ETV Bharat / city

ಯಡಿಯೂರಪ್ಪಗೆ ಒಳ್ಳೆಯ ಸರ್ಕಾರ ಕೊಡಲು ಸಾಧ್ಯವಿಲ್ಲ.. ಮಾಜಿ ಸಚಿವ ರಾಯರೆಡ್ಡಿ ಭವಿಷ್ಯ - Former Minister Basavaraj Raireddy

ಸರ್ಕಾರ ರಚನೆ ಮಾಡಲು ಯಡಿಯೂರಪ್ಪ ಅವರಿಗೆ ಆಗದಿದ್ದರೆ, ವಿಧಾನಸಭೆ ವಿಸರ್ಜಿಸಲಿ ಸಾರ್ವತ್ರಿಕ ಚುನಾವಣೆಗೆ ಹೋಗುವುದು ಒಳ್ಳೆಯದು. ನನಗೇನು ಯಡಿಯೂರಪ್ಪ ಸಿಎಂ ಆಗಿ ಒಳ್ಳೆಯ ಸರ್ಕಾರ ಕೊಡುತ್ತಾರೆ ಎಂದು ಅನಿಸುವುದಿಲ್ಲ ಎಂದು ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ಯಡಿಯೂರಪ್ಪಗೆ ಒಳ್ಳೆಯ ಸರ್ಕಾರ ಕೊಡಲು ಸಾಧ್ಯವಿಲ್ಲ: ಬಸವರಾಜ್ ರಾಯರೆಡ್ಡಿ
author img

By

Published : Aug 7, 2019, 5:43 PM IST

Updated : Aug 7, 2019, 9:55 PM IST

ಮೈಸೂರು: ಸರ್ಕಾರ ರಚನೆ ಮಾಡಲು ಯಡಿಯೂರಪ್ಪ ಅವರಿಗೆ ಆಗದಿದ್ದರೆ, ವಿಧಾನಸಭೆ ವಿಸರ್ಜಿಸಿ ಸಾರ್ವತ್ರಿಕ ಚುನಾವಣೆಗೆ ಹೋಗುವುದು ಒಳ್ಳೆಯದು. ನನಗೇನು ಯಡಿಯೂರಪ್ಪ ಸಿಎಂ ಆಗಿ ಒಳ್ಳೆಯ ಸರ್ಕಾರ ಕೊಡುತ್ತಾರೆ ಎಂದು ಅನಿಸುವುದಿಲ್ಲ ಎಂದು ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ಯಡಿಯೂರಪ್ಪಗೆ ಒಳ್ಳೆಯ ಸರ್ಕಾರ ಕೊಡಲು ಸಾಧ್ಯವಿಲ್ಲ- ರಾಯರೆಡ್ಡಿ ಭವಿಷ್ಯ

ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಯಾಕೆ ಹಿನ್ನಡೆಯಾಯಿತು ಎಂದು ಚರ್ಚೆ ಮಾಡಲು ಇಂದು ಮೈಸೂರಿಗೆ ಸತ್ಯಶೋಧನಾ ಸಮಿತಿಯೊಂದಿಗೆ ಆಗಮಿಸಿದ ಬಸವರಾಜ್ ರಾಯರೆಡ್ಡಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಎರಡು ವಾರ ಆಯ್ತು. ಅವರಿಗೆ ಇನ್ನೂ ಮಂತ್ರಿಮಂಡಲ ರಚನೆ ಮಾಡಲು ಆಗುತ್ತಿಲ್ಲ. ಇದರಿಂದ ಕರ್ನಾಟಕದಲ್ಲಿ ಸರ್ಕಾರ ಇದೆಯೋ, ಇಲ್ಲವೋ ಎಂಬ ಎಂಬ ಸ್ಥಿತಿ ಇದೆ. ಉತ್ತರ ಕರ್ನಾಟಕದ 6 ರಿಂದ 7 ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ. ಮಲೆನಾಡಿನಲ್ಲೂ ಈಗ ಪ್ರವಾಹ ಉಂಟಾಗಿದೆ. ಯಾವ ಮಂತ್ರಿಗೂ ಅಧಿಕಾರಿಗೂ ಕೆಲಸ ಇರದೇ ಇರುವುದರಿಂದ ಇವತ್ತು ಜನರಿಗೆ ಸಂಕಷ್ಟ ಎದುರಾಗಿದೆ.

ಯಡಿಯೂರಪ್ಪ ಮುಖ್ಯಮಂತ್ರಿಯಾದ ತಕ್ಷಣ ಮಂತ್ರಿಮಂಡಲ ರಚನೆ ಮಾಡಬೇಕಿತ್ತು. ಆದರೆ, ಮಾಡಲಿಲ್ಲ. ಇದಕ್ಕೆ ಪಕ್ಷದಲ್ಲಿ ಕಾರಣ ಕೂಡ ಇದೆ. 17 ಜನ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದಾರೆ. ಅವರೆಲ್ಲರನ್ನೂ ಮಂತ್ರಿ ಮಾಡಬೇಕು. ಅದಕ್ಕಾಗಿ ಅವರ ಪಕ್ಷದಲ್ಲಿ ಗೊಂದಲವಿದೆ. ನನಗೇನು ಯಡಿಯೂರಪ್ಪ ಸಿಎಂ ಆಗಿ ಒಳ್ಳೆಯ ಸರ್ಕಾರ ಕೊಡುತ್ತಾರೆ ಎಂದು ಅನಿಸುವುದಿಲ್ಲ. ಬಹುತೇಕ ಮುಂದಿನ ದಿನಗಳಲ್ಲಿ ಅವರಿಗೆ ಕಷ್ಟದ ಪರಿಸ್ಥಿತಿಯಿದೆ. ಸರ್ಕಾರ ರಚನೆ ಮಾಡಲು ಆಗದಿದ್ದರೆ ವಿಧಾನಸಭೆ ವಿಸರ್ಜನೆ ಮಾಡಿ ಸಾರ್ವತ್ರಿಕ ಚುನಾವಣೆಗೆ ಹೋಗುವುದು ಒಳ್ಳೆಯದು ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.

Intro:ಮೈಸೂರು: ಸರ್ಕಾರ ರಚನೆ ಮಾಡಲು ಯಡಿಯೂರಪ್ಪ ಅವರಿಗೆ ಆದಿದ್ದರೆ ವಿಧಾನಸಭೆ ವಿಸರ್ಜಿಸಿ ಸಾರ್ವಜನಿಕ ಚುನಾವಣೆಗೆ ಹೋಗುವುದು ಒಳ್ಳೆಯದು ಎಂದು ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.

Body:ಇಂದು ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಏಕೆ ಹಿನ್ನಡೆಯಾಯಿತು ಎಂದು ಚರ್ಚೆ ಮಾಡಲು ಮೈಸೂರಿಗೆ ಸತ್ಯ ಶೋಧನಾ ಸಮಿತಿಯೊಂದಿಗೆ ಆಗಮಿಸಿದ ಬಸವರಾಜ್ ರಾಯರೆಡ್ಡಿ ಈ ಟಿವಿ ಭಾರತ್ ಜೊತೆ ಮಾತನಾಡಿ,
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಎರಡು ವಾರ ಆಯ್ತು ಅವರಿಗೆ ಇನ್ನೂ ಮಂತ್ರಿ ಮಂಡಲ ರಚನೆ ಮಾಡಲು ಆಗುತ್ತಿಲ್ಲ ಇದರಿಂದ ಕರ್ನಾಟಕದಲ್ಲಿ ಸರ್ಕಾರ ಇದೆಯೋ ಇಲ್ಲವೊ ಎಂಬ ಪರಿಸ್ಥಿತಿಗೆ ಬಂದು ಬಿಟ್ಟಿದ್ದೇವೆ.
ಉತ್ತರ ಕರ್ನಾಟಕದ ೬ ರಿಂದ ೭ ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ.‌
ಮಲೆನಾಡಿನಲ್ಲೂ ಈಗ ಪ್ರವಾಹ ಉಂಟಾಗಿದೆ. ಯಾವ ಮಂತ್ರಿಗೂ ಅಧಿಕಾರಿಗೂ ಕೆಲಸ ಇರದೇ ಇರುವುದರಿಂದ ಇವತ್ತು ಜನರಿಗೆ ಸಂಕಷ್ಟ ಎದುರಾಗಿದೆ.
ಯಡಿಯೂರಪ್ಪ ಮುಖ್ಯಮಂತ್ರಿಯಾದ ತಕ್ಷಣ ಮಂತ್ರಿ ಮಂಡಲ ರಚನೆ ಮಾಡಬೇಕಿತ್ತು, ಆದರೆ ಮಾಡಿಲ್ಲ, ಇದಕ್ಕೆ ಪಕ್ಷದಲ್ಲಿ ಕಾರಣ ಇದೆ, ೧೭ ಜನ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದಾರೆ ಅವರೆಲ್ಲರನ್ನೂ ಮಂತ್ರಿ ಮಾಡಬೇಕು ಅದಕ್ಕಾಗಿ ಅವರ ಪಕ್ಷದಲ್ಲಿ ಗೊಂದಲವಿದೆ ಎಂದ ಬಸವರಾಜ್ ರಾಯರೆಡ್ಡಿ ನನಗೇನು ಯಡಿಯೂರಪ್ಪ ಸಿಎಂ ಆಗಿ ಒಳ್ಳೆಯ ಸರ್ಕಾರ ಕೊಡುತ್ತಾರೆ ಎಂದು ಅನಿಸುವುದಿಲ್ಲ, ಬಹುತೇಕ ಮುಂದಿನ ದಿನಗಳಲ್ಲಿ ಅವರಿಗೆ ಕಷ್ಟದ ಪರಿಸ್ಥಿತಿ ಇದೆ. ಸರ್ಕಾರ ರಚನೆ ಮಾಡಲು ಆಗದಿದ್ದರೆ ವಿಧಾನಸಭೆಯನ್ನು‌ ವಿಸರ್ಜನೆ ಮಾಡಿ ಸಾರ್ವತ್ರಿಕ ಚುನಾವಣೆಗೆ ಹೋಗುವುದು ಒಳ್ಳೆಯದು ಎಂಬುದು ನನ್ನ ಅಭಿಪ್ರಾಯ ಎಂದು ಬಸವರಾಜ್ ರಾಯರೆಡ್ಡಿ ಹೇಳಿಕೆ ನೀಡಿದರು.

Conclusion:
Last Updated : Aug 7, 2019, 9:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.