ETV Bharat / city

ಕ್ರಿಕೆಟ್ ಆಡಿ ಅಭಿಮಾನಿಗಳನ್ನು ರಂಜಿಸಿದ ನಟ ದುನಿಯಾ ವಿಜಯ್

ಕೆ.ಎಸ್. ಈಶ್ವರಪ್ಪನವರ ಪುತ್ರ ಕೆ.ಇ. ಕಾಂತೇಶ್ ಹುಟ್ಟು ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಟ ದುನಿಯಾ ವಿಜಯ್ ಆಟ ಆಡುವ ಮೂಲಕ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದರು.

ಕೆ.ಇ ಕಾಂತೇಶ್ ಹುಟ್ಟು ಹಬ್ಬದ ಪ್ರಯುಕ್ತ   ಕ್ರಿಕೆಟ್ ಪಂದ್ಯಾವಳಿ ಆಯೋಜನೆ

author img

By

Published : Mar 22, 2021, 7:11 AM IST

ಶಿವಮೊಗ್ಗ: ನಗರದ ಎನ್ಇಎಸ್ ಮೈದಾನದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪನವರ ಪುತ್ರ ಕೆ.ಇ. ಕಾಂತೇಶ್ ಹುಟ್ಟು ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಟ ಆಡುವ ಮೂಲಕ ನೆರೆದಿದ್ದ ಅಭಿಮಾನಿಗಳನ್ನು ದುನಿಯಾ ವಿಜಯ್ ರಂಜಿಸಿದರು.

ಕೆ.ಇ. ಕಾಂತೇಶ್ ಹುಟ್ಟು ಹಬ್ಬದ ಪ್ರಯುಕ್ತ ಕ್ರಿಕೆಟ್ ಪಂದ್ಯಾವಳಿ ಆಯೋಜನೆ

ನಟ ದುನಿಯಾ ವಿಜಯ್ ನೇತೃತ್ವದ 'ಸಲಗ' ಚಿತ್ರ ತಂಡ ಹಾಗೂ ಕೆ.ಇ. ಕಾಂತೇಶ್ ಅಭಿಮಾನಿಗಳ ತಂಡದ ನಡುವೆ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಕ್ರಿಕೆಟ್ ಪಂದ್ಯಾವಳಿಯನ್ನು ಸಚಿವ ಕೆ.ಎಸ್ ಈಶ್ವರಪ್ಪ ಹಾಗೂ ದುನಿಯಾ ವಿಜಿ ಉದ್ಘಾಟಿಸಿದರು. ನಂತರ ಮಾತನಾಡಿದ ಸಚಿವ ಈಶ್ವರಪ್ಪ, ಏಪ್ರಿಲ್​ನಲ್ಲಿ 'ಸಲಗ' ಚಿತ್ರ ತೆರೆಕಾಣುತ್ತಿದೆ. ಅಂದು ಎಲ್ಲರೂ ಕುಟುಂಬ ಸಮೇತರಾಗಿ ಹೋಗಿ ಚಿತ್ರ ನೋಡಿ ಹಾರೈಸಿ. ನಾನೂ ಸಹ ಕುಟುಂಬ ಸಮೇತವಾಗಿ ಹೋಗಿ ಚಿತ್ರ ನೋಡುತ್ತೇನೆ. 'ಸಲಗ' ಸಿನಿಮಾ ಶತದಿನೋತ್ಸವ ಆಚರಿಸಲಿ ಎಂದು ಹಾರೈಸಿದರು.

ನಂತರ ಮಾತನಾಡಿದ ದುನಿಯಾ ವಿಜಯ್, ನಿಮ್ಮ ಅಭಿಮಾನಕ್ಕೆ ನಾನು ಚಿರಋಣಿ, ಕಾಂತೇಶ್ ಅವರಿಗೆ ದೇವರು ಆಯಸ್ಸು, ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸಿದರು.

ದುನಿಯಾ ವಿಜಯ್ ನೋಡಲು ಮುಗಿ ಬಿದ್ದ ಅಭಿಮಾನಿಗಳು:

ನಟ ದುನಿಯಾ ವಿಜಯ್ ಅವರನ್ನು ನೋಡಲು ಸಾವಿರಾರು ಜನ ಅಭಿಮಾನಿಗಳು ಮುಗಿಬಿದ್ದರು. ಪೊಲೀಸರು ಎಷ್ಟೇ ನಿಯಂತ್ರಿಸಿದರೂ ಕೂಡ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದ ದೃಶ್ಯ ಕಂಡುಬಂದಿತು.

ಈ ವೇಳೆ ನಟ ದುನಿಯಾ ವಿಜಯ್ ಪತ್ನಿ, ಪುತ್ರ ಹಾಗೂ ಮಹಾನಗರ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.