ETV Bharat / city

ವಿದ್ಯಾರ್ಥಿಯ ಅವಾಚ್ಯ ಶಬ್ಧಗಳಿಗೆ ಭಾವುಕರಾದ ಸಾ‌‌‌.ರಾ.ಮಹೇಶ್ - ETV Bharat Kannada

ಕೆ.ಆರ್ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹೆಚ್ಚುವರಿ ಕಟ್ಟಡ ತಡವಾಗಿ ಉದ್ಘಾಟನೆ ಆದ ಹಿನ್ನೆಲೆ ವಿದ್ಯಾರ್ಥಿಯೊಬ್ಬ ಶಾಸಕರನ್ನು ಕೆಟ್ಟ ಪದಗಳಿಂದ ನಿಂದಿಸಿದ್ದಾನೆ.

sa-ra-mahesh-became-emotional
ವಿದ್ಯಾರ್ಥಿಯ ಅವಾಚ್ಯ ಶಬ್ಧಗಳಿಗೆ ಭಾವುಕರಾದ ಸಾ‌‌‌.ರಾ.ಮಹೇಶ್
author img

By

Published : Aug 4, 2022, 10:11 AM IST

Updated : Aug 4, 2022, 12:27 PM IST

ಮೈಸೂರು: ವಿದ್ಯಾರ್ಥಿಯ ಅವಾಚ್ಯ ಶಬ್ದಗಳ ಪೋಸ್ಟ್‌ಗೆ ಶಾಸಕ ಸಾರಾ ಮಹೇಶ್ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಕೆ.ಆರ್ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ನೂತನ ಹೆಚ್ಚುವರಿ ಕಟ್ಟಡ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಶಾಸಕ ಸಾ. ರಾ ಮಹೇಶ್ ಭಾವುಕರಾಗಿದ್ದಾರೆ.

ಹೆಚ್ಚುವರಿ ಕಟ್ಟಡ ನಿರ್ಮಾಣವಾದರೂ ತಡವಾಗಿ ಉದ್ಘಾಟನೆ ಆದ ಹಿನ್ನೆಲೆಯಲ್ಲಿ ವಿದ್ಯಾರ್ಥಿಯೊಬ್ಬ ಆಕ್ರೋಶದಲ್ಲಿ ಶಾಸಕರನ್ನು ತೇಜೋವಧೆ ಮಾಡಿರುವ ಸಂಬಂಧ ಅದನ್ನು ನೆನೆಸಿಕೊಂಡು ಶಾಸಕರು ಬೇಸರಗೊಂಡಿದ್ದಾರೆ.

ವಿದ್ಯಾರ್ಥಿಯ ಅವಾಚ್ಯ ಶಬ್ಧಗಳಿಗೆ ಭಾವುಕರಾದ ಸಾ‌‌‌.ರಾ.ಮಹೇಶ್

ಕಟ್ಟಡ ಉದ್ಘಾಟನೆ ಕಾರ್ಯಕ್ರಮ ತಡವಾಗಿ ನಡೆದಿರುವುದರಿಂದ, ಆ ವಿದ್ಯಾರ್ಥಿ ನನ್ನನ್ನು ಅತಿ ಕೆಟ್ಟ ಪದಗಳಿಂದ ನಿಂದಿಸಿರುವುದು ನನಗೆ ಬಹಳ ನೋವುಂಟು ಮಾಡಿದೆ. ತಾಲೂಕಿನ ಅಭಿವೃದ್ಧಿಗಾಗಿ ಬೆಳಗ್ಗೆನೇ ತಿಂಡಿ ಟಿಫನ್ ಬಾಕ್ಸ್​ಗೆ ಹಾಕಿಕೊಂಡು ಜನರ ಒಳಿತಿಗಾಗಿ ದುಡಿಯುತ್ತಿದ್ದರೂ ಈ ರೀತಿಯ ಕೆಟ್ಟ ಪದಗಳಿಂದ ಬೈಯ್ಯಿಸಿಕೊಳ್ಳುವುದು ನನಗೆ ಸಾಕಷ್ಟು ನೋವುಂಟು ಮಾಡಿದೆ. ಈ ರೀತಿಯಲ್ಲೂ ಕೂಡ ರಾಜಕಾರಣ ಮಾಡಬೇಕಾ ಎಂದು ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ : ಜಿ.ಟಿ ದೇವೇಗೌಡ - ಸಾ. ರಾ ಮಹೇಶ್ ಗೌಪ್ಯ ಮಾತುಕತೆ : ಹಲವು ವಿಷಯಗಳ ಚರ್ಚೆ ಸಾಧ್ಯತೆ

Last Updated : Aug 4, 2022, 12:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.