ಮೈಸೂರು: ಪಾಲಿಕೆ ಆಯುಕ್ತೆ ಶಿಲ್ಪನಾಗ್ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಭಾರ ಮೇಯರ್ ಅನ್ವರ್ ಬೇಗ್ ಪ್ರತಿಕ್ರಿಯೆ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ಆಯುಕ್ತರು ರಾಜೀನಾಮೆ ನೀಡಬಾರದು. ಪಾಲಿಕೆಯ 65 ಸದಸ್ಯರು ಅವರ ಜೊತೆಗೆ ಇರ್ತೇವೆ. ಇಷ್ಟು ಕಿರುಕುಳ ನೀಡಿದ್ದಾರೆ ಅಂತಾ ನಮಗೆ ಗೋತ್ತೇ ಇರಲಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿಯೇ ನಮಗೆ ಮಾಹಿತಿ ಬಂದಿದ್ದು, ಮೈಸೂರು ಪಾಲಿಕೆಗಷ್ಟೇ ಅಲ್ಲ, ದೇಶಕ್ಕೆ ಈ ರೀತಿಯ ಅಧಿಕಾರಿ ಬೇಕು ಎಂದಿದ್ದಾರೆ.