ಶಿವಮೊಗ್ಗ: ಜಿಲ್ಲೆಯ ಐದು ಸರ್ಕಾರಿ ಆಸ್ಪತ್ರೆಗಳು, ಮೂರು ಪ್ರಾಥಮಿಕ ಹಾಗೂ ಎರಡು ಖಾಸಗಿ ಆಸ್ಪತ್ರೆಯಲ್ಲಿ ಇಂದು ಕೋವಿಡ್-19 ಲಸಿಕೆಯ ಡ್ರೈ ರನ್ ನಡೆಸಲಾಗುತ್ತಿದೆ.
ಭದ್ರಾವತಿ, ಸೊರಬ, ಸಾಗರ, ತೀರ್ಥಹಳ್ಳಿಯ ತಾಲೂಕು ಆಸ್ಪತ್ರೆ, ಹೊಳಲೂರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರ ಹಾಗೂ ತುಂಗಾ ನಗರದ ಪ್ರಾಥಮಿಕ ಕೇಂದ್ರ ಸೇರಿದಂತೆ ಶಿವಮೊಗ್ಗ ನಗರದ ಹಾಗೂ ತೀರ್ಥಹಳ್ಳಿ ತಾಲೂಕಿನ ಆಗುಂಬೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಜಿ ಮಕ್ಕಳ ಆಸ್ಪತ್ರೆ ಮತ್ತು ಸುಬ್ಬಯ್ಯ ಮೆಡಿಕಲ್ ಆಸ್ಪತ್ರೆಗಳಲ್ಲಿ ಇಂದು ಕೊರೊನಾ ಡ್ರೈ ರನ್ ನಡೆಸಲಾಗುತ್ತಿದೆ.
ಇನ್ನು ಪ್ರತಿ ಕೇಂದ್ರದಲ್ಲಿ 25 ಜನರನ್ನು ಗುರುತಿಸಿ ಡ್ರೈ ರನ್ ನಡೆಸಲಾಗುತ್ತಿದ್ದು, ಕೆಲ ಸ್ಥಳಗಳಿಗೆ ಡಿಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.