ETV Bharat / city

ಜಿ.ಟಿ.ದೇವೇಗೌಡರ ಜೊತೆ 27 ಶಾಸಕರು ಬಂದರೂ ಸ್ವೀಕರಿಸುತ್ತೇವೆ: ಸಚಿವ ಸೋಮಣ್ಣ

ಜಿ.ಟಿ.ದೇವೇಗೌಡರ ಜೊತೆ 27 ಶಾಸಕರನ್ನೂ ಕೊಟ್ಟರೂ ಹೈಕ್ಲಾಸ್ ಆಗಿ ಸ್ವೀಕಾರ ಮಾಡುತ್ತೇನೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ
author img

By

Published : Sep 12, 2019, 9:34 PM IST

ಮೈಸೂರು: ‌ಜಿ.ಟಿ.ದೇವೇಗೌಡರ ಜೊತೆ ನಾಲ್ಕೈದು ಜನ ಎಂಎಲ್ಎಗಳನ್ನು ಕೊಟ್ಟರೆ ಕೊಡಲಿ ಅಥವಾ 27 ಶಾಸಕರನ್ನೂ ಕೊಟ್ಟರೂ ಹೈಕ್ಲಾಸ್ ಆಗಿ ಸ್ವೀಕಾರ ಮಾಡುತ್ತೇನೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ.

ಮುಡಾ ಕಚೇರಿ ದೀಪಾಲಂಕಾರ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಸೋಮಣ್ಣ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ವಸತಿ ಸಚಿವರು ಎಂಬುದನ್ನು ಮರೆತು ದಸರ ಸಚಿವರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೀಡಿದ ಟೀಕೆಗೆ ನಾನು ಉತ್ತರಿಸುವುದಿಲ್ಲ. ಇದರಿಂದ ನಮಗೇನು‌ ಬೇಸರವಿಲ್ಲ. ಒಂದಂತೂ ಸತ್ಯ, ಪ್ರವಾಹದಿಂದ ನೊಂದವರಿಗಾಗಿ ನಾವು ಹಿಂದಿನ ಸರ್ಕಾರಕ್ಕಿಂತ ಚುರುಕಾಗಿ ಕೆಲಸ ಮಾಡುತ್ತಿದ್ದೇವೆ. ಶೀಘ್ರದಲ್ಲೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಹಣ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ನೆರವು ಕೇಳಿದ್ದೇವೆ. ಈ ಬಾರಿ ದಸರವನ್ನು ಅದ್ದೂರಿಯಾಗಿ ಆಚರಿಸೋಣ ಎಂದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ

ಜಿ.ಟಿ.ದೇವೇಗೌಡರ ಸಲಹೆ ಪಡೆಯುವುದರಲ್ಲಿ ತಪ್ಪೇನಿದೆ?

ಜಿ.ಟಿ.ದೇವೇಗೌಡ ನನ್ನ ಹಳೆಯ ಸ್ನೇಹಿತರು. ಅವರು ನಾವೆಲ್ಲಾ ಹಿಂದೆ ಒಂದೇ ಮನೆಯಲ್ಲಿದ್ದವರು. ಈಗ ಹೊರ ಬಂದಿದ್ದೇನೆ‌. ಆದರೂ ದೇವೇಗೌಡರ ಕುಟುಂಬದ ಬಗ್ಗೆ ಗೌರವವಿದೆ. ನಾನೇನು ಹೆಚ್ಚಿಗೆ ಮಾತನಾಡುವುದಿಲ್ಲ. ಅವರ ಜೊತೆ ಇನ್ನೂ ನಾಲ್ಕೈದು ಜನ ಇದ್ದರೆ ಕೊಡಲಿ ಅಥವಾ 27 ಜನರನ್ನೂ ಕೊಟ್ಟರು ನಾವು ಹೈಕ್ಲಾಸ್ ಆಗಿ ಸ್ವೀಕಾರ ಮಾಡುತ್ತೇವೆ. ಜಿ.ಟಿ.ದೇವೇಗೌಡರು ಹಿರಿಯರು. ದಸರಾ ಮಾಡಿ‌‌ ಅನುಭವವಿದೆ. ಅವರ ಸಲಹೆ ಪಡೆಯುವುದರಲ್ಲಿ ತಪ್ಪೇನು ಎಂದರು.

ಇನ್ನು ತಾಯಿ ಚಾಮುಂಡೇಶ್ವರಿ ಆಶೀರ್ವಾದ ಕುಮಾರಸ್ವಾಮಿ ಅವರಿಗೆ ಮಾಡಿದ್ದು ಮುಗಿದಿದೆ. ಈಗ ಯಡಿಯೂರಪ್ಪ ಹಾಗೂ ನಮಗೆ ಆಶೀರ್ವಾದ ಮಾಡಿದ್ದಾಳೆ.‌ ನಾವು ಕೆಲಸ ಮಾಡುತ್ತೇವೆ. ಜಿ.ಟಿ.ದೇವೇಗೌಡ ಅವರನ್ನು ಪರ್ಮನೆಂಟ್ ಆಗಿ ಕಳುಹಿಸಿದರೆ ನಮಗೇನು ಬೇಸರವಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದರು.

Intro:ಮೈಸೂರು: ‌ಜಿ.ಟಿ.ದೇವೇಗೌಡರ ಜೊತೆ ನಾಲ್ಕೈದು ಜನ ಎಂಎಲ್ಎ ಕೊಟ್ಟರೆ ಕೊಡಲಿ ಅಥವಾ ೨೭ ಜನರನ್ನು ಕೊಟ್ಟರು ಹೈ ಕ್ಲಾಸ್ ಆಗಿ ಸ್ವೀಕಾರ ಮಾಡುತ್ತೇನೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ.

Body:ಇಂದು ಮುಡಾ ಕಚೇರಿ ದೀಪಾಲಂಕಾರ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಇಂದು ಇಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ವಸತಿ ಸಚಿವರು ಎಂಬುದನ್ನು ಮರೆತು ದಸರ ಸಚಿವರಾಗಿದ್ದಾರೆ ಎಂಬ ಟೀಕೆಗೆ ನಾನು ಉತ್ತರಿಸುವುದಿಲ್ಲ, ನಮಗೇನು‌ ಬೇಸರವಿಲ್ಲ ಒಂದು ಸತ್ಯ ಪ್ರವಾಹದಿಂದ ನೊಂದವರಿಗೆ ನಾವು ಹಿಂದಿನ ಸರ್ಕಾರಕ್ಕಿಂತ ಚುರುಕ್ಕಾಗಿ ಕೆಲಸ ಮಾಡುತ್ತಿದ್ದೇವೆ, ಶೀಘ್ರದಲ್ಲೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಹಣ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ನೆರವು ಕೇಳಿದ್ದೇವೆ ಅವರು ಆದ್ಯತೆಯ ಮೇರೆಗೆ ಕೊಡುತ್ತಾರೆ ಎಂದು ಹೇಳಿದ ಸಚಿವ ಸೋಮಣ್ಣ, ‌
ಈ ಬಾರಿ ದಸರವನ್ನು ಅದ್ದೂರಿಯಾಗಿ ಆಚರಿಸೋಣ ಎಂದರು.

ಜಿಟಿ.ದೇವೇಗೌಡರ ಬಗ್ಗೆ ಸಚಿವ ಸೋಮಣ್ಣ ಹೇಳಿದ್ದೇನು: ಜಿ.ಟಿ.ದೇವೇಗೌಡ ನನ್ನ ಹಳೆಯ ಸ್ನೇಹಿತರು ಅವರು ನಾವೆಲ್ಲಾ ಹಿಂದೇ ಒಂದೇ ಮನೆಯಲ್ಲಿದ್ದವರು, ಈಗ ಹೊರಬಂದಿದ್ದೇನೆ‌.
ಆದರೂ ದೇವೇಗೌಡರ ಕುಟುಂಬದ ಬಗ್ಗೆ ಗೌರವಿದೆ ನಾನೇನು ಹೆಚ್ಚಿಗೆ ಮಾತನಾಡುವುದಿಲ್ಲ, ಜಿ.ಟಿ.ದೇವೇಗೌಡರ ಜೊತೆ ಇನ್ನೂ ನಾಲ್ಕೈದು ಜನ ಇದ್ದರೆ ಕೊಡಲಿ ಅಥವಾ ೨೭ ಜನರನ್ನು ಕೊಟ್ಟರು ನಾವು ಹೈ ಕ್ಲಾಸ್ ಆಗಿ ಸ್ವೀಕಾರ ಮಾಡುತ್ತೇವೆ.
ಜಿ.ಟಿ.ದೇವೇಗೌಡರು ಹಿರಿಯರು ದಸರ ಮಾಡಿ‌‌ ಅನುಭವವಿದೆ ಅವರ ಸಲಹೆ ಪಡೆಯುವುದರಲ್ಲಿ ತಪ್ಪೇನು ಎಂದರು.
ಇನ್ನೂ ತಾಯಿ ಚಾಮುಂಡೇಶ್ವರಿ ಆಶಿರ್ವಾದ ಕುಮಾರಸ್ವಾಮಿ ಅವರಿಗೆ ಮಾಡಿದ್ದು ಮುಗಿದಿದೆ. ಈಗ ಯಡಿಯೂರಪ್ಪ ಹಾಗೂ ನಮಗೆ ಆಶಿರ್ವಾದ ಮಾಡಿದ್ದಾರೆ.‌ ನಾವು ಕೆಲಸ ಮಾಡುತ್ತೇವೆ.
ಜಿ.ಟಿ.ದೇವೇಗೌಡ ಅವರನ್ನು ಪರ್ಮನೆಂಟ್ ಆಗಿ ಕಳುಹಿಸಿದರೆ ನಮಗೇನು ಬೇಸರವಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.