ETV Bharat / city

70 ಡಿಗ್ರಿ ಉಷ್ಣತೆಯಲ್ಲೂ ಕೆಲಸ ಮಾಡಲಿದೆ ಈ ಎಸಿ ಜಾಕೆಟ್​.. ಯೋಧರು ಬಳಸುತ್ತಿರುವ ಜಾಕೆಟ್​ ಬಗ್ಗೆ ವಿಜ್ಞಾನಿ ಬಿಚ್ಚಿಟ್ಟ ರಹಸ್ಯಗಳು - The AC jacket will also work at temperatures of 70 degrees

ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ನಿಮಿತ್ತ ಡಿಆರ್​ಡಿಒ, ಡಿಎಫ್​ಆರ್​ಎಲ್ ಹಾಗೂ ಡಿಇಬಿಇಎಲ್ ಸಂಸ್ಥೆಗಳು ಸೇರಿ ಅಭಿವೃದ್ಧಿ ಪಡಿಸಿದ ಹೊಸ ತಂತ್ರಜ್ಞಾನಗಳು ಮತ್ತು ಉತ್ಪನ್ನಗಳ ಪ್ರದರ್ಶನದಲ್ಲಿ ಸೈನಿಕರಿಗಾಗಿ ತಯಾರಿಸಲಾಗಿರುವ ವಿಶೇಷ ಎಸಿ ಜಾಕೆಟ್ ನೋಡುಗರ ಗಮನ ಸೆಳೆಯುತ್ತಿದೆ.

ac jacket
ಎಸಿ ಜಾಕೆಟ್
author img

By

Published : Dec 13, 2021, 7:07 PM IST

ಮೈಸೂರು: ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ನಿಮಿತ್ತ ಡಿಆರ್​ಡಿಒ, ಡಿಎಫ್​ಆರ್​ಎಲ್ ಹಾಗೂ ಡಿಇಬಿಇಎಲ್ ಸಂಸ್ಥೆಗಳು ಸೇರಿ ಅಭಿವೃದ್ಧಿ ಪಡಿಸಿದ ಹೊಸ ತಂತ್ರಜ್ಞಾನಗಳು ಮತ್ತು ಉತ್ಪನ್ನಗಳ ಪ್ರದರ್ಶನದಲ್ಲಿ ಸೈನಿಕರಿಗಾಗಿ ತಯಾರಿಸಲಾಗಿರುವ ವಿಶೇಷ ಎಸಿ ಜಾಕೆಟ್ ನೋಡುಗರ ಗಮನ ಸೆಳೆಯುತ್ತಿದೆ.

ರಾಜಸ್ಥಾನದಂತಹ ಹೆಚ್ಚು ಉಷ್ಣಾಂಶವಿರುವ ಪ್ರದೇಶಗಳಲ್ಲಿ ದೇಹವನ್ನು ತಂಪಾಗಿರಿಸಿಕೊಳ್ಳಲು ವಿಶೇಷ ಎಸಿ ಜಾಕೆಟ್ ಅನ್ನು ವಿಜ್ಞಾನಿಗಳು ಆವಿಷ್ಕರಿಸಿದ್ದು, ಈಗಾಗಲೇ ಸಬ್​ಮೆರಿನ್​ಗಳಲ್ಲಿ ಬಳಸಲಾಗುತ್ತಿದೆ.

ಉಷ್ಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಯೋಧರಿಗಾಗಿ ತಯಾರಿಸಲಾದ ವಿಶೇಷ ಎಸಿ ಜಾಕೆಟ್​ನ ಕಾರ್ಯನಿರ್ವಹಣೆ, ಇದರ ವಿಶೇಷತೆ ಕುರಿತು ವಿಜ್ಞಾನಿ ರೇವಯ್ಯ ಅವರು 'ಈ ಟಿವಿ ಭಾರತ್' ಜೊತೆ ಮಾತನಾಡಿದ್ದಾರೆ.

ಬ್ಯಾಟಲ್ ಟ್ಯಾಂಕ್ ಮತ್ತು ಸಬ್ ಮೆರಿನ್​ಗಳಲ್ಲಿ ಈ ವಿಶೇಷ ಜಾಕೆಟ್ ಉಪಯೋಗಿಸಬಹುದಾಗಿದೆ. ರಾಜಸ್ತಾನದ ಮರುಭೂಮಿ ಪ್ರದೇಶಗಳಲ್ಲಿ 60-65 ಡಿಗ್ರಿ ಸೆಲ್ಸಿಯಸ್​ ಉಷ್ಣಾಂಶದಲ್ಲಿ ಸೈನಿಕರು ಕೆಲಸ ಮಾಡಬೇಕು ಎಂದರೆ ಅವರಿಗೆ ಈ ಎಸಿ ಜಾಕೆಟ್ ವರದಾನವಾಗಿದೆ ಎಂದರು.

ಈ ಜಾಕೆಟ್​ನ ಚಿಕ್ಕ ಯೂನಿಟ್​ನಿಂದ ತಂಪು ನೀರನ್ನು ಪೂರ್ತಿ ಹರಿಯುವಂತೆ ಮಾಡಲಾಗುತ್ತದೆ. ಆಗ ಜಾಕೆಟ್ ದೇಹದ ಉಷ್ಣತೆ ಹೀರಿಕೊಂಡು ಪರಿಸರಕ್ಕೆ ಬಿಡುತ್ತದೆ. ಇದಕ್ಕೆ 200 ವಾಟರ್ ಎನರ್ಜಿ ತೆಗೆದುಕೊಳ್ಳುತ್ತದೆ. ಎಸಿ ಹಾಕಿದರೆ 10 ಸಾವಿರ ವ್ಯಾಟ್ಸ್ ಎನರ್ಜಿ ಬೇಕಾಗಲಿದೆ ಎಂದು ವಿವರಿಸಿದರು.

ಇದನ್ನೂ ಓದಿ: ಗೋವುಗಳ ಹರಣ ಆರೋಪ.. ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್​ ವಿರುದ್ಧ ಪ್ರಿಯಾಂಕಾ ಗಾಂಧಿ ಗುಡುಗು

ಈ ಜಾಕೆಟ್​ ಅನ್ನು ಸಬ್​ಮೆರಿನ್ ಮತ್ತು ಬ್ಯಾಟಲ್ ಟ್ಯಾಂಕ್​ನಲ್ಲಿ ಉಪಯೋಗಿಸಬಹುದು. ಇದನ್ನು ಡಿಫೆನ್ಸ್‌ ಬಯೋ ಇಂಜಿನಿಯರಿಂಗ್ ಅಂಡ್ ಎಲೆಕ್ಟ್ರೋ ಮೆಡಿಕಲ್ ಲ್ಯಾಬೋರೇಟರಿ ಬೆಂಗಳೂರಿನ ಡಿಆರ್​ಡಿಒ ಅಡಿ ಅಭಿವೃದ್ಧಿಪಡಿಸಲಾಗಿದೆ. ಅರ್ಜುನ್ ಎಂಬಿ2ನಲ್ಲಿಯೂ ಪ್ರಯೋಗ ಮಾಡಿದ್ದೇವೆ. ಜಾಕೆಟ್ ಹೆಚ್ಚು ಉಪಯೋಗವಾಗುವ ಮಾಹಿತಿ ಬಂದಿದೆ ಎಂದು ತಿಳಿಸಿದರು.

ಈ‌ ಜಾಕೆಟ್ ಸಿಸ್ಟಮ್ ಬಹಳ ಸರಳವಾಗಿದೆ. ಕಾಸ್ಟ್ ಎಫೆಕ್ಟಿವ್ ಡಿವೈಸ್ ಆಗಿದ್ದು, ವಿದೇಶದಲ್ಲಿ ಇದನ್ನು ಖರೀದಿಸಲು 25 ಲಕ್ಷ ರೂಪಾಯಿ ಖರ್ಚಾಗುತ್ತದೆ. ಆದರೆ, ನಾವು 1.5 ಲಕ್ಷ ರೂಪಾಯಿ ವ್ಯಯ ಮಾಡಿ ತಯಾರಿಸಲಾಗಿದೆ. ಇದು ಆತ್ಮನಿರ್ಭರ ಭಾರತದ ಒಂದು ಹೆಜ್ಜೆಯಾಗಿದೆ. ಇದರಿಂದ ಅಡ್ಡಪರಿಣಾಮ ಇಲ್ಲ. ಆರೋಗ್ಯಕರವಾಗಿದೆ ಎಂದು ಬೆಂಗಳೂರಿನ ವಿಜ್ಞಾನಿ ರೇವಯ್ಯ ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.