ಮೈಸೂರು: 'ಫ್ರೀ ಕಾಶ್ಮೀರ' ಎಂಬ ನಾಮಫಲಕ ಹಿಡಿದ ಹಿನ್ನೆಲೆಯಲ್ಲಿ ಮೈಸೂರು ನ್ಯಾಯಾಲಯಕ್ಕೆ ತಾಯಿ ಜೊತೆ ಹಾಜರಾದ ನಳಿನಿ, ಮಾಧ್ಯಮಗಳ ಕ್ಷಮೆಯಾಚಿಸಿದ್ದಾರೆ.
ಮೈಸೂರು ವಿವಿ ಕ್ಯಾಂಪಸ್ನಲ್ಲಿ ಜೆಎನ್ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಿದ ವೇಳೆ, ಫ್ರೀ ಕಾಶ್ಮೀರ ಎಂಬ ಪೋಸ್ಟರ್ ಹಿಡಿದಿದ್ದ ನಳಿನಿ, ಇಂದು ನ್ಯಾಯಾಲಯಕ್ಕೆ ತಾಯಿ ಜೊತೆ ಬಂದಿದ್ದರು. ಮಾಧ್ಯಮಗಳ ವಿರುದ್ಧ ಕಿಡಿಕಾರಿ, ಮನುಷ್ಯತ್ವ ಇಲ್ಲದವರು ಎಂದು ಕೂಗಾಡಿದ್ದರು. ಆದರೆ ಆ ಬಳಿಕ ತಮ್ಮ ವರ್ತನೆಗೆ ಕ್ಷಮೆ ಕೂಡಾ ಕೇಳಿದ್ದಾರೆ.
ಇನ್ನು ಮುಂದೆ ಈ ರೀತಿ ವರ್ತನೆ ತೋರುವುದಿಲ್ಲ, ನಾನಿರುವ ಪರಿಸ್ಥಿತಿ ನನ್ನನ್ನು ಈ ರೀತಿ ವರ್ತಿಸುವಂತೆ ಮಾಡಿತು. ಈಗ ನನಗೆ ಪಶ್ಚಾತ್ತಾಪವಾಗುತ್ತಿದೆ. ನನ್ನನ್ನು ಬದಲಾಯಿಸಿಕೊಳ್ಳಲು ಹಾಗೂ ಜವಬ್ದಾರಿಯುತ ನಡವಳಿಕೆ ಹೊಂದಲು ಪ್ರಯತ್ನಿಸುತ್ತೇನೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.