ಮೈಸೂರು: ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಕಾರಿನಲ್ಲಿದ್ದವರು ಯಾವುದೇ ಪ್ರಾಣಾಪಾಯವಿಲ್ಲದೆ ಆಶ್ಚರ್ಯಕರ ರೀತಿ ಪಾರಾಗಿರುವ ಘಟನೆ ನಗರದ ಮುಡಾ ವೃತ್ತದಲ್ಲಿ ನಡೆದಿದೆ.
ಇಂದು ಬೆಳಗ್ಗೆ 10 ಗಂಟೆ ಸಮಯದಲ್ಲಿ ಯುವರಾಜ ಕಾಲೇಜು ಕಡೆಯಿಂದ ಬರುತ್ತಿದ್ದ ಆಲ್ಟೋ ಕಾರು ಹಾಗೂ ರೈಲ್ವೆ ನಿಲ್ದಾಣದ ಕಡೆಯಿಂದ ಬರುತ್ತಿದ್ದ ಇಂಡಿಕಾ ಕಾರು ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಇಂಡಿಕಾ ಕಾರು ಮೂರು ಬಾರಿ ಪಲ್ಟಿ ಹೊಡೆದು ರಸ್ತೆ ಪಕ್ಕದಲ್ಲಿ ಬಿದ್ದಿದೆ. ಈ ಸಂದರ್ಭದಲ್ಲಿ ಇಂಡಿಕಾ ಕಾರಿನಲ್ಲಿದ್ದ ವ್ಯಕ್ತಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಆದರೆ ಅಪಘಾತ ನಡೆದ ರೀತಿ ನೋಡಿದರೆ ಇದರಲ್ಲಿದ್ದವರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿರುವುದಕ್ಕೆ ಅಚ್ಚರಿಗೊಂಡಿದ್ದು, ಬದುಕಿದೆಯಾ ಬಡಜೀವ ಎಂಬಂತೆ ನಿಟ್ಟುಸಿರು ಸಹ ಬಿಟ್ಟಿದ್ದಾರೆ.
ಇನ್ನು ಈ ಸಂಬಂಧ ದೇವರಾಜ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.