ಮೈಸೂರು ವಿವಿ ಈಜುಕೊಳದಲ್ಲಿದ್ದ ನಾಗರಹಾವಿನ ರಕ್ಷಣೆ - swimming pool of the University of Mysore
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಈಜುಕೊಳದಲ್ಲಿದ್ದ ನಾಗರಹಾವನ್ನು ರಕ್ಷಣೆ ಮಾಡಿ, ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಕಾಡಿಗೆ ಬಿಡಲಾಗಿದೆ.ಶಿವರಾತ್ರಿ ಹಿನ್ನಲೆಯಲ್ಲಿ ಈಜುಕೊಳದಲ್ಲಿದ್ದ ನೀರನ್ನು ಖಾಲಿ ಮಾಡಿ, ಸ್ವಚ್ಛಗೊಳಿಸುವಾಗ ನಾಗರಹಾವು ಕಾಣಿಸಿಕೊಂಡಿದೆ. ಕೂಡಲೇ ಅಲ್ಲಿನ ಸಿಬ್ಬಂದಿ ಸ್ನೇಕ್ ಶ್ಯಾಮ್ ಪುತ್ರ ಸ್ನೇಕ್ ಸೂರ್ಯಕೀರ್ತಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಸೂರ್ಯಕೀರ್ತಿ, ನಾಗರಹಾವನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಈಜುಕೊಳಕ್ಕೆ ಈಜುಪಟುಗಳು ಬಾರದಿದ್ದರಿಂದ ಅನಾಹುತ ತಪ್ಪಿದೆ.
ಮೈಸೂರು ವಿವಿ ಈಜುಕೊಳದಲ್ಲಿದ್ದ ನಾಗರಹಾವಿನ ರಕ್ಷಣೆ