ಶಿವಮೊಗ್ಗ: ನಗರದ ವಿವೇಕಾನಂದ ಬಡಾವಣೆಯಲ್ಲಿ ಚಪ್ಪಲಿ ಕದಿಯುವ ಗ್ಯಾಂಗ್ ಸಕ್ರಿಯವಾಗಿದ್ದು, ಹೊಸ ಪಾದರಕ್ಷೆ ಖರೀದಿಸಿದರೂ ಮನೆಯ ಹೊರಗಡೆ ಇಡುವುದಕ್ಕೆ ಭಯ ಪಡುವಂತಾಗಿದೆ.
ದೇವಾಲಯ, ಮದುವೆ-ಮುಂಜಿಗಳಲ್ಲಿ ಚಪ್ಪಲಿ ಕಳ್ಳತನವಾಗುವುದು ಸಾಮಾನ್ಯ. ಆದರೆ, ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಕೆಲ ಬಡಾವಣೆಗಳಲ್ಲಿ ಮನೆಯ ಮುಂದಿರುವ ಚಪ್ಪಲಿಯನ್ನು ಸಹ ಕದಿಯಲಾಗುತ್ತಿದೆ. ರಾತ್ರಿ ವೇಳೆ ಮನೆಯ ಮುಂದಿಟ್ಟಿರುವ ಚಪ್ಪಲಿಗಳನ್ನು ಕಳವು ಮಾಡಲಾಗುತ್ತಿದ್ದು, ಈ ದೃಶ್ಯ ವಿವೇಕಾನಂದ ಬಡಾವಣೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ವಾರದಲ್ಲಿ ಎರಡು ಬಾರಿಯಾದರೂ ಚಪ್ಪಲಿ ಕಳ್ಳತನ ನಡೆಯುತ್ತಿದ್ದು, ಈ ಕುರಿತು ಸ್ಥಳೀಯರು ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.