ಶಿವಮೊಗ್ಗ: ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿಗೆ ರ್ಯಾಪಿಡ್ ಆ್ಯಂಟಿಜೆನ್ ಕಿಟ್ನ ಮೂಲಕ ಕೋವಿಡ್ ಪರೀಕ್ಷೆ ನಡೆಸಲಾಯಿತು.
ಆರೋಗ್ಯ ಇಲಾಖೆ ಅಧಿಕಾರಿಗಳು ಮೊದಲೇ ಡಿಸಿ ಕಚೇರಿಯ ಸಿಬ್ಬಂದಿಯ ವಿಳಾಸ, ಪೋನ್ ನಂಬರ್ ಸೇರಿದಂತೆ ಪ್ರಮುಖ ಮಾಹಿತಿಯನ್ನು ಆನ್ಲೈನ್ ಮೂಲಕ ಅರ್ಜಿ ಪಡೆದಿದ್ದು, ಇಂದು ಗಂಟಲು ದ್ರವದ ಮಾದರಿ ಪಡೆದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ 290 ಸಿಬ್ಬಂದಿಯಿದ್ದು, ಇಂದು ಕೇವಲ 50 ಜನರು ಪರೀಕ್ಷೆಗೆ ಒಳಗಾಗಿದ್ದಾರೆ.
ಗಣೇಶನ ಹಬ್ಬದ ಹಿನ್ನಲೆ, ಇಂದು ಹೆಚ್ಚಿನ ಸಿಬ್ಬಂದಿ ಪರೀಕ್ಷೆಗೆ ಒಳಗಾಗಲಿಲ್ಲ. ಸೋಮವಾರದ ನಂತರ ಇನ್ನಷ್ಟು ಜನ ಪರೀಕ್ಷೆಗೆ ಒಳಗಾಗಲಿದ್ದಾರೆ.