ಮೈಸೂರು: ಸಹೋದರ ಪುನೀತ್ ರಾಜಕುಮಾರ್ ಅವರನ್ನು ನೆನೆದು ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಕಣ್ಣೀರಿಟ್ಟರು.
ಮೈಸೂರಿನ ಡಿಆರ್ಸಿ ಥಿಯೇಟರ್ನಲ್ಲಿ ಆಯೋಜಿಸಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡುವ ವೇಳೆ, ಅಪ್ಪು ನೆನೆದು ಶಿವಣ್ಣ ಭಾವುಕರಾದರು. ಏನ್ ಹೇಳಬೇಕಂತ ನನಗೆ ಗೊತ್ತಾಗುತ್ತಿಲ್ಲ. ಪ್ರತಿ ಸಿನಿಮಾ ರಿಲೀಸ್ ಆದಾಗ ಮಾರ್ನಿಂಗ್ ಕಾಲ್ ಮಾಡಿ ಹೇಗಿದೆ ಅಂತ ಕೇಳ್ತಿದ್ವಿ. ಪ್ರತಿ ಸಿನಿಮಾವನ್ನ ತುಂಬಾ ಎಂಜಾಯ್ ಮಾಡ್ತಿದ್ವಿ. ಸಿನಿಮಾದಲ್ಲಿ ನಟಿಸಿದಂತೆ ಜೀವನದಲ್ಲಿ ಬದುಕಬೇಕು ಅಂತಾ ಹೇಳ್ತಿದ್ದೆ. ಚಿಕ್ಕವಯಸ್ಸಿನಲ್ಲೇ ಎಲ್ಲರನ್ನ ಮೀರಿ ಬೆಳೆದ. ಸಿನಿಮಾಗೆ ಬಂದ ಮೇಲೆ ಇನ್ನೂ ದೊಡ್ಡವನಾದ ಎಂದು ಕಣ್ಣೀರು ಹಾಕಿದರು.
ಜೇಮ್ಸ್ ಚಿತ್ರದ ನಿರ್ದೇಶಕ ಚೇತನ್ ಮತ್ತು ಅವರ ತಂಡ ಉತ್ತಮ ಕೆಲಸ ಮಾಡಿದೆ. ಕ್ಯಾಮರಾ, ಕೊರಿಯೋಗ್ರಫಿ, ಟೆಕ್ನಿಕಲ್ ಟೀಂ ಚೆನ್ನಾಗಿ ಕೆಲಸ ಮಾಡಿದೆ. ಒಬ್ಬ ಅಭಿಮಾನಿಯಾಗಿ ಸಿನಿಮಾ ನೋಡ್ತಾ ಎಂಜಾಯ್ ಮಾಡಿದೆ. ಕೆಲ ಸೀನ್ ನೋಡಿ ಕಣ್ಣೀರು ಬರುತ್ತಿತ್ತು. ಇನ್ಮುಂದೆ ಅಪ್ಪಾಜಿ, ಅಮ್ಮ ಮತ್ತು ಪುನೀತ್ ಹೆಸರು ಉಳಿಸಿಕೊಂಡು ಹೋಗುವ ಶಕ್ತಿಯನ್ನು ದೇವರು ನಮಗೆ ಕೊಡಲಿ ಎಂದರು.
ಚಿತ್ರ ಯಶಸ್ವಿಯಾಗ್ತಿದೆ, ಇಡೀ ಇಂಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪುನೀತ್ ಏನೇ ಯೋಚಿಸಿದರೂ ದೊಡ್ಡಮಟ್ಟದಲ್ಲಿ ಯೋಚಿಸುತ್ತಿದ್ದ ಎಂದು ತಮ್ಮನನ್ನು ಶಿವಣ್ಣ ಸ್ಮರಿಸಿದರು.
(ಇದನ್ನೂ ಓದಿ: ಮೂರು ಹಾವುಗಳ ಜೊತೆ ಚೆಲ್ಲಾಟ: ಸಾವಿರಾರು ಉರಗಗಳ ರಕ್ಷಕ ಎಡವಟ್ಟಿನಿಂದ ಆಸ್ಪತ್ರೆ ಸೇರಿದ)