ETV Bharat / city

ದಕ್ಷಿಣ ಕಾಶಿಯಲ್ಲಿ ಮುಡಿ ಹರಕೆ ತೀರಿಸುವವರ ಮೇಲೂ ಕೊರೊನಾ ಕರಿ ನೆರಳು

author img

By

Published : Jun 13, 2020, 3:42 PM IST

ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದಲ್ಲಿ ಮುಡಿ ಹರಕೆಗೆ ಅನುಮತಿ ನೀಡುವಂತೆ ನಯನ ಜಯ ಕ್ಷತ್ರಿಯ ಸಂಘದ ಕಾರ್ಯದರ್ಶಿ ಶ್ರೀನಿವಾಸ್ ಅವರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

Problems with hair spreaders
ಮುಡಿ ಹರಕೆ ತೆಗೆಯುವವರಿಗೆ ತೊಂದರೆ

ಮೈಸೂರು: ದಕ್ಷಿಣಕಾಶಿ ನಂಜನಗೂಡಿನಲ್ಲಿ ಭಕ್ತರು ಮುಡಿ ಹರಕೆ ನೀಡುವುದಕ್ಕೆ ನಿರ್ಬಂಧ ವಿಧಿಸಿದ್ದು, ಅದನ್ನೇ ನಂಬಿ ಬದುಕುವವರ ಬದುಕು ಸಂಕಷ್ಟಕ್ಕೆ ಸಿಲುಕಿದೆ.

ರಾಜ್ಯ ಹಾಗೂ ಅನ್ಯ ರಾಜ್ಯಗಳ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ತಮ್ಮ ಹರಕೆ ತೀರಿಸಿ ಕೊಳ್ಳುತ್ತಿದ್ದರು. ಲಾಕ್​ಡೌನ್​ ಜಾರಿಯಾದ ಕಾರಣ ನಂಜನಗೂಡಿನ ನಂಜುಡೇಶ್ವರ ದೇವಸ್ಥಾನವನ್ನು ಮುಚ್ಚಲಾಗಿತ್ತು. ಈಗ ಅದನ್ನು ಸಡಿಲಿಸಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದ್ದರೂ ಹರಕೆಗೆ ಮಾತ್ರ ಅನುಮತಿ ನೀಡಿಲ್ಲ.

ಮುಡಿ ಹರಕೆ ತೆಗೆಯುವವರಿಗೆ ತೊಂದರೆ

ದೇವಸ್ಥಾನಕ್ಕೆ ಬಂದ ಭಕ್ತರು ಕಪಿಲಾ ನದಿಯ ದಡದಲ್ಲಿ ಎಲ್ಲೆಂದರಲ್ಲಿ ತಮ್ಮ ಹರಕೆ ತೀರಿಸಿ ಪೂಜೆ ಸಲ್ಲಿಸಿ ಹೋಗುತ್ತಿದ್ದಾರೆ. ಇದರಿಂದಾಗಿ ಮುಡಿ ತೆಗೆಯುವ ಟೆಂಡರ್ ಪಡೆದ ನಯನ ಜಯ ಕ್ಷತ್ರಿಯ ಸಂಘದ ಸದಸ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ, ನಿಗದಿತ ಸ್ಥಳದಲ್ಲಿ ಹರಕೆ ಮುಡಿ ತೆಗೆಯಲು ಅವಕಾಶ ಮಾಡಿ ಕೊಡಬೇಕು ಎಂದು ಜಿಲ್ಲಾಧಿಕಾರಿಗೆ ಸಂಘದ ಕಾರ್ಯದರ್ಶಿ ಶ್ರೀನಿವಾಸ್ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.