ಮೈಸೂರು: ನೆಲಮಂಗಲದಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮುಖ್ಯ ಕಾರ್ಯದರ್ಶಿಗೆ ಶಾಸಕ ಸಾ.ರಾ. ಮಹೇಶ್ ಪತ್ರ ಬರೆದು ಮೃತರ ಕುಟುಂಬಕ್ಕೆ ಶೀಘ್ರ ಪರಿಹಾರ ತಲುಪಿಸುವಂತೆ ಮನವಿ ಮಾಡಿದ್ದಾರೆ.
ಕೋವಿಡ್‌ನಿಂದ ಮೃತಪಟ್ಟಿದ್ದ ಪ್ರಸನ್ನ ಕುಮಾರ್ ಅವರ ಕುಟುಂಬಕ್ಕೆ ಪರಿಹಾರ ಸಕಾಲದಲ್ಲಿ ಸಿಕ್ಕಿಲ್ಲ. ಒಂದು ವೇಳೆ ಸಿಕ್ಕಿದ್ದರೆ ಅಮಾಯಕ ಜೀವಗಳು ಉಳಿಯುತ್ತಿದ್ದವು. ಈ ಕೂಡಲೇ ಬಾಕಿಯಿರುವ ಹಣ ಕೊಡಿಸಿ. ಮೃತರ ಕುಟುಂಬಕ್ಕೆ ಬಾಕಿಯಿರುವ ಪರಿಹಾರವನ್ನು ಶೀಘ್ರದಲ್ಲೇ ನೀಡಿ ಎಂದು ಕೋರಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಕ್ರೂರಿ ಕೋವಿಡ್ಗೆ ಪತಿ ಬಲಿ.. ನೋವಿನಲ್ಲಿ ಇಬ್ಬರು ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ
ಜೊತೆಗೆ ಬಿಪಿಎಲ್ ಕುಟುಂಬದವರಿಗೆ ನೀಡುವ 1 ಲಕ್ಷ ರೂ. ಪರಿಹಾರವನ್ನು ಕೊಡಿ. ಒಂದು ಕಡೆ ಪ್ರಾಮಾಣಿಕ ನೌಕರರು ಈ ರೀತಿ ಬಲಿಯಾಗುತ್ತಿದ್ದಾರೆ, ಮತ್ತೊಂದೆಡೆ ಕೆಲವು ಭ್ರಷ್ಟ ನೌಕರರು ಪ್ರತಿನಿತ್ಯ ಹಣ ಲೂಟಿ ಮಾಡುತ್ತಿದ್ದಾರೆ. ಸರ್ಕಾರ ಪ್ರಾಮಾಣಿಕ ನೌಕರರ ಹಿತ ಕಾಯುತ್ತಿಲ್ಲ ಎಂದು ಪತ್ರದ ಮೂಲಕ ಶಾಸಕ ಸಾ. ರಾ. ಮಹೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.