ETV Bharat / city

ಕರ್ನಾಟಕ ಪ್ರೀಮಿಯರ್ ಲೀಗ್: ಚಾಂಪಿಯನ್ ಪಟ್ಟ ಅಲಂಕರಿಸಿದ ಹುಬ್ಬಳ್ಳಿ ಟೈಗರ್ಸ್! - ಕರ್ನಾಟಕ ಪ್ರೀಮಿಯರ್ ಲೀಗ್ ಚಾಂಪಿಯನ್

8ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್​ನಲ್ಲಿ ಬಳ್ಳಾರಿ ಟಸ್ಕರ್ಸ್ ತಂಡವನ್ನ ಮಣಿಸಿದ ಹುಬ್ಬಳ್ಳಿ ಟೈಗರ್ಸ್​ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಟೈಗರ್ಸ್ ತಂಡ
author img

By

Published : Sep 1, 2019, 7:36 AM IST

ಮೈಸೂರು: ಬಳ್ಳಾರಿ ಟಸ್ಕರ್ಸ್ ವಿರುದ್ಧ 8 ರನ್ ಅಂತರದಲ್ಲಿ ಜಯ ಗಳಿಸಿದ ಹುಬ್ಬಳ್ಳಿ ಟೈಗರ್ಸ್ ತಂಡ, 8ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಚಾಂಪಿಯನ್ ಪಟ್ಟ ಅಲಂಕರಿಸಿದೆ.

  • Such an emotional moment, firstly winning the KPL trophy 🏆 with this lovely bunch of boys. Waited eight years for this moment. Kudos 2 Hubli Tigers team 👏👏 Secondly saying good bye 2 Karnataka cricket with this beautiful trophy in my hand. Thanks one and all 🙏🙏 #wife #trophy pic.twitter.com/lKBvpQT6qI

    — Vinay Kumar R (@Vinay_Kumar_R) August 31, 2019 " class="align-text-top noRightClick twitterSection" data=" ">

ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಕೆಪಿಎಲ್ ಫೈನಲ್ ಪಂದ್ಯದಲ್ಲಿ 153 ರನ್ ಜಯದ ಗುರಿ ಹೊತ್ತ ಬಳ್ಳಾರಿ ಟಸ್ಕರ್ಸ್ ತಂಡ, ಟೈಗರ್ಸ್ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 144 ರನ್ ಗಳಿಸಿ ಸರ್ವಪತನ ಕಂಡಿತು. ಈ ಮೂಲಕ 8ನೇ ಆವೃತ್ತಿಯಲ್ಲಿ ಹುಬ್ಬಳ್ಳಿ ಹುಡುಗರು ಚಾಂಪಿಯನ್​ ಪಟ್ಟ ಅಲಂಕರಿಸಿದ್ದಾರೆ.

ಸಾಧಾರಣ ಮೊತ್ತ ದಾಖಲಿಸಿದ ಟೈಗರ್ಸ್ ತಂಡ ಇದುವರೆಗೂ ಉತ್ತಮ ಪ್ರದರ್ಶನ ತೋರುತ್ತ ಬಂದಿತ್ತು. ಆದರೆ ಫೈನಲ್​ನಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿರುವುದು ಸ್ಪಷ್ಟವಾಗಿತ್ತು. 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 152 ರನ್ ಗಳಿಸಿತು. ಹುಬ್ಬಳ್ಳಿ ಟೈಗರ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ನಿರೀಕ್ಷಿತ ಮಟ್ಟದಲ್ಲಿ ತಂಡದ ಆಟಗಾರು ಬ್ಯಾಟಿಂಗ್ ಪ್ರದರ್ಶಿಸಲಿಲ್ಲ. ಆದಿತ್ಯ ಸೋಮಣ್ಣ (42) ಹಾಗೂ ಲವ್ನೀತ್ ಸಿಸೋಡಿಯಾ (29) ಹೊರತುಪಡಿಸಿದರೆ ಇತರರು ರನ್ ಗಳಿಸುವಲ್ಲಿ ಎಡವಿದರು.

ಈಗಾಗಲೇ ಆರೆಂಜ್ ಕ್ಯಾಪ್ ಗಳಿಸಿದ್ದ ಆರಂಭಿಕ ಆಟಗಾರ ಮೊಹಮ್ಮದ್ ತಹಾ ಅವರ ವಿಕೆಟ್ ಪಡೆಯುವಲ್ಲಿ ಕೃಷ್ಣಪ್ಪ ಗೌತಮ್ ಯಶಸ್ವಿಯಾದರು. ಮೊದಲ ಓವರ್​ನಲ್ಲೇ ವಿಕೆಟ್ ಗಳಿಸಿ ಟೈಗರ್ಸ್ ತಂಡದ ಬೃಹತ್ ಮೊತ್ತಕ್ಕೆ ಅಬ್ಬರದ ಹೊಡೆತಗಳಿಗೆ ಮನೆ ಮಾಡಿದ ನಾಯಕ ವಿನಯ್ ಕುಮಾರ್ ಕೂಡ 4 ರನ್​ಗೆ ತೃಪ್ತಿಪಟ್ಟರು. ಪ್ರಸೀಧ್ ಕೃಷ್ಣ ಅವರ ಬೌಲಿಂಗ್​ನಲ್ಲಿ ವಿನಯ್ ಕುಮಾರ್ ಕ್ಲೀನ್ ಬೋಲ್ಡ್ ಆಗಿ ನಿರ್ಗಮಿಸಿದ್ದು, ಟೈಗರ್ಸ್ ತಂಡದ ಬೃಹತ್ ಮೊತ್ತದ ಕನಸನ್ನು ದೂರಮಾಡಿತು.

ಇಂಥಹ ಪರಿಸ್ಥಿತಿಯಲ್ಲಿ ತಂಡಕ್ಕೆ ಆಧಾರವಾಗಿ ನಿಂತವರು ಆದಿತ್ಯ ಸೋಮಣ್ಣ. 38 ಎಸೆತಗಳಲ್ಲಿ 2 ಸಿಕ್ಸರ್ ನೆರವಿನಿಂದ ಅಮೂಲ್ಯ 47 ರನ್ ಗಳಿಸಿ ಅನುಭವಿ ಸ್ಪಿನ್ನರ್ ಕೆ.ಪಿ. ಅಪ್ಪಣ್ಣ ಬೌಲಿಂಗ್​ನಲ್ಲಿ ಎಲ್​ಬಿಗೆ ಬಲಿಯಾದರು. ಲವ್ನಿತ್ ಸಿಸೋಡಿಯಾ 29 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 29 ರನ್ ಗಳಿಸಿ ಸಾಧಾರಣ ಮೊತ್ತದಲ್ಲಿ ಪ್ರಮುಖ ಭಾಗಿಯಾದರು. ಕೆಪಿ ಅಪ್ಪಣ್ಣ 19 ರನ್ ಗೆ 2 ವಿಕೆಟ್ ಗಳಿಸಿದರೆ, ಪ್ರಸೀಧ್ ಕಷ್ಣ, ಕೃಷ್ಣಪ್ಪ ಗೌತಮ್, ಅಬ್ರಾರ್ ಕಾಝಿ ಹಾಗೂ ಕಾರ್ತಿಕ್ ತಲಾ 1 ವಿಕೆಟ್ ಗಳಿಸಿ ಟೈಗರ್ಸ್​ನ ರನ್ ಗಳಿಕೆಗೆ ಕಡಿವಾಣ ಹಾಕಿದರು.

ದೇವದತ್ತ ಪಡಿಕ್ಕಲ್ ಗಳಿಸಿದ ಹೋರಾಟದ 68 ರನ್, ಬಳ್ಳಾರಿ ಟಸ್ಕರ್ಸ್ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ವಿಜೇತ ಚಾಂಪಿಯನ್ ತಂಡ ಹುಬ್ಬಳ್ಳಿ ಟೈಗರ್ಸ್ 10 ಲಕ್ಷ ರೂ. ಬಹುಮಾನ ಹಾಗೂ ಪ್ರತಿಷ್ಠಿತ ಟ್ರೋಫಿ ಗೆದ್ದುಕೊಂಡಿತು. ರನ್ನರ್​ಅಪ್ ಬಳ್ಳಾರಿ ಟಸ್ಕರ್ಸ್ 5 ಲಕ್ಷ ರೂ. ಬಹುಮಾನ ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿತು. ಆದಿತ್ಯ ಸೋಮಣ್ಣ ಹಾಗೂ ಅಭಿಲಾಶ್ ಶೆಟ್ಟಿ ತಲಾ 2 ವಿಕೆಟ್ ಕಬಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.

Intro:kplBody:ಮೈಸೂರು: ಬಳ್ಳಾರಿ ಟಸ್ಕರ್ಸ್ ವಿರುದ್ಧ ೮ ರನ್ ಅಂತರದಲ್ಲಿ ಜಯ ಗಳಿಸಿದ ಹುಬ್ಬಳ್ಳಿ ಟೈಗರ್ಸ್ ತಂಡ ೮ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಚಾಂಪಿಯನ್ ಪಟ್ಟ ಅಲಂಕರಿಸಿತು.
ಇಲ್ಲಿನ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಕೆಪಿಎಲ್ ಫೈನಲ್ ಪಂದ್ಯಾವಳಿಯಲ್ಲಿ ೧೫೩ ರನ್ ಜಯದ ಗುರಿ ಹೊತ್ತ ಬಳ್ಳಾರಿ ಟಸ್ಕರ್ಸ್ ತಂಡ ಟೈಗರ್ಸ್ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ ೧೪೪ ರನ್ ಗಳಿಸುವರಷ್ಟರಲ್ಲಿ ಸರ್ವಪತನ ಕಂಡಿತು. ದೇವದತ್ತ ಪಡಿಕ್ಕಲ್ ಗಳಿಸಿದ ಹೋರಾಟದ ೬೮ ರನ್ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ವಿಜೇತ ಚಾಂಪಿಯನ್ ತಂಡ ಹುಬ್ಬಳ್ಳಿ ಟೈಗರ್ಸ್ ೧೦ ಲಕ್ಷ ರೂ. ಬಹುಮಾನ ಹಾಗೂ ಪ್ರತಿಷ್ಠಿತ ಟ್ರೋಫಿ ಗೆದ್ದುಕೊಂಡಿತು.ರನ್ನರ್ಸ್ ಅಪ್ ಬಳ್ಳಾರಿ ಟಸ್ಕರ್ಸ್ ೫ ಲಕ್ಷ ರೂ. ಬಹುಮಾನ ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿತು. ಆದಿತ್ಯ ಸೋಮಣ್ಣ ಹಾಗೂ ಅಭಿಲಾಶ್ ಶೆಟ್ಟಿ ತಲಾ ೨ ವಿಕೆಟ್ ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.
ಸಾಧಾರಣ ಮೊತ್ತ ದಾಖಲಿಸಿದ ಟೈಗರ್ಸ್
ಹುಬ್ಬಳ್ಳಿ ಟೈಗರ್ಸ್ ತಂಡ ಇದುವರೆಗೂ ಉತ್ತಮ ಪ್ರದರ್ಶನ ತೋರುತ್ತ ಬಂದಿತ್ತು. ಆದರೆ ಫೈನಲ್ ನಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿರುವುದು ಸ್ಪಷ್ಟವಾಗಿತ್ತು. ೨೦ ಓವರ್ ಗಳಲ್ಲಿ ೬ ವಿಕೆಟ್ ಕಳೆದುಕೊಂಡು ಕೇವಲ ೧೫೨ ರನ್ ಗಳಿಸಿತು.
ಹುಬ್ಬಳ್ಳಿ ಟೈಗರ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ನಿರೀಕ್ಷಿತ ಮಟ್ಟದಲ್ಲಿ ತಂಡದ ಆಟಗಾರು ಬ್ಯಾಟಿಂಗ್ ಪ್ರದರ್ಶಿಸಿಲ್ಲ. ಆದಿತ್ಯ ಸೋಮಣ್ಣ (೪೭) ಹಾಗೂ ಲವ್ನೀತ್ ಸಿಸೋಡಿಯಾ (೨೯) ಹೊರತುಪಡಿಸಿದರೆ ಇತರರು ರನ್ ಗಳಿಸುವಲ್ಲಿ ಎಡವಿದರು.
ಈಗಾಗಲೇ ಆರೆಂಜ್ ಕ್ಯಾಪ್ ಗಳಿಸಿದ್ದ ಆರಂಭಿಕ ಆಟಗಾರ ಮೊಹಮ್ಮದ್ ತಹಾ (೯) ಅವರ ವಿಕೆಟ್ ಪಡೆಯುವಲ್ಲಿ ಕೃಷ್ಣಪ್ಪ ಗೌತಮ್ ಯಶಸ್ವಿಯಾದರು. ಮೊದಲ ಓವರ್ ನಲ್ಲೇ ವಿಕೆಟ್ ಗಳಿಸಿ ಟೈಗರ್ಸ್ ತಂಡದ ಬೃಹತ್ ಮೊತ್ತಕ್ಕೆ . ಅಬ್ಬರದ ಹೊಡೆತಗಳಿಗೆ ಮನ ಮಾಡಿದ ನಾಯಕ ವಿನಯ್ ಕುಮಾರ್ ಕೂಡ ೪ ರನ್ ಗೆ ತೃಪ್ತಿಪಟ್ಟರು. ಪ್ರಸೀಧ್ ಕೃಷ್ಣ ಅವರ ಬೌಲಿಂಗ್ ನಲ್ಲಿ ವಿನಯ್ ಕುಮಾರ್ ಕ್ಲೀನ್ ಬೌಲ್ಡ್ ಆಗಿ ನಿರ್ಗಮಿಸಿದ್ದು,ಟೈಗರ್ಸ್ ತಂಡದ ಬೃಹತ್ ಮೊತ್ತದ ಕನಸನ್ನು ದೂರಮಾಡಿತು. ಇಂಥ ಪರಿಸ್ಥಿತಿಯಲ್ಲಿ ತಂಡಕ್ಕೆ ಆಧಾರವಾಗಿ ನಿಂತವರು ಆದಿತ್ಯ ಸೋಮಣ್ಣ. ೩೮ ಎಸೆತಗಳನ್ನು ಎದುರಿಸಿದ ಸೋಮಣ್ಣ ೨ ಸಿಕ್ಸರ್ ನೆರವಿನಿಂದ ಅಮೂಲ್ಯ ೪೭ ರನ್ ಗಳಿಸಿ ಅನುಭವಿ ಸ್ಪಿನ್ನರ್ ಕೆ.ಪಿ. ಅಪ್ಪಣ್ಣ ಬೌಲಿಂಗ್ ನಲ್ಲಿ ಎಲ್ಬಿಗೆ ಬಲಿಯಾದರು. ಲವ್ನಿತ್ ಸಿಸೋಡಿಯಾ ೨೯ ಎಸೆತಗಳಲ್ಲಿ ೨  ಬೌಂಡರಿ ಹಾಗೂ ೧ ಸಿಕ್ಸರ್ ಮೂಲಕ ೨೯ ರನ್ ಗಳಿಸಿ ಸಾಧಾರಣ ಮೊತ್ತದಲ್ಲಿ ಪ್ರಮುಖ ಭಾಗಿಯಾದರು. ಕೆಪಿ ಅಪ್ಪಣ್ಣ ೧೯ ರನ್ ಗೆ ೨ ವಿಕೆಟ್ ಗಳಿಸಿದರೆ, ಪ್ರಸೀಧ್ ಕಷ್ಣ, ಕೃಷ್ಣಪ್ಪ ಗೌತಮ್, ಅಬ್ರಾರ್ ಕಾಝಿ ಹಾಗೂ ಕಾರ್ತಿಕ್ ತಲಾ ೧ ವಿಕೆಟ್ ಗಳಿಸಿ ಟೈಗರ್ಸ್ ನ ರನ್ ಗಳಿಕೆಗೆ ಕಡಿವಾಣ ಹಾಕಿದರು.Conclusion:kpl
ETV Bharat Logo

Copyright © 2025 Ushodaya Enterprises Pvt. Ltd., All Rights Reserved.