ETV Bharat / city

ಶಿವಮೊಗ್ಗದಲ್ಲಿಂದು 114 ಜನರಿಗೆ ಕೊರೊನಾ... ಸೋಂಕಿತರ ಸಂಖ್ಯೆ 2,477ಕ್ಕೆ‌ ಏರಿಕೆ

author img

By

Published : Aug 6, 2020, 9:29 PM IST

ಶಿವಮೊಗ್ಗ ಜಿಲ್ಲೆಯಲ್ಲಿಂದು 114 ಜನರಿಗೆ ಕೊರೊನಾ ದೃಢಪಟ್ಟಿದ್ದು, ಸೋಂಕಿನಿಂದ ಓರ್ವ ಸಾವನ್ನಪ್ಪಿದ್ದಾರೆ.

Corona positive for 114 people in Shimoga district
ಶಿವಮೊಗ್ಗದಲ್ಲಿಂದು 114 ಜನರಿಗೆ ಕೊರೊನಾ..ಸೋಂಕಿತರ ಸಂಖ್ಯೆ 2,477ಕ್ಕೆ‌ ಏರಿಕೆ

ಶಿವಮೊಗ್ಗ: ಜಿಲ್ಲೆಯಲ್ಲಿಂದು 114 ಜನರಿಗೆ ಕೊರೊನಾ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 2,477ಕ್ಕೆ‌ ಏರಿಕೆಯಾಗಿದೆ.

ಇಂದು ಕೊರೊನಾ ಸೋಂಕಿನಿಂದ ಓರ್ವ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ. 96 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 1,375 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ 1,053 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 212, ಕೋವಿಡ್ ಕೇರ್ ಸೆಂಟರ್​ನಲ್ಲಿ 517, ಖಾಸಗಿ‌ ಆಸ್ಪತ್ರೆಯಲ್ಲಿ 92, ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆಯಲ್ಲಿ 82 ಹಾಗೂ ಮನೆಯಲ್ಲಿ 150 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಲೂಕುವಾರು ಸೋಂಕಿತರ ವಿವರ: ಶಿವಮೊಗ್ಗ 53, ಭದ್ರಾವತಿ 21, ಶಿಕಾರಿಪುರ 21, ಸಾಗರ 11, ಸೊರಬ 2, ಹೊಸನಗರ 1 ಹಾಗೂ ಬೇರೆ ಜಿಲ್ಲೆಯಿಂದ ಬಂದ 5 ಜನರಿಗೆ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಇದುವರೆಗೆ 954 ಕಂಟೋನ್ಮೆಂಟ್​ ಝೋನ್ ಮಾಡಲಾಗಿದ್ದು, ಇದರಲ್ಲಿ 339 ಕಂಟೋನ್ಮೆಂಟ್​ ಝೋನ್ ವಿಸ್ತರಣೆಗೊಂಡಿದೆ. ಇಂದು 906 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು, ಅದರಲ್ಲಿ 690 ಜನರ ವರದಿ ಬಂದಿದೆ. ಇದುವರೆಗೂ 31,733 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 28,658 ಜನರ ವರದಿ ಬಂದಿದೆ.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.