ಮೈಸೂರು: ಮೈಸೂರು ಕಾನೂನು ವಿದ್ಯಾರ್ಥಿನಿಯ ಟ್ವಿಟರ್ ಖಾತೆಯನ್ನು ಪ್ರಧಾನಿ ನರೇಂದ್ರ ಮೋದಿ ಫಾಲೋ ಮಾಡುತ್ತಿದ್ದಾರೆ. ಈ ಬಗ್ಗೆ ವಿದ್ಯಾರ್ಥಿನಿ ಪ್ರಜ್ಞಾ ಕಶ್ಯಪ್ ಫೇಸ್ಬುಕ್ ಹಾಗೂ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ವಿದ್ಯಾ ವಿಕಾಸ್ ಕಾಲೇಜಿನಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿರುವ ಪ್ರಜ್ಞಾ ಕಶ್ಯಪ್ ಎಬಿವಿಪಿ ಸಂಘಟನೆಯ ಕಾರ್ಯಕರ್ತರೂ ಆಗಿದ್ದಾರೆ. 'ಪ್ರಧಾನಿ ನರೇಂದ್ರ ಮೋದಿ ಅವರು ನನ್ನನ್ನು ಟ್ವಿಟರ್ ಖಾತೆಯಲ್ಲಿ ಜನವರಿ 1 ರಿಂದ ಫಾಲೋ ಮಾಡುತ್ತಿದ್ದಾರೆ. ಇದನ್ನು ಪದಗಳಲ್ಲಿ ಹೇಳಲು ಸಾಧ್ಯವಾಗುತ್ತಿಲ್ಲ. ಇದು ಅತ್ಯಂತ ಖುಷಿ ಮತ್ತು ಗೌರವದ ವಿಷಯವಾಗಿದೆ' ಎಂದು ಅವರು ಬರೆದುಕೊಂಡಿದ್ದಾರೆ.
'ಇದಲ್ಲದೇ, ಪ್ರಧಾನಿಯವರ ಈ ನಡೆ ನನ್ನಲ್ಲಿ ಇನ್ನಷ್ಟು ಶಕ್ತಿ, ಪ್ರೇರೇಪಣೆ ತುಂಬಿದೆ. ಅವರಿಗೆ ನನ್ನ ಗುರುತು ಹೇಗೆ ಸಿಕ್ಕಿತು ಎಂಬುದು ಗೊತ್ತಾಗುತ್ತಿಲ್ಲ. ಪ್ರಧಾನಿ ಮೋದಿ ಅವರು ತಮ್ಮ ಖಾತೆಯಲ್ಲಿ ಕೇವಲ 2430 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ. ಅದರಲ್ಲಿ ನನ್ನ ಖಾತೆಯು ಒಂದಾಗಿರುವುದು ಖುಷಿ ತಂದಿದೆ' ಎಂದು ಪ್ರಜ್ಞಾ ತಿಳಿಸಿದ್ದಾರೆ.
ಮೋದಿಯವರಿಗೆ ಟ್ವಿಟರ್ ಖಾತೆಯಲ್ಲಿ 7.4 ಕೋಟಿ ಫಾಲೋವರ್ಸ್ ಇದ್ದಾರೆ.
ಇದನ್ನೂ ಓದಿ: ಹೊಸ ವರ್ಷದಂದು ಗಲ್ವಾನ್ ವ್ಯಾಲಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಭಾರತೀಯ ಸೇನೆ