ಮೈಸೂರು: ಹೆಚ್.ಡಿ.ದೇವೇಗೌಡರು ತಮ್ಮ ಕುಟುಂಬ ಬಿಟ್ಟು ಬೇರೆ ಯಾರಿಗಾದರೂ ಉನ್ನತ ಅಧಿಕಾರಿ ಕೊಟ್ಟಿದ್ದಾರಾ?. ಆದರೆ ಕಾಂಗ್ರೆಸ್ ಅವರ ಮುಂದೆ ಕೈಕೊಟ್ಟಿಕೊಂಡು ನಿಂತಿದೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ನಂಜನಗೂಡು ತಾಲೂಕಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವಾಗ ಮಹಾಘಟ್‍ಬಂಧನ್ ಮಾಡಲು ಎಲ್ಲ ನಾಯಕರು ಬಂದ್ದಿದ್ರು, ಆದ್ರೆ ಈಗ ಚುನಾವಣೆಯಲ್ಲಿ ಎಲ್ಲ ಎಲ್ಲಿದ್ದಾರೆ?. ಬರಲು ದೇವೇಗೌಡರು ಬಿಡುವುದಿಲ್ಲ, ರಾಹುಲ್ ಗಾಂಧಿಯೂ ಒಪ್ಪಿಕೊಳ್ಳುವುದಿಲ್ಲ. ಇವರಿಬ್ಬರಿಗೂ ಅಧಿಕಾರ ಬೇಕು ಎಂದು ಟೀಕಿಸಿದರು.
ಸಿದ್ದರಾಮಯ್ಯನವರು ಉತ್ತಮ ಆಡಳಿತ ನೀಡಿದ್ದರೆ, ತವರು ಜಿಲ್ಲೆಯಲ್ಲಿ ಸೋಲುತ್ತಿರಲಿಲ್ಲ. ಅಲ್ಲದೇ ಅವರ ಹಿಂದೆ ಇದ್ದ 17 ಮಂದಿ ಕೂಡ ಸೋಲುತ್ತಿರಲ್ಲಿಲ್ಲ. ಸಿದ್ದರಾಮಯ್ಯನಿಗೆ ಎಲ್ಲರಿಗೂ ಏಕವಚನದಲ್ಲಿ ಮಾತನಾಡಿ ಅಭ್ಯಾಸವಿದೆ ಎಂದರು.