾ ಸ್ಥಳಕ್ಕೆ ಎಸ್‍ಪಿ ಕೆ.ಎಂ.ಶಾಂತರಾಜು, ಡಿಸಿ ಕೆ.ಬಿ.ಶಿವಕುಮಾರ್ ಭೇಟಿ ನೀಡಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ 5 ಜನರ ಶವ ಪತ್ತೆಯಾಗಿದ್ದು, ಒಂದೂವರೆ ಕೀ.ಮೀಟರ್ ವರೆಗೆ ಧೂಳು ಆವರಿಸಿದ್ದು, ಸ್ಫೋಟದ ತೀವ್ರತೆಗೆ ವಿದ್ಯುತ್ ಸಂಪೂರ್ಣ ಸ್ಥಗಿತವಾಗಿದೆ ಎಂದು ಜಿಲ್ಲಾಧಿಕಾರಿ ಕೆಬಿ ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಜತೆಗೆ ಈಗಾಗಲೇ ಮೃತದೇಹ ಹೊರತೆಗೆಯಲಾಗಿದೆ ಎಂದು ತಿಳಿಸಿದ್ದು, ಸ್ಫೋಟಕ್ಕೆ ಕೆಲವೊಂದು ಮನೆಗಳ ಗ್ಲಾಸ್ ಸಂಪೂರ್ಣವಾಗಿ ಒಡೆದು ಹೋಗಿವೆ ಎಂದಿದ್ದಾರೆ.
ಸಾವನ್ನಪ್ಪಿರುವ 5 ಮಂದಿ ಬಿಹಾರ ಮೂಲದ ಕಾರ್ಮಿಕರು ಎನ್ನಲಾಗಿದೆ. ಭೂಮಿ ಕಂಪಿಸಿದ ವೇಳೆ ಲಾರಿಯಲ್ಲಿದ್ದ ಸ್ಫೋಟಕ ಸಿಡಿದು ಈ ದುರ್ಘಟನೆ ನಡೆದಿದೆ. ಈಗಾಗಲೇ 5 ಮಂದಿ ಮೃತದೇಹ ಹೊರತೆಗೆಯಲಾಗಿದ್ದು, ರಾತ್ರಿಯಾಗಿರುವ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು, ಬೆಳಗ್ಗೆ ಮತ್ತೆ ರಕ್ಷಣಾ ಕಾರ್ಯ ಮುಂದುವರೆಯಲಿದೆ. ಕಲ್ಲು ಗಣಿಗಾರಿಕೆಗಾಗಿ ಲಾರಿಯಲ್ಲಿ ತಂದಿದ್ದ 50 ಡೈನಾಮೈಟ್ ಬಾಕ್ಸ್ ಗಳು ಸ್ಫೋಟಗೊಂಡು ಈ ಅನಾಹುತ ಸಂಭವಿಸಿದೆ.
-
At least eight people have died in a dynamite blast at a railway crusher site in Hunasodu village: Shivamogga District Collector KB Shivakumar#Karnataka https://t.co/9JZ3qweHjK
— ANI (@ANI) January 21, 2021 " class="align-text-top noRightClick twitterSection" data="
">At least eight people have died in a dynamite blast at a railway crusher site in Hunasodu village: Shivamogga District Collector KB Shivakumar#Karnataka https://t.co/9JZ3qweHjK
— ANI (@ANI) January 21, 2021At least eight people have died in a dynamite blast at a railway crusher site in Hunasodu village: Shivamogga District Collector KB Shivakumar#Karnataka https://t.co/9JZ3qweHjK
— ANI (@ANI) January 21, 2021
ಸ್ಫೋಟದ ಭೀಕರತೆ ಹೆಚ್ಚಾಗಿರುವ ಕಾರಣ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ ನಿಷೇಧಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಇದರ ಜತೆಗೆ ಇಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.