ETV Bharat / city

ರಾಜ್ಯ ಸರ್ಕಾರಕ್ಕೆ ಒಂದು ವರ್ಷ: ಫಲಾನುಭವಿಗಳ ಜೊತೆ ಆನ್​ಲೈನ್​​ ಮೂಲಕ ಸಿಎಂ ಮಾತುಕತೆ - ಸಂಸದ ಬಿ.ವೈ.ರಾಘವೇಂದ್ರ

ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ನಡೆದ 'ಸವಾಲುಗಳ 1 ವರ್ಷ; ಪರಿಹಾರದ ಸ್ಪರ್ಶ' ಕಾರ್ಯಕ್ರಮವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು.

Book launch
ವರ್ಷ ಪೂರೈಸಿದ ಹಿನ್ನೆಲೆ ಬಿಜೆಪಿ ಸರ್ಕಾರದ ಸಾಧನೆಗಳ ಪುಸ್ತಕ ಬಿಡುಗಡೆ
author img

By

Published : Jul 27, 2020, 4:35 PM IST

ಶಿವಮೊಗ್ಗ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಸವಾಲುಗಳ 1 ವರ್ಷ; ಪರಿಹಾರದ ಸ್ಪರ್ಶ ಎಂಬ ಶೀರ್ಷಿಕೆಯಡಿ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ‌ ಆನ್​​​ಲೈನ್​ ಮೂಲಕ ಫಲಾನುಭವಿಗಳೊಂದಿಗೆ ಮಾತನಾಡಿದರು.

ಸರ್ಕಾರದ ಯೋಜನೆಗಳಿಂದಾದ ಪ್ರಯೋಜನಗಳನ್ನು ಯಡಿಯೂರಪ್ಪ ಅವರಿಗೆ ತಿಳಿಸಿದ ಫಲಾನುಭವಿಗಳು, ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಕೊರೊನಾದಿಂದ ಬಳಲುವಾಗ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಿ ಗುಣಮುಖರಾಗುವಂತೆ ಮಾಡಿದ ನಿಮಗೆ ಧನ್ಯವಾದ ಎಂದು ಬಿಎಸ್​​ವೈಗೆ ವಿಜಯಪುರದ ಗರ್ಭಿಣಿಯೊಬ್ಬರು ಹೇಳಿದರು. ಈ ವೇಳೆ ಯಡಿಯೂರಪ್ಪ ಸಹ‌ ಮಹಿಳೆಗೆ ಧೈರ್ಯ ತುಂಬಿದರು.

'ಸವಾಲುಗಳ 1 ವರ್ಷ; ಪರಿಹಾರದ ಸ್ಪರ್ಶ' ಕಾರ್ಯಕ್ರಮ

ಶಿವಮೊಗ್ಗದ ಹೊನ್ನವಿಲೆ ಗ್ರಾಮದ ವಿಧವೆ ಮಹಿಳೆ ಮಂಜುಳ ಶಿವಣ್ಣ ಮಾತನಾಡಿ, ಕಳೆದ ವರ್ಷ ನಮ್ಮ ಮನೆ ಬಿದ್ದು ಹೋಗಿತ್ತು. ನಂತರ ಸರ್ಕಾರ ಮನೆ ನಿರ್ಮಾಣಕ್ಕೆ ಹಂತ ಹಂತವಾಗಿ ₹5 ಲಕ್ಷ ಹಣ ನೀಡಿತು. ಇದರಿಂದ ಒಂದು ಗೂಡು ಕಟ್ಟಿಕೊಳ್ಳಲಾಯಿತು. ನಿಮಗೆ ಧನ್ಯವಾದಗಳು ಎಂದರು. ಇದೇ ರೀತಿ ರಾಜ್ಯದ ಪ್ರತಿಯೊಂದು ಜಿಲ್ಲೆಗಳಿಂದ ಫಲಾನುಭವಿಗಳು ಸಿಎಂ ಜೊತೆ ನೇರವಾಗಿ ಮಾತನಾಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಸಚಿವ ಕೆ.ಎಸ್.ಈಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸಿ ಹಾವೇರಿಯಲ್ಲಿ ನಡೆಯಲಿರುವ ಮತ್ತೊಂದು ಕಾರ್ಯಕ್ರಮಕ್ಕೆ ತೆರಳಿದರು. ಈ ವೇಳೆ ಬಿಜೆಪಿ ಸರ್ಕಾರದ ಸಾಧನೆಗಳ ಪುಸ್ತಕ ಬಿಡುಗಡೆ ಮಾಡಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸರ್ಕಾರವು ಕಳೆದ ವರ್ಷ ಪ್ರವಾಹದಿಂದ ನಲುಗಿತ್ತು. ಈಗ ಕೋವಿಡ್ ಎದುರಿಸುತ್ತಿದೆ. ಪ್ರವಾಹದಿಂದ ನಷ್ಟ ಅನುಭವಿಸಿರುವ ಫಲಾನುಭವಿಗಳಿಗೆ ನೇರವಾಗಿ‌ ಪರಿಹಾರ ನೀಡಿದೆ. ಅದೇ ರೀತಿ ಕೋವಿಡ್​​ಅನ್ನು ಸಹ ಅಷ್ಟೇ ಸಮರ್ಥವಾಗಿ ಎದುರಿಸುತ್ತಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.