ETV Bharat / city

ದೇಶ ವಿರೋಧಿ‌ ಮಾನಸಿಕತೆಯನ್ನು‌ ಚಿವುಟಿ‌ ಹಾಕಬೇಕಿದೆ: ಸಚಿವ ಸಿ.ಟಿ.ರವಿ

author img

By

Published : Feb 15, 2020, 9:59 PM IST

ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿಗಳು ದೇಶ ವಿರೋಧಿ‌ ಘೋಷಣೆ ಹಾಕಿರುವುದನ್ನು ತೀವ್ರವಾಗಿ ಖಂಡಿಸಿದ ಸಚಿವ ಸಿ. ಟಿ. ರವಿ, ಈ‌ ದೇಶದ ಅನ್ನ ತಿಂದು ಬೇರೆ ದೇಶಕ್ಕೆ ನಿಷ್ಠೆ ತೋರಿಸುವವರನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಇದನ್ನು ಖಂಡಿಸಲು ಯಾವ ಪದ ಬಳಕೆ ಮಾಡಿದ್ರೂ‌ ಸಹ ಕಡಿಮೆಯೇ ಎಂದು ಕಿಡಿಕಾರಿದ್ದಾರೆ.

anti-country-mentality-should-be-churned-out-minister-c-t-ravi
ಸಚಿವ ಸಿ. ಟಿ. ರವಿ

ಶಿವಮೊಗ್ಗ: ನಮ್ಮ ದೇಶದ ಅನ್ನ ತಿಂದು ಬೇರೆ ದೇಶಕ್ಕೆ ನಿಷ್ಟೆ ತೋರಿಸುವವರ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಿದೆ. ದೇಶ ವಿರೋಧಿ ಮಾನಸಿಕತೆಯನ್ನು ಗುರುತಿಸಿ ಅದನ್ನು ಚಿವುಟಿ ಹಾಕಬೇಕಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ. ಟಿ. ರವಿ ಹೇಳಿದ್ದಾರೆ.

ನಗರದಲ್ಲಿ‌ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ದೇಶ ವಿರೋಧಿ‌ ಘೋಷಣೆ ಹಾಕಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ‌ ದೇಶದ ಅನ್ನ ತಿಂದು ಬೇರೆ ದೇಶಕ್ಕೆ ನಿಷ್ಟೆ ತೋರಿಸುವವರ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಇದನ್ನು ಖಂಡಿಸಲು ಯಾವ ಪದ ಬಳಕೆ ಮಾಡಿದ್ರೂ‌ ಸಹ ಕಡಿಮೆಯೇ ಎಂದರು.

ಹುಬ್ಬಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ದೇಶ ವಿರೋಧಿ‌ ಘೋಷಣೆ ಪ್ರಕರಣ ಕುರಿತು ಸಿ. ಟಿ. ರವಿ ಹೇಳಿಕೆ

ಪಾಕಿಸ್ತಾನದ ಪರ ಘೋಷಣೆ ಹಾಕುವ ಮಾನಸಿಕತೆಯನ್ನು ಚಿವುಟಿ ಹಾಕಬೇಕಿದೆ. ದೇಶದ್ರೋಹಿ ಮಾನಸಿಕತೆಯನ್ನು ಚಿವುಟಿ‌ ಹಾಕದೆ ಹೋದ್ರೆ, ಕಷ್ಟಕರವಾಗುತ್ತದೆ. ಹೊಸ ಶತ್ರುಗಳನ್ನು ಗುರುತಿಸಬಹುದು ಆದ್ರೆ ಒಳಗಿನ ಶತ್ರುಗಳನ್ನು ಗುರುತಿಸುವುದು ಕಷ್ಟಕರ. ನಮ್ಮ ಸೈನಿಕರಿಗೆ ಶತ್ರುಗಳನ್ನು ಹೆದರಿಸುವ ಶಕ್ತಿ ಇದೆ. ಆದ್ರೆ, ನಾಮಕಾರಮ್ ಗಳನ್ನು ಎದುರಿಸುವುದನ್ನು ಸಮಾಜ ಮಾಡಬೇಕಿದೆ ಎಂದು ಹೇಳಿದರು.

ಬಂಜಾರ ಸಮುದಾಯದ ಸಂಸ್ಕೃತಿ ಹಾಗೂ ಭಾಷಾ ಅಕಾಡೆಮಿ ಮಾಡಬೇಕು ಎಂದು ಬಂಜಾರ ಸಮುದಾಯ ಕೇಳಿ ಕೊಂಡಿತ್ತು. ಈ ಕುರಿತು ಸಿಎಂ ಜೊತೆ ಮಾತನಾಡಿದ್ದೆವೆ. ಇದಕ್ಕೆ ಬಿಎಸ್​ವೈ ಸಹ ಪೂರಕವಾಗಿ ಸ್ಪಂದಿಸಿದ್ದಾರೆ. ಮುಂದಿನ ಬಜೆಟ್ ನಲ್ಲಿ ಬಂಜಾರ ಭಾಷಾ ಸಂಸ್ಕೃತಿ ಅಕಾಡಮಿಯನ್ನು ಮಾಡುತ್ತಿದ್ದೆವೆ ಎಂದರು.

ಇದೇ ರೀತಿ ತುಳು ಭಾಷೆಗೆ ರಾಜ್ಯ ಭಾಷೆಯ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆಯನ್ನು‌ ಆ ಭಾಗದ ಸಂಸದರು ಹಾಗೂ ಶಾಸಕರು ಇಟ್ಟಿದ್ದರು. ಇದನ್ನು ಸಂಪುಟದಲ್ಲಿ ಚರ್ಚೆ ನಡೆಸಿ,‌ ಕೇಂದ್ರಕ್ಕೆ‌ ಕಳುಹಿಸಲಾಗುವುದು ಎಂದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.