ETV Bharat / city

ಮಕ್ಕಳೊಂದಿಗೆ ಮಗುವಾಗಿ ಖೋ ಖೋ ಆಡಿದ ಹ್ಯಾಟ್ರಿಕ್ ಹೀರೋ.. ಭಜರಂಗಿ ಸರಳತೆಗೆ ಸಲಾಂ - ಮೈಸೂರಿನ ಶಕ್ತಿಧಾಮದ ಮಕ್ಕಳೊಂದಿಗೆ ಹ್ಯಾಟ್ರಿಕ್ ಹೀರೋ

ಡಾ. ರಾಜ್​​ಕುಮಾರ್ ಹಾಗೂ ಪಾರ್ವತಮ್ಮ ರಾಜ್​​​ಕುಮಾರ್ ಅವರು ಅನಾಥ ಮಕ್ಕಳು ಹಾಗು ವೃದ್ಧರಿಗಾಗಿ ಮೈಸೂರಿನಲ್ಲಿ ಸ್ಥಾಪಿಸಿರುವ ಶಕ್ತಿಧಾಮದಲ್ಲಿ ಮಕ್ಕಳೊಂದಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಖೋ ಖೋ ಆಡಿರುವ ವಿಡಿಯೋ ವೈರಲ್​ ಆಗಿದೆ.

shiva Rajkumar plays kho kho with Mysore shaktidhama children
ಮಕ್ಕಳೊಂದಿಗೆ ಖೋ ಖೋ ಆಡಿದ ಶಿವರಾಜ್ ಕುಮಾರ್
author img

By

Published : Dec 28, 2021, 6:08 PM IST

ಕನ್ನಡ ಚಿತ್ರರಂಗದಲ್ಲಿ 'ನಿರ್ಮಾಪಕರ ನಟ' ಅಂತಾ ಕರೆಯಿಸಿಕೊಂಡಿರುವ ಸ್ಟಾರ್ ಅಂದ್ರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಇದರ ಜೊತೆಗೆ ಅಭಿಮಾನಿಗಳ ಅಚ್ಚುಮೆಚ್ಚಿನ ನಟನಾಗಿರೋ ಶಿವಣ್ಣರದ್ದು ಮಗುವಿನಂಥ ಮನಸ್ಸು ಅನ್ನೋದು ಈಗ ಮತ್ತೊಮ್ಮೆ ಸಾಬೀತಾಗಿದೆ.

ತಾವೊಬ್ಬ ಸ್ಟಾರ್ ನಟ ಎಂಬ ಟ್ಯಾಗ್​ ಅನ್ನು ತಲೆಗೆ ಅಂಟಿಸಿಕೊಳ್ಳದೆ ಬಹಳ ಸರಳವಾಗಿ ಇರ್ತಾರೆ. ಇದೀಗ ಶಿವರಾಜ್ ಕುಮಾರ್ ಮಕ್ಕಳ ಜೊತೆ ಸೇರಿಕೊಂಡು ಬಾಲ್ಯದಲ್ಲಿ ಆಡುತ್ತಿದ್ದ ಆಟ ಖೋ ಖೋ ಆಟವನ್ನ ಆಡಿ ಸಂಭ್ರಮಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ಕಂಡ ಅಭಿಮಾನಿಗಳು ಶಿವಣ್ಣನ ವ್ಯಕ್ತಿತ್ವಕ್ಕೆ ಫಿದಾ ಆಗಿದ್ದಾರೆ.

ಮಕ್ಕಳೊಂದಿಗೆ ಖೋ ಖೋ ಆಡಿದ ಶಿವರಾಜ್ ಕುಮಾರ್

ಡಾ. ರಾಜ್​​ಕುಮಾರ್ ಹಾಗೂ ಪಾರ್ವತಮ್ಮ ರಾಜ್​​ಕುಮಾರ್ ಅವರು ಅನಾಥ ಮಕ್ಕಳು ಹಾಗು ವೃದ್ಧರಿಗಾಗಿ ಮೈಸೂರಿನಲ್ಲಿ ಸ್ಥಾಪಿಸಿರುವ ಕೇಂದ್ರವೇ ಶಕ್ತಿಧಾಮ. ಈ ಶಕ್ತಿಧಾಮದ ಅನಾಥ ಮಕ್ಕಳ ಜೊತೆ ಶಿವಣ್ಣ ಬಹಳ ಉತ್ಸಾಹದೊಂದಿಗೆ ಖೋ ಖೋ ಆಡಿದ್ದಾರೆ. ಮಕ್ಕಳು ಕೂಡ ಶಿವರಾಜ್ ಕುಮಾರ್​​ ಅವರನ್ನ ನಟ ಎಂದು ಭಾವಿಸದೆ ಸ್ನೇಹಿತನ ಜೊತೆ ಆಟವಾಡಿದಂತೆ ಆಡಿದ್ದಾರೆ.

ಇದನ್ನೂ ಓದಿ: Watch Video... ಹೈ ಹೀಲ್ಸ್​ ಧರಿಸಿ ಬ್ಯಾಲೆನ್ಸ್​ ಕಳೆದುಕೊಂಡ ಮಲೈಕಾ: ನಟಿ ರಕ್ಷಿಸಿದ ಸಿಬ್ಬಂದಿ

ಶಿವರಾಜ್ ಕುಮಾರ್ ನಟನೆಯ 'ಭಜರಂಗಿ 2' ಸಿನಿಮಾ ಅಕ್ಟೋಬರ್ 29ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಆದರೆ ಅದೇ ದಿನ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ನಮ್ಮೆಲ್ಲರನ್ನು ಅಗಲಿದ್ದರು. ಎ. ಹರ್ಷ ನಿರ್ದೇಶನದ ಭಜರಂಗಿ 2 ಸಿನಿಮಾ ಈಗ ಒಟಿಟಿಯಲ್ಲಿ (ಜೀ5) ಪ್ರದರ್ಶನ ಆಗುತ್ತಿದೆ. ಮೂರು ದಿನಕ್ಕೆ ಬರೋಬ್ಬರಿ 5 ಕೋಟಿ ಜನ ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.