ETV Bharat / city

ಕಡಿಮೆ ಕಾಲಾವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದೇನೆ: ಮೈಸೂರು ಮೇಯರ್​ ಸುನಂದಾ ಪಾಲನೇತ್ರ - sunanda palanetra works

6 ತಿಂಗಳುಗಳ ಕಾಲ ಮೇಯರ್ ಆಗಿ ಸೇವೆ ಸಲ್ಲಿಸಿರುವ ಸುನಂದಾ ಪಾಲನೇತ್ರ ಅವರು ತಮ್ಮ ಮೇಯರ್ ಕಾರ್ಯಾವಧಿಯ ಕೊನೆಯ ದಿನವಾದ ಇಂದು 'ಈಟಿವಿ ಭಾರತ'ದೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

mysore mayor  sunanda palanetra
ಮೇಯರ್ ಸುನಂದಾ ಪಾಲನೇತ್ರ
author img

By

Published : Feb 24, 2022, 4:35 PM IST

Updated : Feb 24, 2022, 4:57 PM IST

ಮೈಸೂರು: ಕಡಿಮೆ ಕಾಲಾವಧಿಯಲ್ಲಿ ನಾನು ಏನು ಮಾಡಬೇಕೆಂದುಕೊಂಡಿದ್ದೆನೋ ಆ ಕೆಲಸಗಳನ್ನು ಮಾಡಿದ್ದೇನೆ ಎಂದು ಮೈಸೂರಿನ ಮೇಯರ್ ಸುನಂದಾ ಪಾಲನೇತ್ರ ಅವರು 'ಈಟಿವಿ ಭಾರತ'ಕ್ಕೆ ತಿಳಿಸಿದರು.

ಮೇಯರ್ ಸುನಂದಾ ಪಾಲನೇತ್ರ ಅವರು ತಮ್ಮ ಮೇಯರ್ ಕಾರ್ಯಾವಧಿಯ ಕೊನೆಯ ದಿನದಂದು 'ಈಟಿವಿ ಭಾರತ' ಪ್ರತಿನಿಧಿಯೊಂದಿಗೆ ಮಾತನಾಡಿ, ನಾನು 6 ತಿಂಗಳುಗಳ ಕಾಲ ಮೇಯರ್ ಅಧಿಕಾರಾವಧಿಯಲ್ಲಿ ಏನೆಲ್ಲಾ ಕೆಲಸ ಮಾಡಬೇಕು ಎಂದು ಟಾರ್ಗೆಟ್ ಇಟ್ಟುಕೊಂಡಿದ್ದೆನೋ ಆ ಕೆಲಸಗಳನ್ನು ಮಾಡಿರುವ ಖುಷಿ ಇದೆ ಎಂದು ತಿಳಿಸಿದರು.

ಈಗಲೂ ನಗರದಲ್ಲಿ ಅನೇಕ ಕಾಮಗಾರಿಗಳು ನಡೆಯುತ್ತಿವೆ. ಮುಂದಿನ ತಿಂಗಳು ಎಲ್ಲಾ ಪೂರ್ಣಗೊಳ್ಳಲಿವೆ. ಅವಕಾಶ ಕೊಟ್ಟರೆ ಸಚಿವರು, ಶಾಸಕರು, ಸಂಸದರ ಜೊತೆ ನಾನೇ ಉದ್ಘಾಟನೆ ಮಾಡಬೇಕು ಎಂಬ ಆಸೆ ಇದೆ ಎಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.

ಮೇಯರ್ ಸುನಂದಾ ಪಾಲನೇತ್ರ ತಮ್ಮ ಕೆಲಸದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವುದು

ಈ ಆರು ತಿಂಗಳ ಅವಧಿಯಲ್ಲಿ ನಗರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ನಗರದಾದ್ಯಂತ ರಸ್ತೆಗಳಿಗೆ ಗುಂಡಿ ಮುಚ್ಚುವ ಕಾಮಗಾರಿ, ತಾಜ್ಯ ಸಂಗ್ರಹಣ ಮತ್ತು ಸಾಗಣಿಕೆ, ವಿವಿಧ ರುದ್ರ ಭೂಮಿಗಳ ಅಭಿವೃದ್ಧಿ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ‌ಇದರ ಜೊತೆ ನಗರದಲ್ಲಿ ಟ್ರಿನ್ ಟ್ರಿನ್ ಸೈಕಲ್ ಸೇವೆಯನ್ನು ಒದಗಿಸಲಾಗುತ್ತಿದೆ. ವಿವೇಕಾನಂದ ಸರ್ಕಲ್, ಕುವೆಂಪುನಗರ ಸೇರಿದಂತೆ 8 ಕಡೆಗಳಲ್ಲಿ ಟ್ರಿನ್ ಟ್ರಿನ್ ಸೈಕಲ್ ಸ್ಟ್ಯಾಂಡ್ ಗಳನ್ನು ಹೊಸದಾಗಿ ನಿರ್ಮಿಸಲಾಗುತ್ತಿದೆ. 25 ವರ್ಷಗಳ ಕಾಲ ವಾರ್ಡ್ ಗಳಲ್ಲಿ ಕೆಲಸ ಮಾಡಿದ್ದೇನೆ. ಮೊದಲ ಬಾರಿಗೆ ಮೈಸೂರಿನ ಮೇಯರ್ ಆಗಿ ಇಡೀ ಮೈಸೂರಿನ ಕೆಲಸ ಮಾಡಿದ್ದು ಖುಷಿ ಇದೆ. ಜೊತೆಗೆ ಬೇಗ ಕಾರ್ಯಾವಧಿ ಮುಗಿಯುತ್ತಿರುವ ಬೇಸರವೂ ಇದೆ ಎಂದು ತಿಳಿಸಿದರು.

ಮೇಯರ್​ ಸುನಂದಾ ಪಾಲನೇತ್ರ ಕೆಲಸದ ಬಗ್ಗೆ ಪೌರ ಕಾರ್ಮಿಕರ ಅಭಿಪ್ರಾಯ

ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ. ಮಹಿಳೆಯರು ಫ್ಲೈಟ್ ಅನ್ನೇ ಓಡಿಸುತ್ತಾರೆ, ಅವರಿಗೆ ಟಾಟಾ ಏಸ್ ಯಾವ ಲೆಕ್ಕ.‌ ನಮ್ಮ ಮಹಿಳಾ ಕಾರ್ಮಿಕರು ದ್ವಿಚಕ್ರ ವಾಹನಗಳನ್ನು ಓಡಿಸುತ್ತಾರೆ, ಜೊತೆಗೆ ಲೈಸೆನ್ಸ್ ಕೂಡ ಇದೆ. ಹಾಗಾಗಿ ಅವರಿಗೆ ಟಾಟಾ ಏಸ್ ಅನ್ನು ಓಡಿಸಲು ತರಬೇತಿ ನೀಡಲಾಗುತ್ತಿದೆ. ಆಗ ಪ್ರತಿ ವಾರ್ಡ್ ಗಳಿಗೂ ಮಹಿಳೆಯರೇ ಗಾಡಿ ಓಡಿಸಿಕೊಂಡು ಹೋಗಿ ಕಸ ಸಂಗ್ರಹಣೆ ಮಾಡಿಕೊಂಡು ಬರಬಹುದು. ಇದರಿಂದ ಅವರಿಗೂ ಕೆಲಸದ ಹೊರೆ ಕಡಿಮೆಯಾಗುತ್ತದೆ.‌ ಈಗ ಹತ್ತು ಜನ ಮಹಿಳಾ ಪೌರ ಕಾರ್ಮಿಕರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಮೇಯರ್​ ಮಾಹಿತಿ ನೀಡಿದರು.

ಇದನ್ನೂ ಓದಿ: ಎಸ್‍ಎಂಎ ಕಾಯಿಲೆಗೆ ತುತ್ತಾದ ಮಗು.. ಜೀವ ಉಳಿಸಲು ಬೇಕಿದೆ 16 ಕೋಟಿ ರೂ. ಧನಸಹಾಯ

ಮಹಿಳಾ ಪೌರ ಕಾರ್ಮಿಕರಾದ ಗೀತಾ ಹಾಗೂ ಪಾರ್ವತಿ ಅವರು ಮಾತನಾಡಿ, ಪೊರಕೆ ಹಿಡಿಯುವ ಕೈಯಲ್ಲಿ ಸ್ಟೇರಿಂಗ್ ಹಿಡಿಯಬೇಕು ಎಂದು ಮಹಿಳೆಯರಿಗೆ ಟಾಟಾ ಏಸ್ ಚಾಲನೆ ಮಾಡಲು ತರಬೇತಿ ನೀಡುತ್ತಿದ್ದಾರೆ. ಮೇಯರ್ ಅವರು ಆಸಕ್ತಿ ಇದ್ದವರಿಗೆ ತರಬೇತಿ ಪಡೆಯಬಹುದು ಎಂದಿದ್ದರು. ‌ಹಾಗಾಗಿ ನಾವು ತರಬೇತಿ ಪಡೆಯಲು ಬಂದಿದ್ದೇವೆ, ನಮಗೆ ತುಂಬಾ ಖುಷಿ ಇದೆ ಎಂದು ತಿಳಿಸಿದರು.

ತಳ್ಳುವ ಗಾಡಿಯಲ್ಲಿ ಕಸ ಸಂಗ್ರಹಣೆ ಮಾಡಿಕೊಂಡು ಬರಲು ಕೆಲವೊಮ್ಮೆ ಕಷ್ಟವಾಗುತ್ತಿತ್ತು. ಜೊತೆಗೆ ಡ್ರೈವರ್ ಬರುವವರೆಗೆ ನಾವು ಕಾಯಬೇಕಿತ್ತು. ಆದರೆ ನಾವೇ ಟಾಟಾ ಏಸ್ ಓಡಿಸಲು ಕಲಿತರೆ ತೊಂದರೆ ನಿವಾರಣೆಯಾಗುತ್ತದೆ ಎಂದು ಪೌರ ಕಾರ್ಮಿಕರು ಸಂತಸ ವ್ಯಕ್ತಪಡಿಸಿದ್ದಾರೆ.

Last Updated : Feb 24, 2022, 4:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.