ETV Bharat / city

ನಾಡಹಬ್ಬ ದಸರಾಗೆ ಹೇಗಿರಲಿದೆ ಪೊಲೀಸ್ ಭದ್ರತೆ?

ನಾಡಹಬ್ಬ ದಸರಾಗೆ ಎರಡನೇ ಹಂತದ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ಜೊತೆಗೆ ಸಿಸಿಟಿವಿ ಕ್ಯಾಮರಾ ಹಾಗೂ ಡ್ರೋಣ್ ಕ್ಯಾಮರಾಗಳ ಕಣ್ಗಾವಲು ಇರಲಿದೆ ಎಂದು ನಗರ ಪೊಲೀಸ್ ಕಮಿಷನರ್ ಕೆ.ಟಿ. ಬಾಲಕೃಷ್ಣ ತಿಳಿಸಿದ್ದಾರೆ.

ನಾಡಹಬ್ಬ ದಸರಾಗೆ ಎರಡನೇ ಹಂತದ ಪೊಲೀಸ್ ಭದ್ರತೆ :ನಗರ ಪೊಲೀಸ್ ಕಮಿಷನರ್
author img

By

Published : Sep 25, 2019, 10:49 AM IST

ಮೈಸೂರು: ನಾಡಹಬ್ಬ ದಸರಾಗೆ ಎರಡನೇ ಹಂತದ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದ್ದು, ಸಿಸಿಟಿವಿ ಹಾಗೂ ಡ್ರೋಣ್ ಕ್ಯಾಮರಾಗಳ ಕಣ್ಗಾವಲು ಇರಲಿದೆ ಎಂದು ನಗರ ಪೊಲೀಸ್ ಕಮಿಷನರ್ ಕೆ.ಟಿ. ಬಾಲಕೃಷ್ಣ ಮಾಹಿತಿ ನೀಡಿದ್ದಾರೆ.

ನಾಡಹಬ್ಬ ದಸರಾಗೆ ಎರಡನೇ ಹಂತದ ಪೊಲೀಸ್ ಭದ್ರತೆ :ನಗರ ಪೊಲೀಸ್ ಕಮಿಷನರ್

ನಗರದ ಖಾಸಗಿ ಹೋಟೆಲ್‌ನಲ್ಲಿ ಮಾಧ್ಯಮಗೊಷ್ಟಿಯಲ್ಲಿ ಮಾತನಾಡಿದ ಅವರು, ಸೆಪ್ಟಂಬರ್​ 26 ರಿಂದ ಅ.5 ರವರೆಗೆ ಮತ್ತು ಅ. 6 ರಿಂದ 8 ರವರೆಗೆ ಎರಡು ಹಂತಗಳಲ್ಲಿ ಬಂದೋಬಸ್ತ್ ಮಾಡಲಾಗುತ್ತಿದೆ. ಗುಪ್ತಚರ ಇಲಾಖೆಯ ಜೊತೆಗೆ ತಾಂತ್ರಿಕ ಗುಪ್ತಚರ ಸಿಬ್ಬಂದಿ ಹಾಗೂ ಡ್ರೋಣ್ ಮತ್ತು ಬಾಡಿವೋರ್ನ್ ಕ್ಯಾಮರಾಗಳನ್ನು ಬಳಸಲಾಗುತ್ತಿದೆ. ಬಂದೋಬಸ್ತ್‌ಗೆ 8407 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದರು.

ನಗರದಿಂದ 2978 ಹೊರ ಜಿಲ್ಲೆಗಳಿಂದ 4421 ಅಧಿಕಾರಿಗಳು, ಸಿಬ್ಬಂದಿ ಹಾಗೂ 1 ಸಾವಿರ ಗೃಹರಕ್ಷಕ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕಮಾಂಡೋ ಮತ್ತು ಬಾಂಬ್ ನಿಷ್ಕ್ರಿಯ ದಳದಲ್ಲಿ 391 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು, ಡಿಎಆರ್​, ಕೆಎಸ್‌ಆರ್‌ಪಿ, ಮಹಿಳಾ ಕೆಎಸ್‌ಆರ್‌ಪಿ, ಶ್ವಾನದಳ ಹಾಗೂ ಗರುಡ ಪಡೆಗಳು ಕಾರ್ಯನಿರ್ವಹಿಸಲಿವೆ. ಅಲ್ಲದೇ, ಕೇರಳ, ತಮಿಳುನಾಡು, ಬೆಂಗಳೂರಿನಿಂದ ಅಪರಾಧ ಪತ್ತೆ ದಳ ಸಿಬ್ಬಂದಿ ಬರಲಿದ್ದಾರೆ ಎಂದು ಕೆ ಟಿ ಬಾಲಕೃಷ್ಣ ಮಾಹಿತಿ ನೀಡಿದರು.

ಸಿಸಿ ಕ್ಯಾಮರಾಗಳ ಕಣ್ಗಾವಲು: ಈಗಾಗಲೇ ಅಳವಡಿಸಿರುವ ಖಾಯಂ ಸಿಸಿಟಿವಿ ಕ್ಯಾಮರಾಗಳು ಹಾಗೂ ವಿವಿಧ ಸ್ಥಳಗಳಲ್ಲಿ ಸಾರ್ವನಿಕರು ಅವಳಡಿಸಿಕೊಂಡಿರುವ ಸುಮಾರು 11,917 ಸಿಸಿಟಿವಿ ಕ್ಯಾಮರಾಗಳು ನಗರದಲ್ಲಿವೆ. ಮೆರವಣಿಗೆ ಮಾರ್ಗ ಮತ್ತು ಇತರೆ ಪ್ರಮುಖ ಸ್ಥಳಗಳಲ್ಲಿ 212 ಸಿಸಿ ಕ್ಯಾಮರಾಗಳನ್ನು ಅವಳಡಿಸಲಾಗಿದೆ ಎಂದು ತಿಳಿಸಿದರು.

ಪೊಲೀಸ್ ಸಹಾಯ ಕೇಂದ್ರಗಳು: ಪ್ರವಾಸಿಗರಿಗೆ ದಸರಾ ಮತ್ತು ಪ್ರವಾಸಿ ಮಹಿತಿ ನೀಡಲು ಸೆ.29 ರಿಂದ ಅ. 8ರವರೆಗೆ ನಗರದ ಪ್ರಮುಖ ಸ್ಥಳಗಳಾದ ಜಗಜೀವನರಾಮ್ ವೃತ್ತ, ರೈಲ್ವೆ ನಿಲ್ದಾಣ, ರೈಲ್ವೆ ನಿಲ್ದಾಣ ಪಶ್ಚಿಮ ದ್ವಾರ, ಅರಮನೆ ಬಲರಾಮ ಗೇಟ್, ಜಗನ್ಮೋಹನ ಅರಮನೆ, ಅರಮನೆಯ ವರಹಾ ಗೇಟ್, ಜಯಮಾರ್ತಾಂಡ ಗೇಟ್, ಕೆ.ಆರ್.ವೃತ್ತ, ಸೈಂಟ್ ಫಿಲೋಮಿನಾ ಚರ್ಚ್, ಕೆ.ಆರ್. ವೃತ್ತ ಸೇರಿದಂತೆ 20 ಸ್ಥಳಗಳಲ್ಲಿ ಪೊಲೀಸ್ ಸಹಾಯ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಬೆಳಗ್ಗೆ 9 ರಿಂದ ರಾತ್ರಿ10ರವರೆಗೆ ಇವು ಕಾರ್ಯನಿರ್ವಹಿಸಲಿವೆ.

ಸಂಚಾರ ಮಾರ್ಗ ನಿರ್ಬಂಧ, ಬದಲಿ ಮಾರ್ಗ, ಪಾರ್ಕಿಂಗ್ ವ್ಯವಸ್ಥೆ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದಸರಾ ಉತ್ಸವದ ಸಮಯದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಅರಮನೆ ಸುತ್ತಮುತ್ತಲ ರಸ್ತೆಗಳು, ನ್ಯೂ ಎಸ್.ಆರ್. ರಸ್ತೆ, ಬಿ.ಎನ್.ರಸ್ತೆ, ಬನುಮಯ್ಯ ರಸ್ತೆ, ತ್ಯಾಗರಾಜ ರಸ್ತೆ, ಕೆಆರ್‌ಬಿ ರಸ್ತೆಗಳಲ್ಲಿ ಏಕ ಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಈ ರಸ್ತೆಗಳ ಬದಿಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ನಿಷೇಧಿಸಲಾಗಿದೆ.

ಕಮಾಂಡ್ ಸೆಂಟರ್ ಬಸ್​​ನ್ನ ಈ ಬಾರಿ ದಸರಾ ಮಹೋತ್ಸವದಲ್ಲಿ ಬಳಸಲಾಗುತ್ತಿದೆ. ಈ ಬಸ್​ನಲ್ಲಿ ಸಿಸಿಟಿವಿ ವ್ಯವಸ್ಥೆಯಿದ್ದು, ಬಾಡಿ ವೋರ್ನ್ ಕ್ಯಾಮರಾಗಳು, ಲಾಂಗ್ ಡಿಸ್ಟೆನ್ಸ್ ವಿಡಿಯೋಗ್ರಫಿ ಮತ್ತು ಫೋಟೊಗ್ರಫಿ ವ್ಯವಸ್ಥೆ ಇರುತ್ತದೆ. ಇದರೊಂದಿಗೆ ಅರಮನೆ 8 ದ್ವಾರಗಳಲ್ಲಿ ಮತ್ತು ಬನ್ನಿಮಂಟಪದ 12 ಪ್ರವೇಶ ದ್ವಾರಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಬಾಡಿವೋರ್ನ್ ಕ್ಯಾಮರಾಗಳೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ ಎಂದು ಪೊಲೀಸ್​ ಕಮೀಷನರ್​ ವಿವರಿಸಿದರು.

ಅ.8 ರಂದು ಜಂಬೂ ಸವಾರಿ ಮೆರವಣಿಗೆ ಮಾದರಿಯಲ್ಲಿ ಸಾಂಸ್ಕೃತಿಕ ಮೆರವಣಿಗೆ ಜರುಗಲಿದೆ. ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಪಿಕ್​ ಪ್ಯಾಕೆಟ್, ಮಹಿಳೆಯರೊಂದಿಗೆ ಅನುಚಿತ ವರ್ತನೆ, ಮೊಬೈಲ್ ಕಳ್ಳತನ ಮಾಡುವವರನ್ನ ಪತ್ತೆ ಹಚ್ಚಲು ಪೊಲೀಸ್ ಇಲಾಖೆ ಡ್ರೋಣ್ ಕ್ಯಾಮರಾಗಳನ್ನು ಬಳಸಲಾಗುತ್ತಿದೆ. ಇನ್ನು ಅಂಬಾರಿಯನ್ನು ಹೊತ್ತು ತರುವ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಗೆ ಸೆಲ್ಫಿ ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ನಗರ ಪೊಲೀಸ್​ ಆಯುಕ್ತ ಬಾಲಕೃಷ್ಣ ಇದೇ ವೇಳೆ ಸೂಚಿಸಿದರು.

Intro:ಮೈಸೂರು: ನಾಡಹಬ್ಬ ದಸರಾ ಎರಡು ಹಂತದ ಪೋಲಿಸ್ ಭದ್ರತೆಯನ್ನು ಏರ್ಪಡಿಸಲಾಗಿದ್ದು, ಇದರ ಜೊತೆಗೆ ಸಿಸಿಟಿವಿ ಕ್ಯಾಮರಾ ಹಾಗೂ ದ್ರೋಣ್ ಕ್ಯಾಮರಾಗಳ ಕಣ್ಗಾವಲು ಇರಲಿದೆ ಎಂದು ನಗರ ಪೋಲಿಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.Body:

ನಾಡಹಬ್ಬ ದಸರಾ ವೇಳೆ ಅಹಿತಕರ ಘಟನೆ ತಡೆಗೆ ನಗರ ಪೊಲೀಸರು ಹಲವಾರು ಮುನ್ನೆಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ ತಿಳಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸೆ.೨೯ ರಿಂದ ೫ರ ವರೆಗೆ ಹಾಗೂ ೬ ರಿಂದ ೮ರ ವರೆಗೆ ಎರಡು ಹಂತಗಳಲ್ಲಿ ಬಂದೋಬಸ್ತ್ ಮಾಡಲಾಗುತ್ತಿದೆ. ಗುಪ್ತಚರ ಇಲಾಖೆಯ ಜೊತೆಗೆ ತಾಂತ್ರಿಕ ಗುಪ್ತಚರ ಸಿಬ್ಬಂದಿಗಳನ್ನು ಹಾಗೂ ಡ್ರೋಣ್ ಹಾಗೂ ಬಾಡಿವೋರ್ನ್ ಕ್ಯಾಮರಾಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಬಂದೋಬಸ್ತ್‌ಗೆ ೮೪೦೭ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಎಂದರು.
ನಗರದಿಂದ ೨೯೭೮, ಹೊರ ಜಿಲ್ಲೆಗಳಿಂದ ೪೪೨೯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ೧ ಸಾವಿರ ಗೃಹರಕ್ಷಕ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕಮಾಂಡೋ ಮತ್ತು ಬಾಂಬ್ ನಿಷ್ಕ್ರೀಯ ದಳದಲ್ಲಿ ೩೯೧ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದು, ಡಿಎಆರ್, ಕೆಎಸ್‌ಆರ್‌ಪಿ, ಮಹಿಳಾ ಕೆಎಸ್‌ಆರ್‌ಪಿ, ಶ್ವಾನದಳ, ಗರುಡ ಪಡೆಗಳು ಕಾರ್ಯನಿರ್ವಹಿಸಲಿವೆ. ಅಲ್ಲದೇ, ಕೇರಳ, ತಮಿಳುನಾಡು, ಬೆಂಗಳೂರಿನಿಂದ ಅಪರಾಧ ಪತ್ತೆ ದಳ ಸಿಬ್ಬಂದಿ ಬರಲಿದ್ದಾರೆ ಎಂದರು.
ಸಿಸಿ ಕ್ಯಾಮರಾದ ಕಣ್ಗಾವಲು: ಈಗಾಗಲೇ ಅಳವಡಿಸಿರುವ ಖಾಯಂ ಸಿಸಿ ಟಿವಿ ಕ್ಯಾಮರಾಗಳು ವಿವಿಧ ಸ್ಥಳಗಳಲ್ಲಿ ಸಾರ್ವನಿಕರು ಅವಳಡಿಸಿಕೊಂಡಿರುವ ಸುಮಾರು ೧೧೯೧೭ ಸಿಸಿಟಿವಿ ಕ್ಯಾಮರಾಗಳು, ಮೆರವಣಿಗೆ ಮಾರ್ಗ ಮತ್ತು ಇತರೆ ಪ್ರಮುಖ ಸ್ಥಳಗಳಲ್ಲಿ ಒಟ್ಟು ೨೧೨ ಸಿಸಿ ಕ್ಯಾಮರಾಗಳನ್ನು ಅವಳಡಿಸಲಾಗಿದೆ.
ಪೊಲೀಸ್ ಸಹಾಯ ಕೇಂದ್ರಗಳು: ಪ್ರವಾಸಿಗರಿಗೆ ದಸರಾ ಮತ್ತು ಪ್ರವಾಸಿ ಮಹಿತಿ ನೀಡಲು ಸೆ.೨೯ರಿಂದ ಅ.೮ರವರೆಗೆ ನಗರದ ಪ್ರಮುಖ ಸ್ಥಳಗಳಾದ ಜಗಜೀವನರಾಮ್ ವೃತ್ತ, ರೈಲ್ವೆ ನಿಲ್ದಾಣ, ರೈಲ್ವೆ ನಿಲ್ದಾಣ ಪಶ್ಚಿಮ ದ್ವಾರ, ಅರಮನೆ ಬಲರಾಮ ಗೇಟ್, ಜಗನ್ಮೋಹನ ಅರಮನೆ, ಅರಮನೆಯ ವರಹಾ ಗೇಟ್, ಜಯಮಾರ್ತಾಂಡ ಗೇಟ್, ಕೆ.ಆರ್.ವೃತ್ತ, ಸೆಂಟ್ ಫಿಲೋಮಿನ ಚರ್ಚ್, ಕೆ.ಆರ್.ವೃತ್ತ ಸೇರಿದಂತೆ ೨೦ ಸ್ಥಳಗಳಲ್ಲಿ ಪೊಲೀಸ್ ಸಹಾಯ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಬೆಳಿಗ್ಗೆ ೯ರಿಂದ ರಾತ್ರಿ ೧೦ವರೆಗೆ ಕಾರ್ಯನಿರ್ವಹಿಸಲಿವೆ.
ಸಂಚಾರ ಮಾರ್ಗ ನಿರ್ಬಂಧ, ಬದಲಿ ಮಾರ್ಗ, ಪಾರ್ಕಿಂಗ್ ವ್ಯವಸ್ಥೆ: ಪ್ರತಿವರ್ಷದಂತೆ ಈ ವರ್ಷವೂ ಕೂಡ ದಸರಾ ಉತ್ಸವದ ಸಮಯದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಯನ್ನು ತರಲಾಗಿದೆ. ಅರಮನೆ ಸುತ್ತಮುತ್ತಲ ರಸ್ತೆಗಳು, ನ್ಯೂ ಎಸ್.ಆರ್ ರಸ್ತೆ, ಬಿ.ಎನ್.ರಸ್ತೆ, ಬನುಮಯ್ಯ ರಸ್ತೆ, ತ್ಯಾಗರಾಜ ರಸ್ತೆ, ಕೆಆರ್‌ಬಿ ರಸ್ತೆಗಳಲ್ಲಿ ಏಕ ಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಈ ರಸ್ತೆಗಳ ಬದಿಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ನಿಷೇಧಿಸಲಾಗಿದೆ.
ಕಮಾಂಡ್ ಸೆಂಟರ್ ಬಸ್ಸುನ್ನು ಈ ಬಾರಿ ದಸರಾ ಮಹೋತ್ಸವದಲ್ಲಿ ಬಳಕೆ ಮಾಡಲಾಗುತ್ತಿದೆ. ಈ ಬಸ್ಸಿನಲ್ಲಿ ಸಿಸಿಟಿವಿ ವ್ಯವಸ್ಥೆ ಇದ್ದು, ಬಾಡಿ ವೋರ್ನ್ ಕ್ಯಾಮರಾಗಳು, ಲಾಂಗ್ ಡಿಸ್ಟೆನ್ಸ್ ವಿಡಿಯೋಗ್ರಫಿ ಮತ್ತು ಫೋಟೋಗ್ರಫಿಗಳನ್ನು ತೆಗೆಯುವ ವ್ಯವಸ್ಥೆ ಇರುತ್ತದೆ. ಇದರೊಂದಿಗೆ ಅರಮನೆ ೮ ದ್ವಾರಗಳಲ್ಲಿ ಮತ್ತು ಬನ್ನಿಮಂಟಪದ ೧೨ ಪ್ರವೇಶ ದ್ವಾರಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿ ಬಾಡಿವೋರ್ನ್ ಕ್ಯಾಮರಾಗಳೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಅ.೮ರಂದು ಜಂಬೂ ಸವಾರಿ ಮೆರವಣಿಗೆ ಮಾದರಿಯಲ್ಲಿ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಪಿಕ್ ಪ್ಯಾಕೆಟ್, ಮಹಿಳೆಯರೊಂದಿಗೆ ಅನುಚಿತ ವರ್ತನೆ, ಮೊಬೈಲ್ ಕಳ್ಳತನ ಮಾಡುವವರು ಪತ್ತೆ ಹಚ್ಚಲು. ಹಾಗೂ ಪೊಲೀಸ್ ಇಲಾಖೆ ಡ್ರೋಣ್ ಕ್ಯಾಮರಾಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಂಬಾರಿಯನ್ನು ಹೊತ್ತು ತರುವ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಗಳು ಸೆಲ್ಫಿ ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ.

( ಸೆಲ್ಫಿ ತೆಗೆದುಕೊಳ್ಳುವ ಫೈಲ್ ವಿಡಿಯೋವನ್ನು ಕಳುಹಿಸಲಾಗಿದೆ )Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.