ಶಿವಮೊಗ್ಗ: ಡಿ10 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಗೆ (legislative council election) ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಲು ಇಬ್ಬರು ಬಿ ಫಾರಂಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ (H.S Sundaresh) ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಕೆಟ್ಗಾಗಿ ಹಾಲಿ ಎಂಎಲ್ಸಿ (MLC) ಆರ್.ಪ್ರಸನ್ನ ಕುಮಾರ್ ಹಾಗೂ ಜಿಲ್ಲಾ ಸೇವಾದಳದ ವೈ.ಹೆಚ್.ನಾಗರಾಜ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗಳನ್ನು ಕೆಪಿಸಿಸಿಗೆ ಕಳುಹಿಸಲಾಗಿದೆ. ನ.14 ರಂದು ಚುನಾವಣೆಯ ಕುರಿತು ಎಐಸಿಸಿ ವಕ್ತಾರ ರಣದೀಪ್ ಸುರ್ಜೆವಾಲಾ ಅವರು ಸಭೆ ಕರೆದಿದ್ದಾರೆ.
ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬರಲಿದೆ. ಈ ಸಭೆಯಲ್ಲಿಯೂ ಸಹ ಅಭ್ಯರ್ಥಿ ಯಾರು ಎಂದು ತೀರ್ಮಾನವಾಗಲ್ಲ. ರಾಜ್ಯದ ಪಟ್ಟಿಯನ್ನು ದೆಹಲಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಒಂದೆರಡು ದಿನಗಳಲ್ಲಿ ತೀರ್ಮಾನವಾಗುತ್ತದೆ ಎಂದು ತಿಳಿಸಿದರು.
ಅರ್ಜಿ ಸಲ್ಲಿಸದೇ ದೆ ಇದ್ದವರಿಗೂ ಟಿಕೆಟ್ ಸಿಗಬಹುದು. ಕೆಪಿಸಿಸಿಯಿಂದ ಸರ್ವೆ ನಡೆಸಲಾಗಿದೆ. ಕೆಪಿಸಿಸಿ, ಎಐಸಿಸಿ ಹೀಗೆ ಅವರಿಗೆ ಅವರದ್ದೇ ಆದ ಮಾಹಿತಿ ಇದ್ದೆ ಇರುತ್ತದೆ. ಇದರಿಂದ ಎಲ್ಲ ತೀರ್ಮಾನ ಮಾಡಿ ಟಿಕೆಟ್ ನೀಡಲಾಗುತ್ತದೆ. ಹುಬ್ಬಳಿಯಲ್ಲಿ ಒಂದು ಸ್ಥಾನಕ್ಕೆ 24 ಜನ ಅರ್ಜಿ ಸಲ್ಲಿಸಿದ್ದಾರೆ. ನಮ್ಮಲ್ಲಿ ಇನ್ನೂ ಯಾವ ಅಭ್ಯರ್ಥಿಯ ಹೆಸರು ಅಂತಿಮವಾಗಿಲ್ಲ ಎಂದು ಸುಂದರೇಶ್ ತಿಳಿಸಿದರು.
ನಾನು ಶಾಸಕ ಸ್ಥಾನದ ಟಿಕೆಟ್ ಆಕಾಂಕ್ಷಿ:
ನಾನು ಎಂಎಲ್ಸಿ ಸ್ಥಾನದ ಆಕಾಂಕ್ಷಿಯಲ್ಲ. ಬದಲಿದೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಎಂದು ಹೆಚ್.ಎಸ್ ಸುಂದರೇಶ್ ಇಂದು ಬಹಿರಂಗ ಪಡಿಸಿದರು. ನ.14 ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಸಭೆ ನಡೆಯಲಿದೆ. ನಮ್ಮ ಶಿವಮೊಗ್ಗ ಜಲ್ಲೆಯಿಂದ ಕನಿಷ್ಠ 2 ಲಕ್ಷ ಜನರ ಸದಸ್ಯತ್ವ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ: ರೈತರ ವಿರೋಧದ ನಡುವೆಯೇ ಹಲಗಾ - ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ ಆರಂಭ