ETV Bharat / city

ಮೊದಲನೇ ಹಂತದ ಗ್ರಾಪಂ ಚುನಾವಣೆ : ಶಿವಮೊಗ್ಗದಲ್ಲಿ 4,111 ನಾಮಪತ್ರ ಸಲ್ಲಿಕೆ

ಪ್ರಥಮ ಹಂತದಲ್ಲಿ 113 ಗ್ರಾಮ ಪಂಚಾಯತ್​ನ ಒಟ್ಟು 1,212 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇಂದು ಪ್ರಥಮ ಹಂತದ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಈವರೆಗೆ 4,111 ನಾಮಪತ್ರ ಸಲ್ಲಿಕೆ ಮಾಡಲಾಗಿದೆ..

ಶಿವಕುಮಾರ್
ಶಿವಕುಮಾರ್
author img

By

Published : Dec 12, 2020, 6:58 AM IST

ಶಿವಮೊಗ್ಗ : ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಎರಡು ಹಂತದಲ್ಲಿ ನಡೆಯುತ್ತಿದೆ. ಶಿವಮೊಗ್ಗ ಉಪ ವಿಭಾಗದ ಶಿವಮೊಗ್ಗ, ಭದ್ರಾವತಿ ಹಾಗೂ ತೀರ್ಥಹಳ್ಳಿಯಲ್ಲಿ ಪ್ರಥಮ ಹಂತದ ಚುನಾವಣೆ ಡಿಸೆಂಬರ್ 22ಕ್ಕೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಶಿವಕುಮಾರ್​ ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಕೆ ಕುರಿತು ಮಾಹಿತಿ ನೀಡಿದ ಚುನಾವಣಾಧಿಕಾರಿ ಶಿವಕುಮಾರ್

ಪ್ರಥಮ ಹಂತದಲ್ಲಿ 113 ಗ್ರಾಮ ಪಂಚಾಯತ್​ನ ಒಟ್ಟು 1,212 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇಂದು ಪ್ರಥಮ ಹಂತದ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಈವರೆಗೆ 4,111 ನಾಮಪತ್ರ ಸಲ್ಲಿಕೆ ಮಾಡಲಾಗಿದೆ.

ತಾಲೂಕುವಾರು ನಾಮಪತ್ರ ಸಲ್ಲಿಕೆ ವಿವರ
ತಾಲೂಕುವಾರು ನಾಮಪತ್ರ ಸಲ್ಲಿಕೆ ವಿವರ

ತಾಲೂಕುವಾರು ನಾಮಪತ್ರ ಸಲ್ಲಿಕೆ ವಿವರ :

ಶಿವಮೊಗ್ಗ- 1703

ಭದ್ರಾವತಿ- 1366

ತೀರ್ಥಹಳ್ಳಿ- 1042

ಜಾತಿವಾರು ನಾಮಪತ್ರ ಸಲ್ಲಿಕೆ ವಿವರ :

ಪ.ಜಾತಿ-959

ಪ.ಪಂಗಡ-292

ಹಿಂದುಳಿದ ಅ.ವರ್ಗ-455

ಹಿಂದುಳಿದ ಬಿ. ವರ್ಗ-82

ಸಾಮಾನ್ಯ ವರ್ಗ- 2,323

ಎರಡನೇ ಹಂತದಲ್ಲಿ ಸಾಗರ ಉಪ ವಿಭಾಗದ ಸಾಗರ, ಹೊಸನಗರ, ಸೊರಬ ಹಾಗೂ ಶಿಕಾರಿಪುರದಲ್ಲಿ ಡಿಸೆಂಬರ್ 27ರಂದು ಚುನಾವಣೆ ನಡೆಯುತ್ತಿದೆ. ಚುನಾವಣಾ ಸಿಬ್ಬಂದಿಗೆ ತರಬೇತಿ ನೀಡಲು ಜಿಲ್ಲಾಡಳಿತ ಈಗಾಗಲೇ ತಯಾರಿ‌ ನಡೆಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.