ETV Bharat / city

ಮಳೆ ಹಾನಿ‌ ಪ್ರದೇಶಗಳಿಗೆ ಭೇಟಿ.. ಸಂತ್ರಸ್ತರಿಗೆ ಸಾಂತ್ವನ ಹೇಳಿದ ಬಿಜೆಪಿ ನಾಯಕರು.. - ಕೆ.ಎಸ್.ಈಶ್ವರಪ್ಪ

ಇಂದು ಬೆಳಗ್ಗೆಯಿಂದಲೇ ಜಿಲ್ಲೆಯಲ್ಲಿ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ನೇತೃತ್ವದಲ್ಲಿ ಶಾಸಕರಾದ ವಿ.ಸೋಮಣ್ಣ, ಸಿ ಟಿ ರವಿ ನೇತೃತ್ವದ ತಂಡ ಶಿವಮೊಗ್ಗ ಜಿಲ್ಲೆಯಾದ್ಯಂತ ಪ್ರವಾಸ ನಡೆಸಿತು.

ಮಳೆ ಹಾನಿ‌ ಪ್ರದೇಶಗಳಿಗೆ ಭೇಟಿ ನೀಡಿ, ಸಂತ್ವಾನ ಹೇಳಿದ ಬಿಜೆಪಿ ನಾಯಕರು
author img

By

Published : Aug 11, 2019, 6:09 PM IST

Updated : Aug 11, 2019, 6:18 PM IST

ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಕೆ ಎಸ್ ಈಶ್ವರಪ್ಪ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಮೊದಲಿಗೆ ಚೋರಡಿ ಬಳಿಯ ಕುಮದ್ವತಿ ನದಿಗೆ ತೆರಳಿದ ಬಿಜೆಪಿ ನಾಯಕರು, ನಿನ್ನೆ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದ ವ್ಯಕ್ತಿಯ ಶವ ಪತ್ತೆಗೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು. ಎನ್​​ಡಿಆರ್​ಎಫ್ ತಂಡ ಶವ ಹುಡುಕಲು ಆಗಮಿಸಲಿದೆ ಎಂದು ತಿಳಿಸಿ ಅಲ್ಲಿಂದ ನೇರವಾಗಿ ತೀರ್ಥಹಳ್ಳಿ ತಾಲೂಕಿನ ಕನ್ನಂಗಿ ಗ್ರಾಮಕ್ಕೆ ಭೇಟಿ ನೀಡಿದರು.

ಬಿಜೆಪಿ ತಂಡದಿಂದ ಮಳೆಹಾನಿ ಪ್ರದೇಶಕ್ಕೆ ಭೇಟಿ..

ಮೊನ್ನೆ ಸುರಿದ ಭಾರಿ ಮಳೆಯಿಂದಾಗಿ ಕುಂಟೆ ಹೊಳೆ ಉಕ್ಕಿ ಹರಿದಿದ್ದು, ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ನುಗ್ಗಿ ಸಾಕಷ್ಟು‌ ಹಾನಿಯಾದ ಪರಿಣಾಮ ನಾಯಕರ ತಂಡ ಆ ಸ್ಥಳಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. ಹಾಗೆ ತಾಲೂಕು ಅಧಿಕಾರಿಗಳಿಂದ ಹಾನಿಯ ಕುರಿತು ಮಾಹಿತಿ ಪಡೆದುಕೊಂಡರು.

ನಂತರ ತೀರ್ಥಹಳ್ಳಿ ತಾಲೂಕಿನ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಕೆ ಎಸ್ ಈಶ್ವರಪ್ಪ, ಹಿಂದೆಂದೂ ಕಾಣದ ರೀತಿಯಲ್ಲಿ ಈ ಬಾರಿ ಮಳೆ ಸುರಿದಿದ್ದು, ಸಾಕಷ್ಟು ಹಾನಿಯನ್ನುಂಟು ಮಾಡಿದೆ. ಕಳೆದ ತಿಂಗಳು ನೀರಿಲ್ಲ ಅಂತಾ ಹೇಳುತ್ತಿದ್ದ ನಾವು ಈಗ ಸಾಕಪ್ಪ ಎನ್ನುವಷ್ಟು ನೀರು ತುಂಬಿಕೊಂಡಿದೆ. ಇದರಿಂದ ಎಲ್ಲಾ ಕಡೆ ಅತಿವೃಷ್ಟಿಯಾಗಿದೆ. ಸಾಕಷ್ಟು ಮನೆಗಳು ಬಿದ್ದಿವೆ. ಕೆಲವು ಕಡೆ ಭಾಗಶಃ ಮನೆ ಹಾನಿಯಾಗಿವೆ. ಇದರಿಂದ ಅಧಿಕಾರಿಗಳು ಸರ್ವೆ ನಡೆಸಿ, ವರದಿ ನೀಡಬೇಕಿದೆ ಎಂದರು. ನಮ್ಮ ತಂಡ ಮೂರು ಜಿಲ್ಲೆಗಳ ಪ್ರವಾಸ ಮುಗಿಸಿದೆ. ಸದ್ಯಕ್ಕೆ ತಾತ್ಕಾಲಿಕ ವರದಿಯನ್ನು ನಮ್ಮ ರಾಜ್ಯಾಧ್ಯಕ್ಷರಿಗೆ ನೀಡುತ್ತೇವೆ. ನಂತ್ರ ಅಂತಿಮ ವರದಿ‌ ನೀಡುತ್ತೇವೆ ಎಂದರು.

Intro:ಮಳೆ ಹಾನಿ‌ ಪ್ರದೇಶಗಳಿಗೆ ಭೇಟಿ ನೀಡಿ, ಸಂತ್ವಾನ ಹೇಳಿದ ಬಿಜೆಪಿ ಸಮಿತಿ.

ಶಿವಮೊಗ್ಗ: ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಮಾಜಿ ಡಿಸಿಎಂ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಮಾಜಿ ಸಚಿವ ವಿ.ಸೋಮಣ್ಣ, ಶಾಸಕ ಸಿ.ಟಿ.ರವಿ ರವರ ನೇತೃತ್ವದ ತಂಡ ಶಿವಮೊಗ್ಗ ಜಿಲ್ಲಾದ್ಯಾಂತ ಪ್ರವಾಸ ನಡೆಸಿತು. ಬೆಳಗ್ಗೆಯಿಂದಲೇ ಜಿಲ್ಲೆಯ ಪ್ರವಾಸ ಕೈ ಗೊಂಡ ಬಿಜೆಪಿಯ ತಂಡ ಮೊದಲಿಗೆ ಚೋರಡಿ ಬಳಿ ಕುಮದ್ವತಿ ನದಿಗೆ ಬಿದ್ದು ಸಾವನ್ನಪ್ಪಿದ ಪ್ರದೇಶಕ್ಕೆ ಭೇಟಿ ನೀಡಿದರು. ನಿನ್ನೆ ಬಿದ್ದು ಸಾವನ್ನಪ್ಪಿದವರ ಶವ ಪತ್ತೆಯಾಗದ ಹಿನ್ನಲೆಯಲ್ಲಿ ಕುಂಸಿ ಗ್ರಾಮಸ್ಥರು ಶವ ಹುಡುಕಿ ಕೊಡುವಂತೆ ಕೋರಿ ಕೊಂಡರು. ಇದಕ್ಕೆ ತಂಡ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ.Body:ಅವರು ಎನ್ ಆರ್ ಎಫ್ ತಂಡ ಶವ ಹುಡುಕಲು ಆಗಮಿಸಲಿದೆ ಎಂದು ತಿಳಿಸಿ ಅಲ್ಲಿಂದ ಸೀದಾ ತೀರ್ಥಹಳ್ಳಿ ತಾಲೂಕಿನ ಕನ್ನಂಗಿ ಗ್ರಾಮಕ್ಕೆ ಭೇಟಿ ನೀಡಿದರು. ಕನ್ನಂಗಿ ಗ್ರಾಮದಲ್ಲಿ ಮೊನ್ನೆ ಸುರಿದ ಮಳೆಯಿಂದ ಕುಂಟೆ ಹೊಳೆ ಉಕ್ಕಿ ಹರಿದು ಗ್ರಾಮಕ್ಕೆ ನುಗ್ಗಿ ಮನೆಗಳಿಗೂ ನೀರು‌ ನುಗ್ಗಿ ಸಾಕಷ್ಟು‌ ಹಾನಿಯನ್ನುಂಟು ಮಾಡಿತ್ತು. ಕುಂಟೆ ಹೊಳೆಯ ನೀರಿನಿಂದ ಮನೆ ಮಳೆದು ಕೊಂಡವರನ್ನು ಸಮೀಪದ‌ ಸರ್ಕಾರಿ‌ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು‌ ತೆರೆಯಲಾಗಿತ್ತು. ಕಾಳಜಿ ಕೇಂದ್ರದಲ್ಲಿ ಹಾಜರಿದ್ದ ಗ್ರಾಮಸ್ಥರನ್ನು ತಂಡ ಭೇಟಿ ನೀಡಿ ಮಾತನಾಡಿಸುತ್ತಿದ್ದಂತೆಯೇ ಗ್ರಾಮಸ್ಥರು ಕಣ್ಣಿರು ಹಾಕಲು ಶುರು ಮಾಡಿದರು. ಹೊಳೆ ನೀರಿನಿಂದ ಮನೆಯ ಎಲ್ಲಾ ವಸ್ತುಗಳು, ದಿನಸ ಸಾಮಾನುಗಳು ಸೇರಿದಂತೆ ಮನೆಯ ಜಾನುವಾರುಗಳು ಕೊಚ್ಚಿ ಹೋಗಿರುವುದನ್ನು ನೆನೆದು ಮಹಿಳೆಯರು ಕಣ್ಣಿರು ಹಾಕಿದರು. ಮಹಿಳೆಯರಿಗೆ ಸಂತ್ವಾನ ಹೇಳಿದ ತಂಡ ಇವರಿಗೆ ಸರಿಯಾದ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಂತ್ರ ಕುಂಟೆ ಹೊಳೆಯಿಂದ ಹಾನಿಯಾದ ಸೇತುವೆಗೆ ಭೇಟಿ ನೀಡಿ ಪರಿಶೀಲಿಸಿದರು. ತಾಲೂಕು ಅಧಿಕಾರಿಗಳಿಂದ ಹಾನಿಯ ಮಾಹಿತಿ ಪಡೆದು ಕೊಂಡರು. ಅಲ್ಲಿಂದ ಸಿ.ಕೆ.ರಸ್ತೆಯ ಮೂಲಕ ತೀರ್ಥಹಳ್ಳಿಗೆ ಸಾಗುವಾಗ ಹಾನಿಗೊಳಗಾದ ಬಾಳೆ ತೋಟ, ಅಡಿಕೆ ತೋಟಗಳ ವೀಕ್ಷಣೆ ಮಾಡಿದರು. ನಂತ್ರ ತೀರ್ಥಹಳ್ಳಿ ತಾಲೂಕು ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದರು.Conclusion: ಈ ವೇಳೆ ಮಾತನಾಡಿದ ತಂಡದ ಕೆ.ಎಸ್.ಈಶ್ವರಪ್ಪ‌ ಹಿಂದೂಂದು ಕಾಣದ ರೀತಿಯಲ್ಲಿ ಮಳೆ ಸುರಿದು, ಸಾಕಷ್ಟು ಹಾನಿಯನ್ನುಂ‌ಟು ಮಾಡಿದೆ. ಕಳೆದ ತಿಂಗಳು ನೀರಿಲ್ಲ ಅಂತ ಹೇಳುತ್ತಿದ್ದ ನಾವು, ಈಗ ಸಾಕಪ್ಪ ಎನ್ನುವಷ್ಟು ನೀರು ಬರುತ್ತಿದೆ. ಇದರಿಂದ ಎಲ್ಲಾ ಕಡೆ ಅತಿವೃಷ್ಟಿಯಾಗಿದೆ. ಸಾಕಷ್ಟು ಮನೆಗಳು ಬಿದ್ದಿವೆ. ಕೆಲವು ಕಡೆ ಭಾಗಶಃ ಮನೆ ಹಾನಿಯಾಗಿದೆ. ಇದರಿಂದ ಈಗ ಅಲ್ಪ‌ಸ್ವಲ್ಪ ಪರಿಹಾರ ಧನ ನೀಡುವ ಬದಲು, ಇನ್ನೆರಡು ದಿನ ಕಾದರೆ ಮನೆಯ ಉಳಿದ ಭಾಗಗಳು ಸಹ ಬಿಳುವ ಸಾಧ್ಯತೆಗಳಿವೆ. ಇದರಿಂದ ಅಧಿಕಾರಿಗಳು ಸ್ವಲ್ಪ ತಡೆದು ಸರ್ವೆ ನಡೆಸಿ, ವರದಿ ನೀಡಬೇಕಿದೆ ಎಂದರು. ನಮ್ಮ ತಂಡ ಮೂರು ಜಿಲ್ಲೆಗಳ ಪ್ರವಾಸ ಮುಗಿಸಿದೆ. ಸದ್ಯಕ್ಕೆ ತಾತ್ಕಾಲಿಕ ವರದಿಯನ್ನು ನಮ್ಮ ರಾಜ್ಯಾಧ್ಯಕ್ಷರಿಗೆ ನೀಡುತ್ತವೆ. ನಂತ್ರ ಅಂತಿಮ ವರದಿ‌ ನೀಡುತ್ತೆವೆ ಎಂದರು.

ಬೈಟ್: ಅನಿತಾ.ಕಣ್ಣಿರು‌ ಹಾಕಿದ ನಿರಾಶ್ರಿತರು.

ಬೈಟ್: ಕುಂಟಪ್ಪ. ನಿರಾಶ್ರಿತರು.

ಬೈಟ್: ಕೆ.ಎಸ್.ಈಶ್ವರಪ್ಪ. ಶಾಸಕ.
Last Updated : Aug 11, 2019, 6:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.