ಮೈಸೂರು : ನೆತ್ತಿ ಸುಡುವ ಬಿಸಿಲಿನಿಂದ ಪಾರಾಗಲು ಜನರು ಕುಡಿಯಲು ತಣ್ಣನೆಯ ನೀರು ಸಿಕ್ರೆ ಸಾಕಪ್ಪ ಎನ್ನುವಂತಾಗಿದೆ. ನಗರ ನಿವಾಸಿಗಳು ಮಡಿಕೆ ಖರೀದಿಗೆ ಮುಂದಾಗಿದ್ದಾರೆ.
ಜಿಲ್ಲೆಯ ಹಲವೆಡೆ ಕಲ್ಲಂಗಡಿ ಹಣ್ಣು, ಎಳನೀರು, ತಂಪು ಪಾನೀಯಗಳಿಗೆ ಬೇಡಿಕೆ ಇರುವಂತೆ, ಮಡಿಕೆಗಳಿಗೂ ಫುಲ್ ಡಿಮ್ಯಾಂಡ್ ಬಂದಿದೆ. ಫ್ರಿಡ್ಜ್ ನೀರಿಗಿಂತ ಮಡಕೆ ನೀರು ಕುಡಿಯಲು ಆರೋಗ್ಯಕರ ಹಾಗೂ ರುಚಿಕರವಾಗಿದೆ. ಮಡಿಕೆಯ ಮಹತ್ವ ತಿಳಿದಿರುವ ಜನರು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ.
ಉತ್ತರಭಾರತದಿಂದ ಬಂದಿರುವ ಕುಂಬಾರರು ಮೈಸೂರಿನ ಕಲಾಮಂದಿರದ ಮುಂಭಾಗದಲ್ಲಿ ಠಿಕಾಣಿ ಹೂಡಿದ್ದಾರೆ. ಬೇಸಿಗೆ ತಾಪಮಾನ ಹೆಚ್ಚಾದಂತೆ ಮಡಿಕೆಗಳಿಗೆ ಡಿಮ್ಯಾಂಡ್ ಹೆಚ್ಚಾಗುತ್ತಿರುವುದರಿಂದ ಸ್ಥಳದಲ್ಲಿಯೇ ಮಡಕೆಗಳನ್ನು ತಯಾರು ಮಾಡಿ ಮಾರಾಟ ಮಾಡುತ್ತಿದ್ದಾರೆ.
150 ರೂ.ನಿಂದ 1500 ರೂ.ಮೌಲ್ಯದವರೆಗೆ ಮಡಿಕೆಗಳು ದೊರೆಯುತ್ತವೆ. ಬೇಸಿಗೆ ಸಂದರ್ಭದಲ್ಲಿ ಫ್ರಿಡ್ಜ್‌ಗಿಂತ ಮಡಿಕೆಗಳು ನೀರು ಸಾಕಷ್ಟು ತಣ್ಣಗೆ ಇರುತ್ತದೆ. ಅಲ್ಲದೆ ವಿದ್ಯುತ್ ಉಳಿತಾಯಕ್ಕೂ ಮಡಿಕೆ ಒಳ್ಳೆಯ ಉಪಾಯ.