ETV Bharat / city

Areca nut: ಜಾರ್ಖಂಡ್‌ ಸಂಸದನ ಅಡಿಕೆ ನಿಷೇಧ ಪ್ರಸ್ತಾವನೆ: ಶಿವಮೊಗ್ಗ ಬೆಳೆಗಾರರ ಆಕ್ರೋಶ - ಅಡಿಕೆಯಲ್ಲಿ ವಿಷಕಾರಿ ಅಂಶ

ಅಡಿಕೆ (Areca nut) ಮಾನವನ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ ಎಂದು ಜಾರ್ಖಂಡ್‌ ಸಂಸದ ನಿಶಿಕಾಂತ್‌ ದುಬೆ (Jharkhand MP Nishikant Dubey) ನೀಡಿರುವ ಹೇಳಿಕೆಗೆ ಶಿವಮೊಗ್ಗ ಜಿಲ್ಲಾ ಅಡಿಕೆ ಬೆಳೆಗಾರರ ಸಂಘ (Shivamogga Areca nut Growers Association) ತೀವ್ರವಾಗಿ ಖಂಡಿಸಿದೆ.

areca nut growers association outrage on nishikant dubeys arecanut statement
ನಿಶಿಕಾಂತ್ ದುಬೆ ಹೇಳಿಕೆಗೆ ಖಂಡನೆ
author img

By

Published : Nov 14, 2021, 7:58 AM IST

Updated : Nov 14, 2021, 8:17 AM IST

ಶಿವಮೊಗ್ಗ: ಜಾರ್ಖಂಡ್ ಸಂಸದ ನಿಶಿಕಾಂತ್ ದುಬೆ (Nishikant Dubey) ಅಡಿಕೆಯಲ್ಲಿ ವಿಷಕಾರಿ ಅಂಶವಿದ್ದು, ಇದು ಆರೋಗ್ಯಕ್ಕೆ ಹಾನಿಕಾರಕ (Areca nut is harmful to health) ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವುದನ್ನು ಜಿಲ್ಲಾ ಅಡಿಕೆ ಬೆಳೆಗಾರರ ಸಂಘ (Areca nut Growers Association Shivamogga) ತೀವ್ರವಾಗಿ ಖಂಡಿಸಿದೆ.

ಈ ಕುರಿತು ನಿನ್ನೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಎ.ರಮೇಶ ಹೆಗ್ಡೆ (B.A.Ramesh Hegde), ಒಂದು ಕಡೆ ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi) ಅಡಿಕೆಗೆ ಗೌರವ ತಂದುಕೊಡುತ್ತೇವೆ. ಬೆಳೆಗಾರರ ಹಿತರಕ್ಷಣೆ ಮಾಡುತ್ತೇವೆ ಎಂದು ಚುನಾವಣಾ ಪ್ರಚಾರ ಮಾಡಿ ಗೆದ್ದು ಬಂದು ಸರ್ಕಾರ ನಡೆಸುತ್ತಿದ್ದಾರೆ. ಈಗ ತಮ್ಮದೇ ಪಕ್ಷದ ಸಂಸದರೊಬ್ಬರು ಅಡಿಕೆಯ ಮಾನ ತೆಗೆಯುತ್ತಿದ್ದರೂ ಕೂಡ ಸುಮ್ಮನಿದ್ದಾರೆ. ಬಿಜೆಪಿ ಸರ್ಕಾರ ಬಂದ ಮೇಲೆ ಅಡಿಕೆಯ ಮಾನ ಹೋಗಿದೆ. ಇದು ಇವತ್ತಿನ ಮಾತಲ್ಲ. 2000 ಇಸವಿಯಲ್ಲಿಯೇ ವಾಜಪೇಯಿ ನೇತೃತ್ವದ ಎನ್.ಡಿ.ಎ ಸರ್ಕಾರ ಇದ್ದಾಗ ಅಂದಿನ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್ ರಂಗಮೂರ್ತಿ, ಪಿ. ರಾಮಭಟ್ ಮುಂತಾದವರು ಅಡಿಕೆ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆ ಎಂದು ಹೇಳಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಲಕ್ಷಾಂತರ ರೈತರ ಬದುಕಿಗೆ ಆಸರೆ:

ಭಾರತೀಯ ಸಂಸ್ಕೃತಿಯಲ್ಲಿ ಅಡಿಕೆಗೆ ಪೂಜ್ಯ ಸ್ಥಾನವಿದೆ. ಅಡಿಕೆ ಬೆಳೆ ಲಕ್ಷಾಂತರ ರೈತರ (Areca nut Grower) ಬದುಕಿಗೆ ಆಸರೆಯಾಗಿದೆ. ಔಷಧೀಯ ಗುಣ ಅಡಿಕೆಯಲ್ಲಿದೆ. ಹೀಗಿದ್ದರೂ ನಿಶಿಕಾಂತ್ ದುಬೆ ಅವರು ಅಡಿಕೆ ನಿಷೇಧ ಮಾಡಬೇಕು ಎಂದು ಹೇಳಿರುವುದು ಅತ್ಯಂತ ಖಂಡನೀಯ. ಅಡಿಕೆ ವಿರೋಧದ ಮುಂದುವರಿದ ಅಪಪ್ರಚಾರದ ಅಭಿಯಾನ ಇದಾಗಿದೆ.

ಇದಲ್ಲದೇ ಕೇಂದ್ರ ಸಚಿವ ಅನುಪ್ರಿಯ ಪಟೇಲ್, ಅಶ್ವಿನ್ ಕುಮಾರ್ ಕೂಡ ಅಡಿಕೆ ವಿರೋಧಿಗಳಾಗಿದ್ದರು. ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಕೃಷಿ ವೆಬ್‌ಸೈಟ್‌ನಲ್ಲಿ ಅಡಿಕೆಯನ್ನು ಡ್ರಗ್ಸ್ ಪಟ್ಟಿಗೆ ಸೇರಿಸಿದ್ದರು. ಹೀಗೆ ಬಿಜೆಪಿ ಸರ್ಕಾರ ಅಡಿಕೆಗೆ ಅವಮಾನ ಮಾಡುತ್ತಲೇ ಬಂದಿದೆ. 2018 ರ ಚುನಾವಣೆಯ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀರ್ಥಹಳ್ಳಿಯಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪಿಸುವುದಾಗಿ ಹೇಳಿದ್ದರು. ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ಅಡಿಕೆಗೆ ಗೌರವ ತಂದುಕೊಡುವುದಾಗಿ ಹೇಳಿದ್ದರು. ಆದರೆ, ಅಡಿಕೆಗೆ ಇದ್ದ ಗೌರವವನ್ನು ಕೂಡಾ ಇವರೆಲ್ಲ ಕಳೆದಿದ್ದಾರೆ ಎಂದರು.

ಇದನ್ನೂ ಓದಿ: ಅಡಿಕೆ ಕ್ಯಾನ್ಸರ್ ಕಾರಕವಲ್ಲ, ಈ ಬಗ್ಗೆ ತಪ್ಪು ಮಾಹಿತಿ ನೀಡಬೇಡಿ: ಕ್ಯಾಂಪ್ಕೊ

ನಿಶಿಕಾಂತ್ ದುಬೆ ಹೇಳಿಕೆಯನ್ನು (Nishikant Dubey statement on Areca nut) ರಾಜ್ಯದ ಬಿಜೆಪಿ ಸಂಸದರು ಮೌನವಾಗಿ ಸ್ವಾಗತಿಸಿದ್ದಾರೆ. ಇವರ ಮೌನ ಅಡಿಕೆ ಹಾನಿಕಾರಕ ಎಂದೇ ಅರ್ಥವಾಗುತ್ತದೆ. ತಮ್ಮ ಮೌನ ಬಿಟ್ಟು ಸಂಸದ ನಿಶಿಕಾಂತ್ ಹೇಳಿಕೆಯನ್ನು ಖಂಡಿಸಬೇಕು. ಮೋದಿಯವರು ಸುಪ್ರೀಂಕೋರ್ಟ್​ಗೆ ಅಡಿಕೆ ಹಾನಿಕಾರಕ ಅಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿ, ಅಡಿಕೆ ಬೆಳೆಗಾರರ ಹಿತ ಕಾಯಬೇಕು ಎಂದು ಒತ್ತಾಯಿಸಿದರು.

Last Updated : Nov 14, 2021, 8:17 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.