ETV Bharat / city

ರಾಜ್ಯದ ಅಮರನಾಥ ಯಾತ್ರಿಗಳು ಸುರಕ್ಷಿತವಾಗಿದ್ದು, ಎಲ್ಲರನ್ನೂ ವಾಪಸ್​ ಕರೆತರಲಾಗುವುದು: ಆರಗ ಜ್ಞಾನೇಂದ್ರ

ಅಮರನಾಥ ಯಾತ್ರೆಯಲ್ಲಿ ಸಿಲುಕಿರುವ ರಾಜ್ಯದ ಯಾತ್ರಾತ್ರಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆ ತರಲು ರಾಜ್ಯ ಸರ್ಕಾರ ಬದ್ದವಾಗಿದೆ. ಇದಕ್ಕಾಗಿ ಅಧಿಕಾರಿಗಳ ತಂಡವನ್ನು ರಚನೆ ಮಾಡಲಾಗಿದೆ-ಗೃಹ ಸಚಿವ ಆರಗ ಜ್ಞಾನೇಂದ್ರ.

Home Minister Araga Jnanendra
ಗೃಹ ಸಚಿವ ಆರಗ ಜ್ಞಾನೇಂದ್ರ
author img

By

Published : Jul 9, 2022, 2:48 PM IST

ಶಿವಮೊಗ್ಗ: ಅಮರನಾಥ ಯಾತ್ರೆಯಲ್ಲಿ ಸಿಲುಕಿರುವ ರಾಜ್ಯದ ಎಲ್ಲ ಯಾತ್ರಾತ್ರಿಗಳನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೂಂದಿಗೆ ಮಾತನಾಡಿದ ಅವರು, ಅಮರನಾಥ ಯಾತ್ರೆಯಲ್ಲಿ ಸಿಲುಕಿರುವ ರಾಜ್ಯದ ಯಾತ್ರಾತ್ರಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆ ತರಲು ರಾಜ್ಯ ಸರ್ಕಾರ ಬದ್ದವಾಗಿದೆ. ಇದಕ್ಕಾಗಿ ಅಧಿಕಾರಿಗಳ ತಂಡವನ್ನು ರಚನೆ ಮಾಡಲಾಗಿದೆ. ಈ ಕುರಿತು ರಾಜ್ಯ ಸರ್ಕಾರ ಕೇಂದ್ರದ ಜೊತೆ ಸಂಪರ್ಕದಲ್ಲಿದೆ ಎಂದರು.

ಗೃಹ ಸಚಿವ ಆರಗ ಜ್ಞಾನೇಂದ್ರ

ಮಳೆ ಪರಿಹಾರ ಒದಗಿಸಲು ಕ್ರಮ: ಇನ್ನು ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ. ಈ ಕುರಿತು ಸಿಎಂ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಮಳೆ ಹಾನಿ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ಎಲ್ಲ ಅಧಿಕಾರಿಗಳಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ. ಮಳೆ ಹಾನಿಯನ್ನು ತಡೆಯಲು ಆಗಲ್ಲ, ಆದರೆ, ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಮಳೆ ಪರಿಹಾರಕ್ಕೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಬಳಿ ಹಣ ನೀಡಲಾಗಿದೆ. ಈ ಹಣವನ್ನು ಖರ್ಚು ಮಾಡಲು ಸೂಚಿಸಲಾಗಿದೆ ಎಂದರು.‌

ಯಾರಿಗೂ ಅಗೌರವವನ್ನುಂಟು ಮಾಡಿಲ್ಲ: ಹರ್ಷ ಸಹೋದರಿ ಅಶ್ವಿನಿ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ, ಹರ್ಷನ ಕುಟುಂಬದವರ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯೆ ನೀಡಲ್ಲ. ಕಾರಣ ಅವರ ಕುಟುಂಬದವರ ಬಗ್ಗೆ ನಮಗೆ ಗೌರವವಿದೆ. ನಾನು ಕೂಡ ತಕ್ಷಣ ಹೋಗಿ ಸಾಂತ್ವನ ಹೇಳಿದ್ದೇನೆ. ಏನೂ ಮಾಡಬೇಕು ಎಲ್ಲವನ್ನು ಮಾಡಲಾಗಿದೆ ಎಂದರು.

ಜೈಲಿನಲ್ಲಿ‌ ಮೊಬೈಲ್ ಸಿಕ್ಕಿದೆ ಅಂತಾ ಇಷ್ಟೆಲ್ಲಾ ಮಾಡ್ತಾ ಇದ್ದಾರೆ. ಅವರಿಗೆ ಏನೂ ಮಾಹಿತಿ ನೀಡಬೇಕೋ ಅದೆಲ್ಲಾವನ್ನು ನೀಡಿದ್ದೇೆನೆ. ಆದರೆ ಅವರಿಗೆ ಯಾಕೋ ಅಸಮಾಧಾನವಾಗಿದೆ ಎಂದು ಗೃಹಸಚಿವರು ಬೇಸರ ವ್ಯಕ್ತಪಡಿಸಿದರು.

ನಾನೊಬ್ಬ ಗೃಹ ಸಚಿವನಾಗಿ ಅವರಿಗೆ ಏನೆಲ್ಲ ಮಾಹಿತಿ ನೀಡಬಹುದಾಗಿತ್ತೊ ಅದನ್ನೆಲ್ಲ ನೀಡಿದ್ದೇೆನೆ. ನಾನು ಯಾರಿಗೂ ಅಗೌರವವನನ್ನುಂಟು ಮಾಡಿಲ್ಲ. ಅಶ್ವಿನಿ ಅವರು ನನ್ನ ಬಳಿ ಬಂದಿದ್ದರು. ಅವರು ನನ್ನ ಬಳಿ ಬಂದು ಅಸಮಾಧಾನದಿಂದ ಮಾತನಾಡಿಲ್ಲ, ಅವರು ಶ್ರೀರಾಮ ಸೇನೆಯ 20 ಜನರೂಂದಿಗೆ ಆಗಮಿಸಿದ್ದರು‌. ಅಶ್ವಿನಿ ಅವರ ವರ್ತನೆಯಿಂದ ಶ್ರೀರಾಮ ಸೇನೆ ಕಾರ್ಯಕರ್ತರಿಗೆ ಬೇಸರವನ್ನುಂಟು ಮಾಡಿದೆ ಎಂದರು.

ರಾಜೀನಾಮೆ ವಿಚಾರವಾಗಿ ಮಾತನಾಡುತ್ತಾ, ರಾಜ್ಯದಲ್ಲಿ ಏನಾದರೂ ಆದರೆ ಗೃಹ ಸಚಿವರ ರಾಜೀನಾಮೆ ಕೇಳ್ತಾರೆ. ಅವರು ಗೃಹ ಸಚಿವರ ರಾಜೀನಾಮೆ ಕೇಳದೆ ಇನ್ನ್ಯಾರನ್ನು ಕೇಳುತ್ತಾರೆ. ಒಬ್ಬೊಬ್ಬರ ಮನಸ್ಸು ಒಂದೊಂದು ರೀತಿ ಇರುತ್ತದೆ. ಏನೂ ಮಾಡಲು ಆಗಲ್ಲ ಎಂದರು.

ಇದನ್ನೂ ಓದಿ: ಅಮರನಾಥ ಮೇಘಸ್ಫೋಟ.. ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಕ್ರಮ - ಸಚಿವ ಆರ್.ಅಶೋಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.