ETV Bharat / city

ಶಿವಮೊಗ್ಗದಲ್ಲಿ ಡ್ರೈನೇಜ್​​ಗೆ ಬಿದ್ದ ಬೈಕ್: ಅದೃಷ್ಟವಶಾತ್ ಸವಾರ ಪಾರು - ಶಿವಮೊಗ್ಗದಲ್ಲಿ ಡ್ರೈನೇಜ್​​ಗೆ ಬಿದ್ದ ಬೈಕ್

ಕೆಲಸ ಮುಗಿಸಿ ಬೈಕ್​​ನಲ್ಲಿ ಮನೆಗೆ ಮರಳುತ್ತಿದ್ದ ವ್ಯಕ್ತಿಯೋರ್ವ ಡ್ರೈನೇಜ್​​ಗೆ ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಶಿವಮೊಗ್ಗ ನಗರದ ಜೈಲ್ ರಸ್ತೆಯಲ್ಲಿ ಈ ಘಟನೆ ನಡೆದಿದೆ.

Bike fell down Drainage
ಡ್ರೈನೇಜ್​​ಗೆ ಬಿದ್ದ ಬೈಕ್
author img

By

Published : Jan 7, 2022, 7:43 AM IST

ಶಿವಮೊಗ್ಗ: ಅವೈಜ್ಞಾನಿಕ ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ನಗರದಲ್ಲಿ ನಿತ್ಯ ಜನರು ಒಂದಲ್ಲಾ ಒಂದು ಸಮಸ್ಯೆಗೆ ಒಳಗಾಗುತ್ತಿದ್ದಾರೆ. ನಿನ್ನೆ (ಗುರುವಾರ) ರಾತ್ರಿ 10-40ರ ವೇಳೆಗೆ ಕೆಲಸ ಮುಗಿಸಿ ಬೈಕ್​​ನಲ್ಲಿ ಮನೆಗೆ ಮರಳುತ್ತಿದ್ದ ವ್ಯಕ್ತಿಯೋರ್ವ ಸ್ಮಾರ್ಟ್ ಸಿಟಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಡ್ರೈನೇಜ್​​ಗೆ ಬಿದ್ದಿದ್ದಾನೆ.

ಡ್ರೈನೇಜ್​​ಗೆ ಬಿದ್ದ ಬೈಕ್..

ನಗರದ ಜೈಲ್ ರಸ್ತೆಯಲ್ಲಿ ದೊಡ್ಡ ದೊಡ್ಡ ಡ್ರೈನೇಜ್​ಗಳನ್ನು ಅಗೆದು ಹಾಗೇ ಬೀಡಲಾಗಿದೆ. ಅಂದಾಜು 8 ಅಡಿ ಆಳ 7 ಅಡಿ ಉದ್ದ ಹಾಗೂ 4 ಅಡಿ ಅಗಲ ಇರುವ ಈ ಡ್ರೈನೇಜ್​​ನಲ್ಲಿ ಬೈಕ್​​ ವಾಹನ ಸವಾರ ಬಿದ್ದಿದ್ದಾನೆ. ಅದೃಷ್ಟವಶಾತ್​​ ಬೈಕ್​​ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದು, ಬೈಕ್ ಜಖಂಗೊಂಡಿದೆ. ಡ್ರೈನೇಜ್​​ಗಳನ್ನು ಮಾಡಿ ಮುಚ್ಚದೇ ಇರುವುದೇ ಈ ಅವಘಡಕ್ಕೆ ಕಾರಣ ಎನ್ನಲಾಗ್ತಿದೆ.

ಇದನ್ನೂ ಓದಿ: ಗ್ರೀನ್​​ ಕಾರಿಡಾರ್​​​​​​ ಮೂಲಕ 11 ನಿಮಿಷದಲ್ಲಿ ಮೃತ ವ್ಯಕ್ತಿಯ ಹೃದಯ ಆಸ್ಪತ್ರೆಗೆ ರವಾನೆ: ಪೊಲೀಸರಿಗೆ ಧನ್ಯವಾದ ತಿಳಿಸಿದ ಏಮ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.