ETV Bharat / city

ಶಿವಮೊಗ್ಗದಲ್ಲಿ ಭರ್ಜರಿ ಪ್ರಚಾರ... ನಾಯಕರ ಹೆಸರು ಹೇಳಲು ತಡಬಡಾಯಿಸಿದ ಮಧು ಬಂಗಾರಪ್ಪ - undefined

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಇಂದು ಮೈತ್ರಿ ಪಕ್ಷದ ಕಾರ್ಯಕರ್ತರುಗಳ ಜೊತೆಗೆ ಮತಬೇಟೆ ನಡೆಸಿದರು. ಈ ವೇಳೆ ಪಕ್ಷದ ಹಿರಿಯ ನಾಯಕರುಗಳ ಹೆಸರು ಹೇಳಲು ತಡಬಡಾಯಿಸಿದರು.

ಮಧು ಬಂಗಾರಪ್ಪ
author img

By

Published : Mar 27, 2019, 5:30 PM IST

ಶಿವಮೊಗ್ಗ: ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ನಗರದ ವಿವಿಧ ವಾರ್ಡ್​ಗಳಲ್ಲಿ ಪ್ರಚಾರ ನಡೆಸಿದರು. ಇದೇ ವೇಳೆ ನಗರದ ಅಶೋಕ ನಗರದ ಪಾರ್ಕ್ ಮುಂಭಾಗದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಪರ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಜಂಟಿಯಾಗಿ ಪ್ರಚಾರ ಸಭೆ ನಡೆಸಿದರು.

ಪ್ರಚಾರ ಸಭೆಯಲ್ಲಿ ಮಾತನಾಡಿದ ಮಧು ಬಂಗಾರಪ್ಪ, ನಿಮ್ಮ ಧ್ವನಿಯಾಗಿ ಸಂಸತ್​ನಲ್ಲಿ ನಾನು ಇರುತ್ತೇನೆ. ನಾನು ಕಳೆದ ಉಪಚುನಾವಣೆಯಲ್ಲಿ ಸೋತಿದ್ದೇನೆ. ಈ ಬಾರಿ ನಿಮ್ಮ ಮುಂದೆ ಮತ್ತೆ ಬಂದಿದ್ದೇನೆ. ನನಗೆ ಮತ ನೀಡಿ ಎಂದು ಮನವಿ ಮಾಡಿಕೊಂಡರು.

ಇದೇ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರುಗಳ ಹೆಸರನ್ನು ಹೇಳಲು ಮಧು ಬಂಗಾರಪ್ಪ ತಡಬಡಾಯಿಸಿದ ಘಟನೆಯೂ ನಡೆಯಿತು. ಕೆಲವರ ಹೆಸರು ಹೇಳಿ ಮತ್ತೆ ಕೆಲವರ ಹೆಸರನ್ನು ಹೇಳಲು ಗೊತ್ತಾಗದೆ ಹೋದಾಗ, ನಾನು ಕೆಲವರ ಹೆಸರನ್ನು ಹೇಳದೆ ಹೋದ್ರೆ ಬೇಜಾರಾಗಬೇಡಿ. ನಿಮ್ಮ ಹೆಸರನ್ನು ಹೇಳಲು ನನಗೆ ಇನ್ನೂ ಸ್ವಲ್ಪ ಕಾಲಾವಕಾಶ ಬೇಕು ಎಂದರು.

ಮಧು ಬಂಗಾರಪ್ಪ

ಗರಂ ಆದ ಮಧು...

ಬಂಗಾರಪ್ಪನವರ ಪುತ್ಥಳಿ ಇಟ್ಟುಕೊಂಡು ಬಿಜೆಪಿಯವರು ಮತಯಾಚನೆ ಮಾಡುತ್ತಿರುವ ಕುರಿತ ಪ್ರಶ್ನೆಗೆ ಮಧು ಬಂಗಾರಪ್ಪ ಗರಂ ಆದರು. ಈ ಕುರಿತ ಪ್ರಶ್ನೆಯನ್ನು ನನಗೆ ಕೇಳಬೇಡಿ.‌ ಬಂಗಾರಪ್ಪನವರ ಪುತ್ಥಳಿ ಇಟ್ಟುಕೊಂಡು ಹೋದ್ರೆ, ಸೊರಬದ ಜನ ಅಷ್ಟು ದಡ್ಡರಲ್ಲ. ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಮಧು ಬಂಗಾರಪ್ಪ ಖಾರವಾಗಿ ಉತ್ತರ ನೀಡಿದ್ದಾರೆ. ಅಲ್ಲದೆ ಈ ಕುರಿತು ಮುಂದೆ ನನಗೆ ಪ್ರಶ್ನೆ ಮಾಡಬೇಡಿ ಎಂದು ಮಾಧ್ಯಮದವರಲ್ಲಿ ವಿನಂತಿ ಮಾಡಿಕೊಂಡರು.

ಇನ್ನು ಬಿಜೆಪಿಯವರು ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಸುಳ್ಳಿನ ರಾಜಕಾರಣ ಬಹಳ ದಿನ ನಡೆಯುವುದಿಲ್ಲ. ಇವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ. ನಾನು ಲೋಕಸಭಾ ಕ್ಷೇತ್ರವನ್ನು ಎರಡು ಬಾರಿ ಸುತ್ತಿದ್ದೇನೆ. ಹೋದ ಕಡೆಯಲೆಲ್ಲಾ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಹೀಗಾಗಿ ಈ ಬಾರಿ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ ಎಂದರು.

ಏಪ್ರಿಲ್ 3 ರಂದು ನಾಮಪತ್ರ ಸಲ್ಲಿಸುತ್ತೇನೆ. ಅಂದು‌ ಸಿಎಂ ಕುಮಾರಸ್ವಾಮಿ ಆಗಮಿಸಲಿದ್ದಾರೆ. ಮಾರ್ಚ್ 30 ರಂದು ನನ್ನ ಪರ ಪ್ರಚಾರಕ್ಕೆ ಡಿ.ಕೆ.ಶಿವಕುಮಾರ್ ಭದ್ರಾವತಿಗೆ ಆಗಮಿಸಲಿದ್ದಾರೆ ಎಂದರು.

Intro:ಲೋಕಸಭ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಶಿವಮೊಗ್ಗ ನಗರದ ವಿವಿಧ ವಾರ್ಡ್ ಗಳಲ್ಲಿ ಪ್ರಚಾರ ನಡೆಸಿದರು. ನಗರದ ಅಶೋಕ ನಗರದ ಪಾರ್ಕ್ ಮುಂಭಾಗದಲ್ಲ ಮೈತ್ರಿ ಪಕ್ಷದ ಅಭ್ಯರ್ಥಿ ಪರ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಜಂಟಿಯಾಗಿ ಪ್ರಚಾರ ಸಭೆ ನಡೆಸಿದರು. ಮಧು ಬಂಗಾರಪ್ಪನವರು ನಿನ್ನೆ ಮತ್ತು ಇಂದು ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ವಾರ್ಡ್ ಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

Body:ಪ್ರಚಾರ ಸಭೆಯಲ್ಲಿ ಮಧು ಬಂಗಾರಪ್ಪನವರು ನಿಮ್ಮ ಧ್ವನಿಯಾಗಿ ಸಂಸತ್ ನಲ್ಲಿ ನಾನು ಇರುತ್ತೆನೆ. ನಾನು ಕಳೆದ ಉಪ ಚುನಾವಣೆಯಲ್ಲಿ ಸೋತಿದ್ದೆನೆ. ಈ ಬಾರಿ ನಿಮ್ಮ ಮುಂದೆ ಬಂದಿದ್ದನೆ. ನನಗೆ ಮತ ನೀಡಿ ಎಂದು ಮನವಿ ಮಾಡಿ ಕೊಂಡರು. ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರುಗಳ ಹೆಸರನ್ನು ಹೇಳಲು ಮಧು ಬಂಗಾರಪ್ಪ ತಡ ಬಡಾಯಿಸಿದರು. ಕೆಲವರು ಹೆಸರು ಹೇಳಿ ಮತ್ತೆ ಕೆಲವರ ಹೆಸರನ್ನು ಹೇಳಲು ಗೂತ್ತಾಗದೆ ಹೋದಾಗ ನಾನು ಕೆಲವರ ಹೆಸರನ್ನು ಹೇಳದೆ ಹೋದ್ರೆ ಬೇಜಾರಾಗಬೇಡಿ..ನಿಮ್ಮ ಹೆಸರನ್ನು ಹೇಳಲು ನನಗೆ ಇನ್ನೂ ಸ್ವಲ್ಪ ಕಾಲಾವಕಾಶ ಬೇಕು ಎಂದರು.

Conclusion:ನಮ್ಮ ತಂದೆಯವರು ಸಮಾಜವಾದಿ ಪಕ್ಷದಲ್ಲಿ ಇದ್ದಾಗ ಕಾಂಗ್ರೆಸ್ ನ ಮಾಜಿ ಸೂಡಾ ಅಧ್ಯಕ್ಷ ರಮೇಶ್ ಕುಮಾರ್ ರವರು ಕಾಂಗ್ರೆಸ್ ನಲ್ಲಿದ್ದಾಗಲೂ ಸಹ ಸಹಾಯ ಮಾಡಿದ್ದರು. ಇದರಿಂದ ನಾನು ಹೆಸರನ್ನು ಹೇಳದೆ ಹೋದ್ರೆ ತಪ್ಪು ತಿಳಿಯಬೇಡಿ ಎಂದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.