ಶಿವಮೊಗ್ಗ: ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಜಿಲ್ಲೆಯ ಸಾಗರ ಟೌನ್ ಪೊಲೀಸರು ಬಂಧಿಸಿದ್ದು, ಬಂಧಿತರಿಂದ 30.50 ಲಕ್ಷ ಮೌಲ್ಯದ ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ. ಸಾಗರದಲ್ಲಿ ನಡೆದ ಬೈಕ್ ಕಳ್ಳತನ ಕೇಸ್ ಬೆನ್ನತ್ತಿದ್ದ ಪೊಲೀಸರು ಹಾವೇರಿ ಪಟ್ಟಣದ ನಾಗೇಂದ್ರಮಟ್ಟಿಯ ಸುದೀಪ್ ಅಲಿಯಾಸ್ ಚೂಪಾ (19), ಅಜೇಯ ಅಲಿಯಾಸ್ ಅಜ್ಜಪ್ಪ (20) ಹಾಗೂ ಹಾವೇರಿ ಸಿದ್ದರಗುಡಿಯ ಗಂಗಾಧರ್ ಅಲಿಯಾಸ್ ಸಂಜುನನ್ನು (23) ಬಂಧಿಸಿ ವಿಚಾರಿಸಿದಾಗ ಸತ್ಯಾಂಶ ಹೊರ ಬಂದಿದೆ.
ಓದಿ: ಯೂಟ್ಯೂಬ್ ನೋಡಿ ಬುಲೆಟ್ ಬೈಕ್ ಕದಿಯುವ ಖಯಾಲಿ.. ಏಳು ಮಂದಿ ಪದವೀಧರರು ಅರೆಸ್ಟ್
ಆರೋಪಿಗಳ ವಿಚಾರಣೆ ವೇಳೆ ಶಿವಮೊಗ್ಗ ಜಿಲ್ಲೆ ಸೇರಿದಂತೆ ಹಾವೇರಿ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಬೈಕ್ ಕಳ್ಳತನ ಮಾಡಿದ್ದರ ಬಗ್ಗೆ ಒಪ್ಪಿಕೊಂಡಿದ್ದಾರೆ. ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಪುನಃ ಕಸ್ಟಡಿಗೆ ಪಡೆದು ಬೈಕ್ ಖರೀದಿಸಿದ ಹಾವೇರಿಯ ಗುರುರಾಜ್ (25) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ ಅಂದಾಜು 30.50 ಲಕ್ಷ ರೂಪಾಯಿ ಮೌಲ್ಯದ ಒಟ್ಟು 22 ಬೈಕ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಪ್ರಕರಣವನ್ನು ಸಿಪಿಐ ಕಾರ್ಗಲ್ ನೇತೃತ್ವದ ಪೊಲೀಸರ ಬಳಗ ಭೇದಿಸಿದೆ.