ETV Bharat / city

ಮೈಸೂರು ವಿವಿಯಲ್ಲಿ 382 ಹುದ್ದೆಗಳು ಖಾಲಿ ಇವೆ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಈ ಬಾರಿ ನ್ಯಾಕ್‌ಗ್ರೇಡ್‌ನಲ್ಲಿ 2 ಪ್ಯಾರಾ ಮೀಟರ್​ನಲ್ಲಿ ಕಡಿಮೆ ಅಂಕ ಬಂತು.‌ 7 ಪ್ಯಾರಾ ಮೀಟರ್​ಗಳಲ್ಲಿ ಶಿಕ್ಷಕರ ಕೊರತೆ ಹಾಗೂ ರಿಸರ್ಚ್ ಪೇಪರ್​ಗಳು ಕಡಿಮೆ‌ ಇದ್ದು, ಇದರಿಂದ ನ್ಯಾಕ್​ನಲ್ಲಿ ಪಾಯಿಂಟ್ ಕಡಿಮೆಯಾಯಿತು. ಯುಜಿಸಿಯಿಂದ ಪ್ರಾಜೆಕ್ಟ್​ಗಳು ಸಹ ಕಡಿಮೆಯಾಗುತ್ತಿವೆ.‌ ರಿಸರ್ಚ್​ ನಡೆಸಿಕೊಂಡು ಹೋಗುವುದಕ್ಕೆ ಪ್ರೋತ್ಸಾಹ ಸಿಗುತ್ತಿಲ್ಲ..

ಮೈಸೂರು ವಿಶ್ವವಿದ್ಯಾಲಯದಲ್ಲಿ ಖಾಲಿಯಿರುವ ಹುದ್ದೆಗಳು

author img

By

Published : Nov 2, 2021, 2:25 PM IST

ಮೈಸೂರು : ಕಳೆದ 14 ವರ್ಷಗಳಿಂದ ಮೈಸೂರು ವಿಶ್ವವಿದ್ಯಾಲಯದಲ್ಲಿ ಬೋಧಕ ಹುದ್ದೆಗೆ ಯಾವುದೇ ನೇಮಕಾತಿ ಮಾಡಿಲ್ಲ. ಈಗ 382 ಹುದ್ದೆಗಳು ಖಾಲಿ ಇವೆ. ಈ ಖಾಲಿ‌ ಹುದ್ದೆಗಳಿಂದಲೇ ಮೈಸೂರು ವಿವಿಗೆ ನ್ಯಾಕ್ ಗ್ರೇಡ್ ಕಡಿಮೆಯಾಯಿತು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.‌ಜಿ.‌ಹೇಮಂತ್ ಕುಮಾರ್ ತಿಳಿಸಿದರು.

ಮೈಸೂರು ವಿವಿ ಕುಲಪತಿ ಪ್ರೊ.‌ಜಿ.‌ಹೇಮಂತ್ ಕುಮಾರ್

ಮೈಸೂರು ವಿವಿಯಲ್ಲಿ 664 ಪ್ರೊಫೆಸರ್ ಹುದ್ದೆಗಳಲ್ಲಿ 382 ಹುದ್ದೆಗಳು ಖಾಲಿ ಇವೆ. ಈಗ ಹಾಲಿ 282 ಜನ ಕೆಲಸ ಮಾಡುತ್ತಿದ್ದಾರೆ. ಈ ವರ್ಷ 12 ಜನ ಪ್ರೊಫೆಸರ್​ಗಳು ನಿವೃತ್ತರಾಗಲಿದ್ದಾರೆ. ಕಳೆದ 14 ವರ್ಷಗಳಿಂದ ವಿವಿಗೆ ಯಾವುದೇ ಹೊಸ ನೇಮಕಾತಿ ಮಾಡಿಲ್ಲ.

ಆದ್ದರಿಂದ ಸರ್ಕಾರಕ್ಕೆ ಮನವಿ‌ ಮಾಡುತ್ತೇವೆ.‌ ಖಾಲಿ ಹುದ್ದೆಗಳ ಬಗ್ಗೆ ‌ಸರ್ಕಾರಕ್ಕೆ ಮಾಹಿತಿ ನೀಡಿದ್ದು, ನಿಯಮಾನುಸಾರ ಖಾಲಿ‌ ಹುದ್ದೆ ಭರ್ತಿ ಮಾಡುವ ಆಶಾಭಾವನೆ ಇದೆ. ಕೆಲವೊಂದು ವಿಭಾಗಕ್ಕೆ ಒಬ್ಬ ಪ್ರೊಫೆಸರ್ ಇದ್ದು, ಸಂಸ್ಕೃತಕ್ಕೆ ಒಬ್ಬರೂ ಸಹ ಇಲ್ಲ. ಇದರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು.

ಈ ಬಾರಿ ನ್ಯಾಕ್‌ಗ್ರೇಡ್‌ನಲ್ಲಿ 2 ಪ್ಯಾರಾ ಮೀಟರ್​ನಲ್ಲಿ ಕಡಿಮೆ ಅಂಕ ಬಂತು.‌ 7 ಪ್ಯಾರಾ ಮೀಟರ್​ಗಳಲ್ಲಿ ಶಿಕ್ಷಕರ ಕೊರತೆ ಹಾಗೂ ರಿಸರ್ಚ್ ಪೇಪರ್​ಗಳು ಕಡಿಮೆ‌ ಇದ್ದು, ಇದರಿಂದ ನ್ಯಾಕ್​ನಲ್ಲಿ ಪಾಯಿಂಟ್ ಕಡಿಮೆಯಾಯಿತು. ಯುಜಿಸಿಯಿಂದ ಪ್ರಾಜೆಕ್ಟ್​ಗಳು ಸಹ ಕಡಿಮೆಯಾಗುತ್ತಿವೆ.‌ ರಿಸರ್ಚ್​ ನಡೆಸಿಕೊಂಡು ಹೋಗುವುದಕ್ಕೆ ಪ್ರೋತ್ಸಾಹ ಸಿಗುತ್ತಿಲ್ಲ ಎಂದರು.

ಮೈಸೂರು ವಿವಿ ವ್ಯಾಪ್ತಿಯಲ್ಲಿ 700 ಜನ ಅತಿಥಿ ಉಪನ್ಯಾಸಕರಿದ್ದು, ಶೈಕ್ಷಣಿಕವಾಗಿ ಯಾವುದೇ ತೊಂದರೆಯಾಗುತ್ತಿಲ್ಲ. ಆದರೆ, ಪ್ರೊಫೆಸರ್​ಗಳು ಇಲ್ಲದ ಕಾರಣ ರಿಸರ್ಚ್ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.

ಆದ್ದರಿಂದ ಸರ್ಕಾರ ಹಂತ ಹಂತವಾಗಿ ಪ್ರೊಫೆಸರ್ ನೇಮಕಾತಿಗೆ ಅನುಮತಿ ನೀಡಿದರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು. ಈ ವರ್ಷ ಪದವಿ ಪ್ರವೇಶಕ್ಕೆ 7000 ಅರ್ಜಿಗಳು ಬಂದಿವೆ. ಎಲ್ಲಾ ಕಾಲೇಜುಗಳಲ್ಲೂ ಸೀಟ್ ಸಂಪೂರ್ಣ ಫಿಲ್ ಅಪ್ ಆಗಿದೆ ಎಂದು ವಿವರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.