ಶಿವಮೊಗ್ಗ: ಮುಂಬೈನಿಂದ ಬಂದಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಶಂಕೆ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ತಾಲೂಕಿನ ನಾಲ್ಕು ಗ್ರಾಮಗಳನ್ನು ಸಂಪೂರ್ಣ ಸೀಲ್ಡೌನ್ ಮಾಡಲಾಗಿದೆ.
ಮೇ 11ರಂದು ಮುಂಬೈನಿಂದ ಹಳ್ಳಿ ಬೈಲು ಗ್ರಾಮಕ್ಕೆ ಬಂದಿದ್ದ ವ್ಯಕ್ತಿಗೆ ನಿನ್ನೆ ಮಧ್ಯಾಹ್ನ ಜ್ವರ ಕಾಣಿಸಿಕೊಂಡಿತ್ತು. ಆತನನ್ನು ತೀರ್ಥಹಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆತನಿಗೆ ಉಸಿರಾಟದ ಸಮಸ್ಯೆ ಹೆಚ್ಚಾದ ಕಾರಣ ಶಿವಮೊಗ್ಗ ಕೋವಿಡ್ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಯಿತು.
ಆತ ಗ್ರಾಮದಲ್ಲಿ ಸುತ್ತಾಡಿರುವ ಶಂಕೆ ಹಿನ್ನೆಲೆ ಹಳ್ಳಿಬೈಲು, ರಂಜದಕಟ್ಟೆ, ಭೀಮನಕಟ್ಟೆ ಹಾಗೂ ಮುಳಬಾಗಿಲು ಗ್ರಾಮಗಳನ್ನು ಇಂದಿನಿಂದ ಸೀಲ್ಡೌನ್ ಮಾಡಲಾಗಿದೆ.
ಜ್ವರ ಕಾಣಿಸಿಕೊಂಡಿರುವ ವ್ಯಕ್ತಿಯ ಜೊತೆ ಬಂದಿದ್ದವರನ್ನು ಸಹ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಆತನ ಕುಟುಂಬ ಸದಸ್ಯರನ್ನು ತಾಲೂಕು ಆಡಳಿತ ಕ್ವಾರಂಟೈನ್ ಮಾಡಿದೆ. ಮನೆಯಿಂದ ಹೊರಬರಬಾರದು ಎಂದು ಮೈಕ್ನಲ್ಲಿ ಪ್ರಚಾರ ಮಾಡಲಾಗುತ್ತಿದೆ. ನಿನ್ನೆ ರಾತ್ರಿಯಿಂದಲೇ ತೀರ್ಥಹಳ್ಳಿ ತಹಶೀಲ್ದಾರ್ ಶ್ರೀಪಾದ್ ಅವರು, ತಮ್ಮ ಅಧಿಕಾರಿಗಳೂಂದಿಗೆ ಬೀಡು ಬಿಟ್ಟಿದ್ದಾರೆ.