ETV Bharat / city

ಕೆಪಿಸಿಸಿಗೆ ಪತ್ರ ಬರೆದ ತನ್ವೀರ್ ಸೇಠ್: ಕಾರಣ? - Tanveer Seth who wrote letter to KPCC

ನನ್ನ ಮೇಲಿರುವ ಆರೋಪ ಏನು? ನಾನು ಏನು ತಪ್ಪು ಮಾಡಿದೆ ಎಂದು ಉತ್ತರ ನೀಡುವಂತೆ ಆಗ್ರಹಿಸಿ ಶಾಸಕ ತನ್ವೀರ್ ಸೇಠ್​ಗೆ ಕಾಂಗ್ರೆಸ್​ಗೆ ಪತ್ರ ಬರೆದಿದ್ದಾರೆ.

ತನ್ವೀರ್ ಸೇಠ್
ತನ್ವೀರ್ ಸೇಠ್
author img

By

Published : Mar 24, 2021, 1:38 PM IST

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಜೆಡಿಎಸ್​ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಕುರಿತು ಶಾಸಕ ತನ್ವೀರ್ ಸೇಠ್​ಗೆ ಕಾಂಗ್ರೆಸ್ ನೋಟಿಸ್ ನೀಡಿದ್ದು, ಇದಕ್ಕೆ ಪ್ರತಿಯಾಗಿ ತನ್ವೀರ್ ಕೂಡ ಸ್ಪಷ್ಟನೆ ನೀಡುವಂತೆ ಕೋರಿ ಕೆಪಿಸಿಸಿಗೆ ಪುನಃ ಪತ್ರ ಬರೆದಿದ್ದಾರೆ.

ಈ ಬಗ್ಗೆ 'ಈಟಿವಿ ಭಾರತ'ದೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ತನ್ವೀರ್ ಸೇಠ್, ನಾನು ನೋಟಿಸ್​ಗೆ ಉತ್ತರ ನೀಡಿದ್ದೇನೆ. ವರಿಷ್ಠರ ಸೂಚನೆಯಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಬೇಡಿ ಎಂಬುದಕ್ಕೆ ಸುಮ್ಮನಿದ್ದೇನೆ. ಆದರೆ ನನ್ನ ಕ್ಷೇತ್ರದ 8 ಜನ ಬೆಂಬಲಿಗರಿಗೆ ನೋಟಿಸ್ ನೀಡಲಾಗಿದೆ. 3 ಜನರನ್ನು ಅಮಾನತು ಮಾಡಲಾಗಿದೆ. ಕಾಂಗ್ರೆಸ್​ನಲ್ಲಿ ಏನಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ನನ್ನ ಬೆಂಬಲಿಗರ ಮೇಲೆ ಸೇಡು ತೀರಿಸಿಕೊಳ್ಳಲು ಹೊರಟಿದ್ದಾರಾ ಅಥವಾ ಕಾಂಗ್ರೆಸ್ ಪಕ್ಷವನ್ನು ಈ ರೀತಿಯಾಗಿ ಕಟ್ಟಲು ಹೊರಟಿದ್ದಾರಾ ಎಂಬುದರ ಕುರಿತು ಸ್ಪಷ್ಟನೆ ನೀಡಬೇಕೆಂದು ಕಾಂಗ್ರೆಸ್ ಶಾಸಕ ಆಗ್ರಹಿದ್ದಾರೆ.

ಇನ್ನು ಮೈಸೂರು ಮೇಯರ್ ಚುನಾವಣೆಯಲ್ಲಿ ನಾನು ಮೈತ್ರಿ ಮಾಡಿ ತಪ್ಪು ಮಾಡಿದೆ ಎಂದಾದರೆ, ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಏಕೆ ಮೈತ್ರಿ ಮಾಡಿಕೊಂಡಿರಿ ಎಂದು ನನಗೆ ಅರ್ಥವಾಗುತ್ತಿಲ್ಲ. ಈ ಎಲ್ಲಾ ಗೊಂದಲಗಳಿಗೆ ಶೀಘ್ರವೇ ಉತ್ತರ ನೀಡಬೇಕು ಎಂದು ಕೆಪಿಸಿಸಿಗೆ ಪತ್ರ ಬರೆಯಲಾಗಿದ್ದು, ಉತ್ತರ ಬಂದ ನಂತರ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದರು‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.