ETV Bharat / city

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಬಹುತೇಕ ಅಂತಿಮ: ಡಾ.ಶಾಲಿನಿ ರಜನೀಶ್ - 1950 ಸಂಖ್ಯೆಗೆ ಕರೆ ಮಾಡಿ ಖಾತ್ರಿಪಡಿಸಿಕೊಳ್ಳ ಬೇಕು

ಶಿವಮೊಗ್ಗ ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಬಹುತೇಕ ಅಂತಿಮ ಹಂತದಲ್ಲಿದ್ದು, ಕರಡು ಮತದಾರರ ಪಟ್ಟಿಯನ್ನು ಸಧ್ಯದಲ್ಲಿಯೇ ಪ್ರಕಟಿಸಲಾಗುವುದು ಎಂದು ಜಿಲ್ಲಾ ನೋಡಲ್ ಅಧಿಕಾರಿ ಡಾ.ಶಾಲಿನಿ ರಜನೀಶ್ ತಿಳಿಸಿದರು.

KN_SMG_01_Dr_shalini_rajanish_AvB_KA10011
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಬಹುತೇಕ ಅಂತಿಮ ಹಂತಕ್ಕೆ: ಡಾ.ಶಾಲಿನಿ ರಜನೀಶ್
author img

By

Published : Dec 6, 2019, 5:28 PM IST

ಶಿವಮೊಗ್ಗ: ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಬಹುತೇಕ ಅಂತಿಮ ಹಂತದಲ್ಲಿದ್ದು, ಕರಡು ಮತದಾರರ ಪಟ್ಟಿಯನ್ನು ಸಧ್ಯದಲ್ಲಿಯೇ ಪ್ರಕಟಿಸಲಾಗುವುದು ಎಂದು ಜಿಲ್ಲಾ ನೋಡಲ್ ಅಧಿಕಾರಿ ಡಾ.ಶಾಲಿನಿ ರಜನೀಶ್ ಅವರು ತಿಳಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಬಹುತೇಕ ಅಂತಿಮ ಹಂತಕ್ಕೆ: ಡಾ.ಶಾಲಿನಿ ರಜನೀಶ್
ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಉತ್ತಮ ರೀತಿಯಲ್ಲಿ ನಡೆದಿದೆ. ಪ್ರಸ್ತುತ 14,410,66 ಮತದಾರರು ಹೆಸರು ನೋಂದಾಯಿಸಿದ್ದು, ಹಿಂದಿನ ಮತದಾರರ ಪಟ್ಟಿಗಿಂತ ಶೇ.3ರಷ್ಟು ಮತದಾರರ ನೋಂದಣಿಯಲ್ಲಿ ಹೆಚ್ಚಳ ಉಂಟಾಗಿದೆ. ಪರಿಷ್ಕರಣೆ ಅವಧಿಯಲ್ಲಿ ಸ್ವೀಕರಿಸಲಾಗಿರುವ 23,470 ಅರ್ಜಿಗಳನ್ನು ವಿಲೇವಾರಿ ಮಾಡಲು ಬಾಕಿ ಇದ್ದು, ಆದಷ್ಟು ಬೇಗನೆ ವಿಲೇವಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು. 1950 ಕರೆ ಮಾಡಿ: ಮತದಾರರು ಚುನಾವಣೆ ದಿನದವರೆಗೆ ಕಾಯದೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. 6 ತಿಂಗಳಿಗಿಂತ ಅಧಿಕ ಕಾಲ ನೀಡಿರುವ ವಿಳಾಸದಲ್ಲಿ ವಾಸ್ತವ್ಯ ಇಲ್ಲದಿದ್ದರೆ ಮತದಾರರ ಪಟ್ಟಿಯಿಂದ ಅಂತಹ ಹೆಸರು ತೆಗೆದು ಹಾಕುವ ಸಾಧ್ಯತೆಯಿದ್ದು, ಅಂತಹವರು ಸಹ ಪರಿಶೀಲನೆ ಮಾಡಿಕೊಳ್ಳುವಂತೆ ಅವರು ಸೂಚಿಸಿದರು.

Intro:ಶಿವಮೊಗ್ಗ,

1950 ಕರೆ ಮಾಡಿ ಖಾತ್ರಿಪಡಿಸಲು ಕೋರಿಕೆ
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಬಹುತೇಕ ಅಂತಿಮ ಹಂತಕ್ಕೆ: ಡಾ.ಶಾಲಿನಿ ರಜನೀಶ್

ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಬಹುತೇಕ ಅಂತಿಮ ಹಂತದಲ್ಲಿದ್ದು ಕರಡು ಮತದಾರರ ಪಟ್ಟಿಯನ್ನು ಸಧ್ಯದಲ್ಲಿಯೇ ಪ್ರಕಟಿಸಲಾಗುವುದು ಎಂದು ಮತದಾರರ ಪಟ್ಟಿ ಪರಿಷ್ಕರಣೆ ಜಿಲ್ಲಾ ನೋಡಲ್ ಅಧಿಕಾರಿ ಡಾ.ಶಾಲಿನಿ ರಜನೀಶ್ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಅಧಿಕಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.

ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಉತ್ತಮ ರೀತಿಯಲ್ಲಿ ನಡೆದಿದೆ. ಪ್ರಸ್ತುತ 1441066 ಮತದಾರರು ಹೆಸರು ನೋಂದಾಯಿಸಿದ್ದು, ಹಿಂದಿನ ಮತದಾರರ ಪಟ್ಟಿಗಿಂತ ಶೇ.3ರಷ್ಟು ಮತದಾರರ ನೋಂದಣಿಯಲ್ಲಿ ಹೆಚ್ಚಳ ಉಂಟಾಗಿದೆ. ಪರಿಷ್ಕರಣೆ ಅವಧಿಯಲ್ಲಿ ಸ್ವೀಕರಿಸಲಾಗಿರುವ 23470ಅರ್ಜಿಗಳನ್ನು ವಿಲೇವಾರಿ ಮಾಡಲು ಬಾಕಿ ಇದ್ದು, ಆದಷ್ಟು ಬೇಗನೆ ವಿಲೇವಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಪರಿಷ್ಕರಣೆ ಅವಧಿಯಲ್ಲಿ ಯುವ ಮತದಾರರ ನೋಂದಣಿಗೆ ಹೆಚ್ಚಿನ ಒತ್ತು ನೀಡಲಾಗಿದೆ. 2011ರ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 17ರಿಂದ 18ರ ಒಳಗಿನ ಹರೆಯದ 72ಸಾವಿರ ಮಂದಿ ಇರಬೇಕಾಗಿದ್ದು, ಪ್ರಸ್ತುತ 37ಮಂದಿಯನ್ನು ನೋಂದಣಿ ಮಾಡಲಾಗಿದೆ. ಬಾಕಿ ಉಳಿದಿರಬಹುದಾದ ವಿದ್ಯಾರ್ಥಿಗಳನ್ನು ಗುರುತಿಸಿ ಹೆಸರು ನೋಂದಾಯಿಸುವ ಉದ್ದೇಶದಿಂದ ಪ್ರತಿ ಕಾಲೇಜಿನಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲಾಗಿರುವ ವಿದ್ಯಾರ್ಥಿಗಳ ವಿವರ ಕುರಿತು ವರದಿ ಸಲ್ಲಿಸಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ 20ರಿಂದ 29ವರ್ಷದ ಒಳಗಿನ 3.36ಲಕ್ಷ ಜನರಿದ್ದು, ಇವರ ಪೈಕಿ 2.97ಲಕ್ಷ ಮಂದಿಯನ್ನು ನೋಂದಾಯಿಸಲಾಗಿದೆ ಎಂದು ಹೇಳಿದರು.

ಮತದಾರರ ಪಟ್ಟಿಯ ಅಂತಿಮ ಕರಡು ಪ್ರಕಟಿಸುವ ಪೂರ್ವದಲ್ಲಿ ತಹಶೀಲ್ದಾರ್ ಅವರು ಎಲ್ಲಾ ಬಿಎಲ್‍ಒಗಳು ಮತ್ತು ಬೂತ್ ಲೆವೆಲ್ ಏಜೆಂಟರ ಸಭೆಯನ್ನು ಕರೆದು ಏನಾದರೂ ತಿದ್ದುಪಡಿಗಳು ಇದ್ದರೆ ಅಲ್ಲಿಯೇ ಸರಿಪಡಿಸುವಂತೆ ಸೂಚಿಸಲಾಗಿದೆ. ಕರಡು ಪಟ್ಟಿ ಪ್ರಕಟಣೆ ಬಳಿಕ ಸಹ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದೆ. ಒಂದು ಕುಟುಂಬದ ಎಲ್ಲಾ ಸದಸ್ಯರು ಒಂದೇ ಮತಗಟ್ಟೆಯಲ್ಲಿ ಮತ ಚಲಾಯಿಸಲು ಅನುಕೂಲವಾಗುವಂತೆ ಇರಬೇಕು. ಬೇರೆ ಬೇರೆ ಬೂತ್‍ಗಳಿಗೆ ತೆರಳಬೇಕಾದ ಪರಿಸ್ಥಿತಿ ಎದುರಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದರು.

1950 ಕರೆ ಮಾಡಿ: ಮತದಾರರು ಚುನಾವಣೆ ದಿನದವರೆಗೆ ಕಾಯದೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುವುದನ್ನು 1950 ಸಂಖ್ಯೆಗೆ ಕರೆ ಮಾಡಿ ಖಾತ್ರಿಪಡಿಸಿಕೊಳ್ಳಬೇಕು. 6ತಿಂಗಳಿಗಿಂತ ಅಧಿಕ ಕಾಲ ನೀಡಿರುವ ವಿಳಾಸದಲ್ಲಿ ವಾಸ್ತವ್ಯ ಇಲ್ಲದಿದ್ದರೆ ಮತದಾರರ ಪಟ್ಟಿಯಿಂದ ಅಂತಹ ಹೆಸರು ತೆಗೆದು ಹಾಕುವ ಸಾಧ್ಯತೆಯಿದ್ದು, ಅಂತಹವರು ಸಹ ಪರಿಶೀಲನೆ ಮಾಡಿಕೊಳ್ಳುವಂತೆ ಅವರು ಸೂಚಿಸಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಪೊಲೀಸ್ ವರಿಷ್ಟಾಧಿಕಾರಿ ಶಾಂತರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.