ETV Bharat / city

ನಾಳೆ ಹುಣಸೂರಲ್ಲಿ ಜೆಡಿಎಸ್​​​​ ಸಭೆ: ಉಪ ಸಮರಕ್ಕೆ ಅಭ್ಯರ್ಥಿ ಘೋಷಣೆ ಮಾಡ್ತಾರಾ ದೇವೇಗೌಡ್ರು?‌ - by-election

ದಸರಾ ರಂಗು ಮುಗಿಯುತ್ತಿದ್ದಂತೆ ಹುಣಸೂರು ಉಪ ಚುನಾವಣೆ ಕಾವು ಜೋರಾಗಿದ್ದು, ಹುಣಸೂರು-ಗದ್ದಿಗೆ ರಸ್ತೆಯಲ್ಲಿರುವ ಕೆಂಡಗಣೇಶ್ವರ ದೇವಾಲಯದ ಆವರಣದಲ್ಲಿ ನಾಳೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಬೃಹತ್ ಸಭೆ ನಡೆಯಲಿದೆ.

ನಾಳೆ ಹುಣಸೂರಲ್ಲಿ ಜೆಡಿಎಸ್ ಮುಖಂಡರ ಸಭೆ
author img

By

Published : Oct 10, 2019, 6:38 PM IST

ಮೈಸೂರು: ದಸರಾ ರಂಗು ಮುಗಿಯುತ್ತಿದ್ದಂತೆ ಹುಣಸೂರು ಉಪ ಚುನಾವಣೆ ಕಾವು ಜೋರಾಗಿದ್ದು, ಸಮ್ಮಿಶ್ರ ಸರ್ಕಾರ ಪತನಗೊಂಡ‌ ನಂತರ ಉಪ ಚುನಾವಣೆಗೆ ಮೈತ್ರಿ ಬಿಟ್ಟು ಏಕಾಂಗಿಯಾಗಿ ಸ್ಪರ್ಧೆಗಿಳಿಯಲಿರುವ ಜೆಡಿಎಸ್ ರಣತಂತ್ರ ರೂಪಿಸುತ್ತಿದೆ.

ನಾಳೆ ಹುಣಸೂರಲ್ಲಿ ಜೆಡಿಎಸ್ ಮುಖಂಡರ ಸಭೆ

ಹೌದು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಹುಣಸೂರು ವಿಧಾನಸಭಾ ಕ್ಷೇತ್ರದ ಅಂದಿನ ಶಾಸಕರಾಗಿದ್ದ ಹೆಚ್.ವಿಶ್ವನಾಥ್ ಅವರ ನಿರ್ಣಯವೇ ಕಾರಣವೆಂದು ಭಾವಿಸಿರುವ ಜೆಡಿಎಸ್ ಪಕ್ಷದ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ, ಹುಣಸೂರು ಕ್ಷೇತ್ರದಲ್ಲಿ ಉಪ ಚುನಾವಣೆ ಗೆದ್ದು ತೋರಿಸಬೇಕೆಂದು ಪಣ ತೊಟ್ಟಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹುಣಸೂರು-ಗದ್ದಿಗೆ ರಸ್ತೆಯಲ್ಲಿರುವ ಕೆಂಡಗಣೇಶ್ವರ ದೇವಾಲಯದ ಆವರಣದಲ್ಲಿ ನಾಳೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಬೃಹತ್ ಸಭೆ ನಡೆಸಿ, ಅಭ್ಯರ್ಥಿಯನ್ನು ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ನಾಳೆ ಹೆಚ್.ಡಿ.ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ, ಸಾ.ರಾ.ಮಹೇಶ್, ಸಿ.ಎಸ್‌.ಪುಟ್ಟರಾಜು ಸೇರಿದಂತೆ ಪಕ್ಷದ ಅನೇಕ ಮುಖಂಡರು ಸಭೆಗೆ ಭಾಗಿಯಾಗಲಿರುವ ಹಿನ್ನೆಲೆ ಟಿಕೆಟ್ ಘೋಷಣೆಯಾಗುವ ನಿರೀಕ್ಷೆಯಿದೆ. ಈಗಾಗಲೇ ಕುಟುಂಬದವರಿಗೆ ಮಣೆ ಹಾಕುವುದಿಲ್ಲ. ಕಾರ್ಯಕರ್ತರಿಗೆ ಟಿಕೆಟ್ ನೀಡುವುದಾಗಿ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಂಡಿದ್ದು, ಯಾರಿಗೆ ಟಿಕೆಟ್ ಸಿಗಬಹುದು ಎಂಬ ಕುತೂಹಲ ಕಾರ್ಯಕರ್ತರಲ್ಲಿ ಮನೆ ಮಾಡಿದೆ.

Intro:ನಾಳೆ ಜೆಡಿಎಸ್ ಸಭೆ

Body:ನಾಳೆ ಜೆಡಿಎಸ್ ಸಭೆ

Conclusion:ಜೆಡಿಎಸ್ ಬೃಹತ್ ಸಭೆ,ನಾಳೆ ಉಪಚುನಾವಣೆಗೆ ಅಭ್ಯರ್ಥಿ ಘೋಷಣೆ ಮಾಡಲಿದ್ದಾರಾ ದೇವೇಗೌಡರು?‌
ಮೈಸೂರು:
ವಾಯ್ಸ್ ‌
:ದಸರಾ ರಂಗು ಮುಗಿಯುತ್ತಿದ್ದಂತೆ ಹುಣಸೂರು ಉಪಚುನಾವಣೆ ಕಾವು ರಂಗೇರುತ್ತಿದ್ದು, ಸಮ್ಮಿಶ್ರ ಸರ್ಕಾರ ಪತನಗೊಂಡ‌ ನಂತರ ಮೈತ್ರಿಬಿಟ್ಟು ಏಕಾಂಗಿ ಸ್ಪರ್ಧೆಗಿಳಿಯಲಿರುವ ಜೆಡಿಎಸ್ ರಣತಂತ್ರ ರೂಪಿಸುತ್ತಿದೆ.

ಹೌದು, ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಹುಣಸೂರು ವಿಧಾನಸಭಾ ಕ್ಷೇತ್ರದ ಅಂದಿನ ಶಾಸಕರಾಗಿದ್ದ ಎಚ್.ವಿಶ್ವನಾಥ್ ಅವರ ನಿರ್ಣಯ ಕಾರಣವೆಂದು ಭಾವಿಸಿರುವ ಜೆಡಿಎಸ್ ಪಕ್ಷದ ರಾಷ್ಟ್ರೀಯ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, ಉಪಚುನಾವಣೆ ಗೆದ್ದು ತೋರಿಸಬೇಕು ಎಂದು ಪಣತೊಟ್ಟಿದ್ದಾರೆ.

ವಾಯ್ಸ್ : ಈ ಹಿನ್ನಲೆಯಲ್ಲಿ ಹುಣಸೂರು-ಗದ್ದಿಗೆ ರಸ್ತೆಯಲ್ಲಿರುವ ಕೆಂಡಗಣೇಶ್ವರ ದೇವಾಲಯದ ಆವರಣದಲ್ಲಿ ನಾಳೆ(ಶುಕ್ರವಾರ) ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಬೃಹತ್ ಸಭೆ ನಡೆಸಿ ಅಭ್ಯರ್ಥಿಯ ಘೋಷಣೆ ಮಾಡಲಿದ್ದಾರೆ.

ಟಿಕೆಟ್ ಕುತೂಹಲ: ನಾಳೆ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಸಾ.ರಾ.ಮಹೇಶ್, ಸಿ.ಎಸ್‌.ಪುಟ್ಟರಾಜು ಸೇರಿದಂತೆ ಪಕ್ಷದ ಅನೇಕ ಮುಖಂಡರು ಭಾಗಿಯಾಗಲಿರುವ ಈ ಬೃಹತ್ ಸಭೆ ಟಿಕೆಟ್ ಘೋಷಣೆಯಾಗುವ ನಿರೀಕ್ಷೆಯಿದ್ದು, ಈಗಾಗಲೇ ಕುಟುಂಬದವರಿಗೆ ಮಣೆ ಹಾಕುವುದಿಲ್ಲ, ಕಾರ್ಯಕರ್ತರಿಗೆ ಟಿಕೆಟ್ ನೀಡುವುದಾಗಿ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಂಡಿದ್ದಾರೆ. ನಾಳೆ ಯಾರಿಗೆ ಟಿಕೆಟ್ ಸಿಗಬಹುದು ಎಂಬ ಕುತೂಹಲವು ಕಾರ್ಯಕರ್ತರಲ್ಲಿ ಮನೆ ಮಾಡಿದೆ.

(ಜಿಡಿಎಸ್ ಪಕ್ಷದ ಸಭೆಯ ಹಳೆಯ ವಿಡಿಯೋಗಳು ಇದ್ದಲಿ ಬಳಸಿಕೊಳ್ಳಿ)
ETV Bharat Logo

Copyright © 2025 Ushodaya Enterprises Pvt. Ltd., All Rights Reserved.